ಬೆಂಗಳೂರು, ಜೂ. 15- ನೂತನ ಸಚಿವರಾದ ಆರ್.ಶಂಕರ್ ಹಾಗೂ ಎಸ್.ನಾಗೇಶ್ ಅವರಿಗೆ ಖಾತೆ ಹಂಚಿಕೆ ವಿಳಂಬವಾಗುವ ಸಾಧ್ಯತೆಗಳಿವೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದೆಹಲಿ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ ಇಂದು ಖಾತೆ ಹಂಚಿಕೆಯಾಗುವ ಸಾಧ್ಯತೆಗಳಿಲ್ಲ ಎಂದು ಉನ್ನತ ತಿಳಿಸಿವೆ.
ನಿನ್ನೆಯಷ್ಟೆ ಪಕ್ಷೇತರ ಶಾಸಕರಾದ ಆರ್.ಶಂಕರ ಹಾಗೂ ಎಸ್.ನಾಗೇಶ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದರು.
ನಿನ್ನೆ ರಾತ್ರಿಯೇ ಕುಮಾರಸ್ವಾಮಿ ದೆಹಲಿ ಪ್ರವಾಸ ಕೈಗೊಂಡರು ಅವರು ವಾಪಸಾದ ನಂತರ ಖಾತೆ ಹಂಚಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಆರ್.ಶಂಕರ್‍ಗೆ ಪೌರಾಡಳಿತ ಖಾತೆ, ನಾಗೇಶ್ ಅವರಿಗೆ ಪ್ರಾಥಮಿಕ ಮತ್ತು ಫ್ರೌಡಶಿಕ್ಷಣ ಖಾತೆ ನೀಡುವ ಸಾಧ್ಯತೆಗಳಿವೆ. ಒಂದು ವೇಳೆ ಖಾತೆ ಹಂಚಿಕೆಯೇ ವ್ಯತ್ಯಾಸವಾದರೂ ಆಗಬಹುದು.