ಬೆಂಗಳೂರು, ಜೂ.15- ನಿಯಮಗಳನ್ನು ನಿರ್ಲಕ್ಷಿಸಿ ಅವೈಜ್ಞಾನಿಕವಾಗಿ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ಹೊರಟಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ವೇದಿಕೆ ಪರವಾಗಿ ಮಾತನಾಡಿದ ರಂಗಕರ್ಮಿ ಪ್ರಕಾಶ್ ಬೆಳವಾಡಿ ಅವರು ಕೊಟ್ಟ ಮಾತಿಗೆ ಮುಖ್ಯಮಂತ್ರಿಗಳು ತಪ್ಪಿರುವುದರಿಂದ ಪ್ರತಿಭಟನೆ ಮಾಡುವುದು ಅನಿವಾರ್ಯ ಎಂದರು.
ಎಲಿವೇಟೆಡ್ ಕಾಮಗಾರಿ ಒಟ್ಟು 103ಕಿ.ಮೀ ಉದ್ದದ ಯೋಜನೆ ಇದನ್ನು ನಿರ್ಮಿಸಲು 16 ರಿಂದ 20 ವರ್ಷಗಳು ಬೇಕಾಗುತ್ತದೆ, ಕಾನೂನು ಉಲ್ಲಂಘಿಸಿ ಈ ಕಾಮಗಾರಿಯನ್ನು ಮುಂದುವರಿಸುತ್ತಿರುವುದು ಖಂಡನೀಯ ಎಂದರು.
ಎಲಿವೇಟೆಡ್ ರಸ್ತೆಗಳ ಬಗ್ಗೆ ನಮ್ಮ ನಾಗರಿಕ ಸಂಘಟನೆಗಳಲ್ಲಿ ಈಗಲೂ ಅನುಮಾನಗಳಿವೆ. ಮುಖ್ಯಮಂತ್ರಿಗಳು ತಾವು ಭರವಸೆ ಇತ್ತಂತೆ ಸಮಾಲೋಚನೆಯ ಸಭೆಯನ್ನು ಕರೆದು ಮುಂದಿನ ಕ್ರಮ ಕೈಗೊಳ್ಳಬೇಕು ಹಾಗೂ ಅಲ್ಲಿಯವರೆಗೊ ಈ ಯೋಜನೆಯನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಶೇ. 90ರಷ್ಟು ಜನರಿಗೆ ಈ ಯೋಜನೆ ಬಗ್ಗೆ ತಿಳಿದಿಲ್ಲ ಹೈಕೋರ್ಟ್ ತಡೆ ಇದ್ದರೂ, ಕೆಆರ್ಡಿಸಿಎಲ್ ಯೋಜನೆಯನ್ನು ಪ್ರಮೋಟ್ ಮಾಡುತ್ತಿರುವುದು ತಪ್ಪುಅದನ್ನು ಕೂಡಲೇ ನಿಲ್ಲಿಸಬೇಕು ಎಂದು ಹೇಳಿದರು.
ಕಾನೂನು ಸಲಹೆಗಾರ ಲಿಯೋ, ಶಯೀಂ ಪಾಷ, ಅಪಾರ್ಟ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಮುರಳಿಧರ್ ಮತ್ತಿತರರು ಇದ್ದರು.