ಬೆಂಗಳೂರು, ಜೂ.10-ಫ್ಯೂಚರ ಜನರಾಲಿ ಇಂಡಿಯಾ ಇನ್ಸೂರೆನ್ಸ್ ಕಂಪೆನಿ ಎಂಬುದು ಫ್ಯೂಚರ್ ಗ್ರೂಪ್ ಹಾಗೂ ಜಾಗತಿಕ ವಿಮೆ ಕಂಪೆನಿ ಜನರಾಲಿಯ ಜಂಟಿ ಸಂಸ್ಥೆಯಾಗಿದ್ದು, ರಾಜ್ಯದ 9ಜಿಲ್ಲೆಗಳಲ್ಲಿ ಜಾಗೃತಿ ಶಿಬಿರಗಳನ್ನು ಆಯೋಜಿಸಿದೆ.
ಸಾಲ ಪಡೆದ ಮತ್ತು ಸಾಲ ಪಡೆದಿಲ್ಲದ ರೈತರಿಗೆ ಪ್ರಧಾನಮಂತ್ರಿ ಫಸಲ್ ವಿಮೆ ಯೋಜನೆಯ (ಪಿಎಂಎಫ್ಬಿವೈ)ಅನ್ನು ಅನುಷ್ಠಾನಗೊಳಿಸಲು ಎಫ್ಜಿಐಐಅನ್ನು ರಾಜ್ಯ ಸರ್ಕಾರ ದೃಢೀಕರಿಸಿದೆ.
ಕೃಷಿ ಕಮಿಷನರ್ ಬ್ರಿಜೇಶ್ ದೀಕ್ಷಿತ್ ಮತ್ತು ಕರ್ನಾಟಕ ಸರ್ಕಾರದ ಕೃಷಿ ನಿರ್ದೇಶಕ ಬಿ.ವೈ.ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಿಎಂಬಿಎಫ್ವೈ ಸಮಗ್ರ ವಿಮೆ ಕವರ್ ಅನ್ನು ಹೊಂದಿದ್ದು, ರೈತರಿಗೆ ಬೆಳೆ ಅವಧಿಯಲ್ಲಿ ಯಾವುದೇ ಅನಿರೀಕ್ಷಿತ ಸಂಗತಿಯಿಂದಾಗಿ ಉಂಟಾಗುವ ಬೆಳೆ ನಷ್ಟ ಹಾಗೂ ಹಾನಿಗೆ ರಕ್ಷಣೆಯನ್ನು ಒದಗಿಸುತ್ತದೆ ಎಂದರು.
ನೃತ್ಯ ಹಾಗೂ ಬೀದಿ ನಾಟಕಗಳಂತಹ ಚಟುವಟಿಕೆಗಳನ್ನು ಪಿಎಂಎಫ್ಬಿವೈ ಪ್ರಚಾರಕ್ಕಾಗಿ ಗ್ರಾಮಗಳಲ್ಲಿ ನಡೆಸಲಾಗುತ್ತದೆ.ಪಿಎಂಎಫ್ಬಿವೈ ಪ್ರಾಮುಖ್ಯತೆಯ ಬಗ್ಗೆ ಬೀದಿ ನಾಟಕಗಳಲ್ಲಿ ವಿವರಿಸಲಾಗುತ್ತದೆ ಎಂದು ಹೇಳಿದರು.
ಬೆಂಗಳೂರಿನ ಕೃಷಿ ಇಲಾಖೆಯಿಂದ ಸಂಬಂಧಿತ ಜಿಲ್ಲೆಗಳಿಗೆ ತೆರಳಿದ್ದು, 9 ಜಿಲ್ಲೆಗಳ ವಿವಿಧ ಗ್ರಾಮಗಳಲ್ಲಿ ಸಂಚಾರ ಮಾಡಲಿವೆ ಎಂದು ಶ್ರೀನಿವಾಸ್ ತಿಳಿಸಿದರು.