ಮತ್ತೊಂದು ಕಂಪನಿ ವಂಚನೆ ಪ್ರಕರಣ

ಬೆಂಗಳೂರು,ಜೂ.12- ಐಎಂಎ ಜುವೆಲ್ಸ್ ಪ್ರಕರಣ ನಮ್ಮ ಕಣ್ಣಮುಂದೆ ಇರುವಾಗಲೇ ಇದೀಗ ಮತ್ತೊಂದು ಕಂಪನಿ ವಂಚನೆ ಪ್ರಕರಣದ ವಿರುದ್ಧ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಆರಾಧ್ಯ ಮಲ್ಟಿ ಸರ್ವೀಸ್ ಪ್ರೈ.ಲಿ., ಸಂಸ್ಥೆ ವಿರುದ್ಧ ಉದ್ಯೋಗಸ್ಥ ಮಹಿಳೆ ರೂಪಾ ಎಂಬುವರು ದೂರು ನೀಡಿದ್ದಾರೆ.

ಈ ಸಂಸ್ಥೆಯು ಮೆಡಿಕಲ್‍ಶಾಪ್, ರಿಯಲ್ ಎಸ್ಟೇಟ್, ಶಾಪಿಂಗ್ ಮಾಲ್ ತೋರಿಸಿ 45 ದಿನಕ್ಕೆ ಶೇ.9ರಷ್ಟು ಲಾಭಾಂಶ ನೀಡುವುದಾಗಿ ಹೇಳಿ ನಂಬಿಸಿದ್ದಾರೆ.

ಈ ಕಂಪನಿ ನಂಬಿ 50 ಲಕ್ಷ ರೂ. ಹೂಡಿಕೆ ಮಾಡುತ್ತಿದ್ದೇನೆಂದು ರೂಪಾ ದೂರಿನಲ್ಲಿ ತಿಳಿಸಿದ್ದಾರೆ.

ಕಂಪನಿ ವಿರುದ್ಧ ರೂಪಾ ಅವರು ದೂರು ನೀಡಲು ಮುಂದಾಗುತ್ತಿದ್ದಂತೆ ನಿರ್ದೇಶಕರು ರಾಜಿಗೆ ಮುಂದಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ