![khandre](http://kannada.vartamitra.com/wp-content/uploads/2018/07/khandre-457x381.jpg)
ಬೆಂಗಳೂರು,ಜೂ.14-ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಏಕಮುಖ ತೀರ್ಮಾನವಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.
ರಾಜಭವನದಲ್ಲಿ ಇಂದು ನಡೆದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷೇತರ ಶಾಸಕರಿಗೆ ಸ್ಥಾನಮಾನ ಕೊಡುವುದರಲ್ಲಿ ಯಾವ ತಪ್ಪಿದೆ. ನಮ್ಮೊಳಗೆ ಯಾವ ಅಸಮಾಧಾನವೂ ಇಲ್ಲ.ಸಚಿವ ಸ್ಥಾನ ಸಿಕ್ಕರೆ ಮಾತ್ರ ಮರ್ಯಾದೆ ಸಿಗುತ್ತದೆಯೇ ಎಂದು ಮರುಪ್ರಶ್ನೆ ಹಾಕಿದರು.
ಎಐಸಿಸಿ ಅಧ್ಯಕ್ಷ ರಾಹಲ್ ಗಾಂಧಿ ಅವರು ಹೇಳಿದಂತೆ ನಾವು ನಡೆದುಕೊಳ್ಳುತ್ತಿದ್ದೇವೆ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಕೆಲಸ ಮಾಡುತ್ತೇವೆ. ಪಕ್ಷ ಉಳಿಸಲು ಮತ್ತು ಸರ್ಕಾರದ ಸ್ಥಿರತೆ ಕಾಪಾಡಲು ಈ ನಿರ್ಧಾರವನ್ನು ಉಭಯ ಪಕ್ಷಗಳು ಸಮಾಲೋಚಿಸಿ ಕೈಗೊಂಡಿವೆ ಎಂದರು.