ಬೆಂಗಳೂರು, ಜೂ. 15- ಪಾಲಿಕೆಯ ಆದಾಯಕ್ಕೆ ಸೀಮಿತವಾಗಿ ಬಜೆಟ್ ಮಂಡನೆ ಮಾಡುವಂತೆ ಬಿಬಿಎಂಪಿಗೆ ರಾಜ್ಯ ಆರ್ಥಿಕ ಹಣಕಾಸು ಇಲಾಖೆ ವಾರ್ನಿಂಗ್ ನೀಡಿದೆ.
ಈ ಹಿಂದೆ ಅವಾಸ್ತವಿಕ ಬಜೆಟ್ ಮಂಡನೆ ಮಾಡಿದ್ದ ರ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಪತ್ರ ಬರೆದಿದ್ದರು.
ಅವಾಸ್ತವಿಕ ಬಜೆಟ್ನಿಂದ ಆರ್ಥಿಕ ಹೊರೆಯಾಗುತ್ತಿದೆ.ಈ ಹಿನ್ನೆಲೆಯಲ್ಲಿ 13 ಸಾವಿರ ಕೋಟಿ ಬಜೆಟ್ ಮಂಡನೆಗೆ ಅವಕಾಶ ನೀಡಬಾರದು ಎಂದು ಆಯುಕ್ತರು ಮನವಿ ಸಲ್ಲಿಸಿದ್ದರು.
ಆಯುಕ್ತರ ಮನವಿ ಪರಿಗಣಿಸಿದ ಹಣಕಾಸು ಇಲಾಖೆ, ಫಿಸಿಕಲ್ ರೆಸ್ಪಾನ್ಸಿಬಲ್ ಆ್ಯಕ್ಟ್ ಜಾರಿಗೆ ಅನುಮೋದನೆ ನೀಡಿ. ಇನ್ನು ಮುಂದೆ ಆದಾಯಕ್ಕೆ ತಕ್ಕಂತೆ ಬಜೆಟ್ ಮಂಡನೆ ಮಾಡಬೇಕು ಎಂದು ಸೂಚಿಸಿದೆ.