ಬೆಂಗಳೂರು, ಜೂ.15- ಹೆಣ್ಣಿಗೆ ಹೆರಿಗೆ ಅನ್ನುವುದು ಮತ್ತೊಂದು ಹೊಸ ಬದುಕಿಗೆ ಮುನ್ನುಡಿ ಬರೆದಂತೆ. ಅದರಲ್ಲೂ ಗರ್ಭದಲ್ಲಿ ಅವಳಿಗಳಿದ್ದರಂತು ಹೆರಿಗೆ ಎಂಬುದೊಂದು ದೊಡ್ಡ ಆಪತ್ತನ್ನೇ ಎದುರಿಸಿ ಗೆದ್ದು ಬಂದಂತೆ.
ಈ ಮಾತು ಹೇಳುವುದಕ್ಕೆ ಕಾರಣ ಇತ್ತೀಚಿಗೆ ಗರ್ಭಿಣಿಯೊಬ್ಬರನ್ನು ತುರ್ತು ಪರಿಸ್ಥಿತಿಯ ಕಾರಣವಾಗಿ ಆಸ್ಪತ್ರೆಗೆ ದಾಖಲಿಸಲಾಯ್ತ. ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು.
ಅವಳಿಗಳಿರುವ 30 ವರ್ಷದ ಆ ಗರ್ಭಿಣಿಗೆ ಆಗ ತಾನೇ 32 ವಾರಗಳು ತುಂಬಿತ್ತು.ಜೊತೆಗೆ ಗರ್ಭಧಾರಣೆಯ ವೇಳೆ ಕಾಣಿಸಿಕೊಳ್ಳುವ ಡಯಾಬಿಟೀಸ್ ಮತ್ತು ಅತೀಯಾದ ತೂಕ ಅಪಾಯದ ಮುನ್ಸೂಚನೆ ನೀಡುತ್ತಿದ್ದವು. ಆದಾಗ್ಗ್ಯೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿ ತಾಯಿ ಹಾಗೂ ಅವಳಿಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲಾಯ್ತು.
ನಿಶಾಂತ ಪ್ರಭು ಅವರ ಪತ್ನಿ ಚೈತ್ರಾ ಅವರೇ ಈ ಒಂದು ಸಮಸ್ಯೆ ಎದುರಿಸಿದ್ದು.ಚೈತ್ರಾ ಅವರ ತುಂಬು ಗರ್ಭಿಣಿಯಾಗಿದ್ದಾಗ ಸುಮಾರು 125ಕೆಜಿ ಇದ್ದರು. ಜತೆಗೆ ಡಯಾಬಿಟೀಸ್ಗೂ ಒಳಗಾಗಿದ್ದರು.
ರೈನ್ ಬೋ ಮಕ್ಕಳ ಆಸ್ಪತ್ರೆಯ ಡಾ.ನುಪೂರ್ ಶರ್ಮಾ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಿದ್ದರು. ಡಾ. ನುಪೂರ್, ಅನಸ್ತೇಷಿಯಾ ತಜ್ಞ ಡಾ.ಮಹೇಶ ಮತ್ತು ನಿಯೋನಾಟಲಜಿಸ್ಟ್ ಡಾ.ಸರವಣನ್ ಅವರು ನೀಡಿದ ಚಿಕಿತ್ಸೆಯಿಂದ ಸದ್ಯಕ್ಕೆ ಚೈತ್ರಾ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದು ಆರೋಗ್ಯವಾಗಿವೆ.