![congress-flag-a](http://kannada.vartamitra.com/wp-content/uploads/2019/01/congress-flag-a-678x355.jpg)
ಬೆಂಗಳೂರು,ಜೂ.14- ಸಚಿವ ಸಂಪುಟಕ್ಕೆ ಸೇರ್ಪಡೆಯಾಗುತ್ತಿರುವ ರಾಣೆಬೆನ್ನೂರಿನ ಶಾಸಕ ಶಂಕರ್ ಅವರು ಇಂದು ಕೆಪಿಜೆಪಿಯನ್ನು ಕಾಂಗ್ರೆಸ್ ಜತೆ ವಿಲೀನಗೊಳಿಸಿದ್ದಾರೆ.
ವಿಧಾನಸಭೆ ಚುನಾವಣೆ ಮೊದಲು ರಿಯಲ್ಸ್ಟಾರ್ ಉಪೇಂದ್ರ ಮುನ್ನೆಡಿಸಿದ್ದ ಕರ್ನಾಟಕ ಪ್ರಜ್ಞಾವಂತ ಜನತಾಪಾರ್ಟಿಯಿಂದ ಶಂಕರ್ ಅವರು ಆಯ್ಕೆ ಯಾಗಿದ್ದ ಏಕೈಕ ಶಾಸಕ.
ಸಚಿವ ಸಂಪುಟ ಸೇರ್ಪಡೆಯಾಗುವುದಾದರೆ ಕಾಂಗ್ರೆಸ್ ಸಹಸದಸ್ಯರಾಗಿರಬೇಕೆಂದು ಷರತ್ತು ವಿಧಿಸಲಾಗಿತ್ತು. ಹಾಗಾಗಿ ಇಂದು ಶಂಕರ್ ಅವರು ತಾವು ಆಯ್ಕೆಯಾಗಿದ್ದ ಪಕ್ಷವನ್ನು ಕಾಂಗ್ರೆಸ್ ಜತೆ ವಿಲೀನಗೊಳಿಸಿದ್ದಾರೆ.
ಈ ಕುರಿತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಅಧಿಕೃತ ಪತ್ರವನ್ನು ನೀಡಿದ್ದಾರೆ.