ಬೆಂಗಳೂರು, ಜೂ.12-ರಾಜ್ಯ ಸರಕಾರ ಕಬ್ಬು ಬೆಳೆಗಾರರಿಗೆ ಬಾಕಿ ಹಣ ನೀಡುವುದು ಹಾಗೂ ಕಬ್ಬಿನ ವೈಜ್ಞಾನಿಕ ಬೆಲೆಯನ್ನು ಇನ್ನೂ ಒಂದು ವಾರದೊಳಗೆ ನಿಗದಿ ಪಡಿಸದಿದ್ದರೆ ಕಾರ್ಖಾನೆಗಳಿಗೆ ಬೀಗ ಜಡಿಯುವ ಚಳವಳಿ ಹಮ್ಮಿಕೊಳ್ಳ ಲಾಗುವುದು ಎಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಶಿವನಂದ ಗುರಮಠ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013-14 ರಿಂದ ಇಲ್ಲಿಯವರೆಗೆ ಎಫ್ಆರ್ಪಿ ಬೆಲೆಗೆ ಸೇರಿಸಿ ರಾಜ್ಯದ ಎಸ್ಎಪಿ ದರವನ್ನು ನಿಗದಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.
ಕಳೆದ ವರ್ಷದಿಂದ ಕಬ್ಬುಬೆಳೆಗಾರರು ಬಾಕಿ ವಸೂಲಿಗಾಗಿ ಉಗ್ರಹೋರಾಟ ಮಾಡಿದರೂ ಸಹ ಇಲ್ಲಿಯವರಿಗೆ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸರ್ಕಾರಕ್ಕೆ ಒಂದುವಾರ ಗಡುವು ನೀಡಿದ್ದು, ಇಷ್ಟರೊಳಗೆ ಬಾಕಿ ಹಣ ನೀಡದಿದ್ದರೆ ಸಕ್ಕರೆ ಕಾರ್ಖಾನೆಗಳಿಗೆ ಬೀಗ ಜಡಿಯಲಾಗುವುದು ಎಂದು ಎಚ್ಚರಿಸಿದರು.