ಬೆಂಗಳೂರು, ಜೂ.11-ಐನೂರು ಕೋಟಿ ದೋಖಾ ಮಾಡಿರುವ ಐಎಂಎ ಜ್ಯುವೆಲ್ಸ್‍ನಲ್ಲಿ ಕೆಲ ಪಾಲಿಕೆ ಸದಸ್ಯರು ಹಣ ಹೂಡಿಕೆ ಮಾಡಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಬಿಬಿಎಂಪಿಯ 198 ಸದಸ್ಯರಲ್ಲಿ ಸುಮಾರು 20 ಮಂದಿ ಅಲ್ಪಸಂಖ್ಯಾತ ಸದಸ್ಯರಿದ್ದಾರೆ. ಅವರುಗಳು ಐಎಂಎ ಜ್ಯುವೆಲ್ಸ್‍ನಲ್ಲಿ ಹಣ ಹೂಡಿರುವ ಬಗ್ಗೆ ಗುಮಾನಿ ಇದೆ.
ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್, ಸದಸ್ಯರಾದ ಮಹಮ್ಮದ್ ರಿಜ್ವಾನ್, ಅಬ್ದುಲ್ ಜಾಕೀರ್, ಇಮ್ರಾನ್ ಪಾಷ ಸೇರಿದಂತೆ ಹಲವರು ಮುಸ್ಲಿಂ ಸದಸ್ಯರಿದ್ದಾರೆ.ಆದರೆ ಈವರೆಗೆ ಯಾರೂ ಐಎಂಎನಲ್ಲಿ ತಮ್ಮ ಹಣ ಇದೆ ಎಂದು ಹೇಳಿಕೊಂಡಿಲ್ಲ, ದೂರನ್ನೂ ಸಹ ನೀಡಿಲ್ಲ.
ಆದರೆ ಇಂದು ಸಂಜೆ ಫ್ರೇಸರ್‍ಟೌನ್‍ನಲ್ಲಿ ಪಾಲಿಕೆಯ ಅಲ್ಪಸಂಖ್ಯಾತ ಸದಸ್ಯರು ಸಭೆ ಹಮ್ಮಿಕೊಂಡಿದ್ದಾರೆ. ಐಎಂಎನಲ್ಲಿ ಯಾರ್ಯಾರು ಎಷ್ಟೆಷ್ಟು ಹಣ ಹೂಡಿಕೆ ಮಾಡಿದ್ದಾರೆಯೇ? ಅಥವಾ ಮಾಡಿಲ್ಲವೇ?ಒಂದು ವೇಳೆ ಹಣ ಹೂಡಿಕೆ ಮಾಡಿದ್ದರೆ ವಾಪಸ್ ಪಡೆಯುವ ಬಗೆ ಹೇಗೆ? ಈ ಬಗ್ಗೆ ದೂರು ನೀಡಬೇಕೇ ಬೇಡವೇ ಎಂಬುದರ ಬಗ್ಗೆ ಸಭೆಯಲ್ಲಿ ಗಹನವಾಗಿ ಚರ್ಚಿಸಲು ತೀರ್ಮಾನಿಸಿದ್ದಾರೆ.
ಸಭೆ ನಡೆದ ನಂತರ ಯಾವ್ಯಾವ ಸದಸ್ಯರು ಎಷ್ಟೆಷ್ಟು ಹಣ ಹೂಡಿಕೆ ಮಾಡಿದ್ದರು ಎಂಬುದು ಗೊತ್ತಾಗಲಿದೆ.