ಬೆಂಗಳೂರು, ಜೂ.15- ಸರ್ವಜನ ಸಂರಕ್ಷಣಾ ವೇದಿಕೆ, ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ, ಸೃಷ್ಟಿ ಮಹಿಳಾ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂಡಳಿ ಸೇರಿದಂತೆ ವಿವಿಧ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಾಳೆ ಕಣ್ಣಿನ ಪರೀಕ್ಷೆ ಹಾಗೂ ವಿಶ್ವ ಪರಿಸರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ನಾಳೆ ಬೆಳಗ್ಗೆ 9 ರಿಂದ 1.30ರ ವರೆಗೆ ಸಿಂಗಾಪುರದ ಆಶ್ರಯ ಬಡಾವಣೆ, ಸಂಗೊಳ್ಳಿ ರಾಯಣ್ಣ ರಸ್ತೆಯಲ್ಲಿರುವ ಕನಕಭವನದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಹಾಗೂ ನೇತ್ರತಜ್ಞ ಡಾ.ಅಪ್ಪಾಜಿಗೌಡ ಅವರ ವಿಜಯ ನೇತ್ರಾಲಯದಲ್ಲಿ ಅಗತ್ಯ ಉಳ್ಳವರಿಗೆ ಶಸ್ತ್ರ ಚಿಕಿತ್ಸೆ ಮಾಡಿ ಔಷಧಿ ಮತ್ತು ಕನ್ನಡಕವನ್ನು ಉಚಿತವಾಗಿ ನೀಡಲಾಗುತ್ತದೆ.
ಶಿಬಿರಕ್ಕೆ ಬರುವವರು ಕಡ್ಡಾಯವಾಗಿ ಆಧಾರ್ ಕಾರ್ಡ್ ಜೆರಾಕ್ಸ್, ಮೊಬೈಲ್ ನಂಬರ್ ಕೊಡಬೇಕು. ಹೆಚ್ಚಿನ ವಿವರಗಳಿಗೆ 9620772369 ಸಂಪರ್ಕಿಸಲು ಕೋರಲಾಗಿದೆ.