ಬೆಂಗಳೂರು, ಜೂ.12- ಬೇಕಾಬಿಟ್ಟಿ ಪ್ರಶಸ್ತಿ ನೀಡಿಕೆಯನ್ನು ಕೈ ಬಿಟ್ಟು ಕೇವಲ 100 ಸಾಧಕರಿಗೆ ಮಾತ್ರ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡುವ ಉದ್ದೇಶದಿಂದ ತಜ್ಞರ ಆಯ್ಕೆ ಸಮಿತಿ ರಚಿಸಿರುವ ಮೇಯರ್ ಗಂಗಾಂಬಿಕೆ ಅವರ ನಿರ್ಧಾರವನ್ನು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜ್ ಸ್ವಾಗತಿಸಿದ್ದಾರೆ.
ಈ ಕುರಿತಂತೆ ಮೇಯರ್ ಗಂಗಾಂಬಿಕೆ ಅವರಿಗೆ ಪತ್ರ ಬರೆದಿರುವ ಶಿವರಾಜ್ ಅವರು ಪ್ರಶಸ್ತಿ ಪುರಸ್ಕøತರಿಗೆ ಗೌರವ ಹಾಗೂ ಮೌಲ್ಯಯುತವಾಗಿ ಪ್ರಶಸ್ತಿ ಪ್ರದಾನ ಮಾಡಲು ಮನವಿ ಮಾಡಿಕೊಂಡಿದ್ದಾರೆ.
ಕಳೆದ ಸಾಲಿನಲ್ಲಿ ಕೆಂಪೇಗೌಡ ಪ್ರಶಸ್ತಿಗೆ ಗುರುತಿಸಿದ ಸಾಧಕರು ಹಾಗೂ ಕಾರ್ಯಕ್ರಮಗಳ ಬಗ್ಗೆ ವಿವಿಧ ರೀತಿಯ ಟೀಕೆ ಟಿಪ್ಪಣಿಗಳು ವ್ಯಕ್ತವಾಗಿದ್ದವು.ಇದರಿಂದ ಬಿಬಿಎಂಪಿ ಗೌರವಕ್ಕೆ ಕುಂದುಂಟಾಗಿತ್ತು.
ಪ್ರಶಸ್ತಿ ಪುರಸ್ಕøತರನ್ನು ಗುರುತಿಸುವಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತಿದ್ದು , ಇಂತಹ ಸಮಸ್ಯೆಗಳನ್ನು ತಪ್ಪಿಸುವ ಉದ್ದೇಶ ಹಾಗೂ ಕೆಂಪೇಗೌಡ ಪ್ರಶಸ್ತಿಯ ಮೌಲ್ಯ ಹೆಚ್ಚಿಸುವ ಉದ್ದೇಶದಿಂದ ಭವಿಷ್ಯದಲ್ಲಿ ಪುರಸ್ಕøತರ ಆಯ್ಕೆಗೆ ಮಾರ್ಗಸೂಚಿ ರಚಿಸುವುದು. ಅದರ ಮೂಲಕವೇ ಅರ್ಹರನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕೆಂಬ ಮಾತುಗಳು ಕೇಳಿ ಬಂದಿದ್ದವು.
ಹೀಗಾಗಿ ನಾನು ಆಡಳಿತ ಪಕ್ಷದ ನಾಯಕನಾಗಿದ್ದ ಸಂದರ್ಭದಲ್ಲಿ ಈ ಕುರಿತಂತೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಚರ್ಚಿಸಿ ಮಾರ್ಗಸೂಚಿ ರಚಿಸುವಂತೆ ಮನವಿ ಮಾಡಿಕೊಂಡಿದ್ದೆ.
ಹೀಗಾಗಿ ಪ್ರಸ್ತುತ ಬಿಬಿಎಂಪಿಗೆ 70 ವರ್ಷಗಳು ಸಲ್ಲುತ್ತಿರುವ ಸಂದರ್ಭದಲ್ಲಿ ಕೇವಲ 100 ಮಂದಿ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ನೀಡಲು ತೀರ್ಮಾನಿಸಿ ಪುರಸ್ಕøತರ ಆಯ್ಕೆಗೆ ವಿವಿಧ ಕ್ಷೇತ್ರಗಳಲ್ಲಿನ ತಜ್ಞರ ಸಮಿತಿ ನೇಮಕ ಮಾಡಲು ತೀರ್ಮಾನಿಸಿರುವ ನಿಮ್ಮ ಕ್ರಮ ಪ್ರಶಂಸನೀಯ ಎಂದು ಶಿವರಾಜ್ ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.