ಒವೆಲ್ ಅಂಗಳದಲ್ಲಿ ಇಂದು ಇಂಡೋ-ಆಸಿಸ್ ಫೈಟ್..! ಬದ್ಧ ವೈರಿಗಳ ನಡುವೆ ಹೈವೋಲ್ಟೇಜ್ ಮ್ಯಾಚ್..!

ಇಡೀ ಕ್ರಿಕೆಟ್ ಜಗತ್ತೆ ಕಾತರದಿಂದ ಎದುರು ನೋಡುತ್ತಿರೋ ಇಂಡೋ -ಆಸಿಸ್ ಫೈಟ್ಗೆ ಕೌಂಟ್ ಡೌನ್ ಶುರುವಾಗಿದೆ. ವಿಶ್ವ ಕ್ರಿಕೆಟ್ನಲ್ಲಿ ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿರುವ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳು ಈ ಹಿಂದೆ ಮದಗಜಗಳಂತೆ ರಣಾಂಗಣದಲ್ಲಿ ಹೋರಾಡಿವೆ.
ಕ್ರಿಕೆಟ್ ಜಗತ್ತಿನಲ್ಲಿ ಇಂಡೋ -ಆಸಿಸ್ ಕದನ ಎಂದರೆ ಅದು ಯುದ್ಧಭೂಮಿಯಲ್ಲಿ ವೀರಾಸೇನಾನಿಗಳು ಹೋರಾಡಿದಂತೆ. ಈ ಕಾರಣಕ್ಕಾಗಿ ಇಂಡೋ – ಆಸಿಸ್ ಕದನವನ್ನ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ನೋಡ್ತಾರೆ. ಇದೀಗ ವಿಶ್ವ ಯುದ್ದಲ್ಲಿ ಇಂಡೋ- ಆಸಿಸ್ ತಂಡಗಳು ಮುಖಾಮುಖಿಳಿಯಾಗುತ್ತಿವೆ.
ಸತತ 2ನೇ ಗೆಲುವಿನ ವಿಶ್ವಾಸದಲ್ಲಿ ಬ್ಲೂ ಬಾಯ್ಸ್..!
ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಗೆದ್ದ ಉತ್ಸಾಹದಲ್ಲಿರುವ ಟೀಮ್ ಇಂಡಿಯಾ, ಆ್ಯರಾನ್ ಪಿಂಚ್ ನೇತೃತ್ವದ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸುವ ಆತ್ಮವಿಶ್ವಾಸದಲ್ಲಿದೆ. ಆದ್ರೆ, ಕಾಂಗರೂಗಳ ಬಲಿಷ್ಠ ಬೌಲಿಂಗ್ ಪಡೆ ಮುಂದೆ ಟೀಮ್ ಇಂಡಿಯಾ ಗೆಲುವಿನ ಕನಸು ನನಸಾಗುವುದು ಸುಲಭದ ಮಾತಲ್ಲ.. ಹೀಗಾಗಿ ಆಫ್ರಿಕಾ ವಿರುದ್ಧ ಕೈಕೊಟ್ಟಿದ್ದ ಶಿಖರ್ ಧವನ್, ರೋಹಿತ್ ಜೊತೆಗೂಡಿ ಡಿಸೇಂಟ್ ಓಪನಿಂಗ್ ನೀಡಬೇಕಾದ ಜವಾಬ್ದಾರಿಯಿದೆ.. ಅಲ್ದೇ ನಾಯಕ ವಿರಾಟ್ ಕೊಹ್ಲಿಯೂ ನಾಯಕನ ಆಟವಾಡಬೇಕಿದೆ.. ಕನ್ನಡಿಗ ಕೆ.ಎಲ್.ರಾಹುಲ್ ವಿಕೆಟ್ ಕಾಯ್ದುಕೊಳ್ಳುವುದರ ಜೊತೆಗೆ ರನ್ ಗಳಿಕೆಗೆ ವೇಗ ನೀಡಬೇಕು. ಸ್ಲಾಗ್ ಓವರ್ಗಳಲ್ಲಿ ಧೋನಿ-ಹಾರ್ದಿಕ್ ಪಾಂಡ್ಯಾರ ಜುಗಲ್ಬಂದಿ ಮೋಸ್ಟ್ ಇಂಪಾರ್ಟ್ಟೆಂಟ್ ಆಗಿದೆ. ಹೀಗಾಗಿ ಧೋನಿ-ಪಾಂಡ್ಯಾ ಅಬ್ಬರಿಸಿದ್ರೆ ಎದುರಾಳಿ ತಂಡ ಪಲ್ಟಿ ಒಡೆಯೋದು ಗ್ಯಾರಂಟಿ..
ಇನ್ನೂ ಟೀಮ್ ಇಂಡಿಯಾದ ಬೌಲಿಂಗ್ ಡಿಪಾರ್ಟ್ಮೆಂಟ್ ಬಲಿಷ್ಠವಾಗಿದ್ದು, ದಿಗ್ಗಜ ಬ್ಯಾಟ್ಸ್ಮನ್ಸ್ಗಳಿಗೆ ಕಾಡಬಲ್ಲ ತಾಕತ್ತು ಹೊಂದಿದೆ.. ಈಗಾಗಲೇ ಸೌತ್ ಆಫ್ರಿಕಾ ವಿರುದ್ದ ಕೊಹ್ಲಿ ಸೈನ್ಯದ ಬೌಲರ್ಗಳು0 ತಮ್ಮ ತಾಕತ್ತನ್ನ ತೋರಿಸಿ ಕೊಟ್ಟಿದ್ದಾರೆ. ಹೀಗಾಗಿಯೇ ಇಂದಿನ ಮ್ಯಾಚ್ನಲ್ಲಿ ಬೂಮ್ರಾ ಬೆಂಕಿ ಚೆಂಡು, ಭುವನೇಶ್ವರ್ ಕುಮಾರ್ ಸ್ವಿಂಗ್ ಕಮಾಲ್, ಕುಲ್-ಚಾ ಜೋಡಿಯ ಜಾದೂ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದೆ ಕುತೂಹಲಕ್ಕೆ ಕಾರಣವಾಗಿದೆ…
ವಿಶ್ವಕಪ್ನಲ್ಲಿ ಇಂಡೋ-ಆಸೀಸ್
ವಿಶ್ವಕಪ್ನಲ್ಲಿ ಇದುವೆರೆಗೂ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 11 ಬಾರಿ ಮುಖಾಮುಖಿಯಾಗಿದ್ದು, 3 ಪಂದ್ಯಗಳಲ್ಲಿ ಮಾತ್ರ ಟೀಮ್ ಇಂಡಿಯಾ ಗೆದ್ದಿದೆ..ಇನ್ನುಳಿದ 8 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆದ್ದಿದೆ.
ಹ್ಯಾಟ್ರಿಕ್ ಗೆಲುವಿನ ಮೇಲೆ ಫಿಂಚ್ ಪಡೆಯ ಕಣ್ಣು..!
ಆಫ್ಘಾನಿಸ್ತಾನ, ವೆಸ್ಟ್ ಇಂಡೀಸ್ ವಿರುದ್ಧ ಸತತ 2 ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ, ಬ್ಲೂ ಬಾಯ್ಸ್ ವಿರುದ್ಧ ಗೆದ್ದು ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದೆ.. ಇನ್ನೂ ವಿಂಡೀಸ್ ವಿರುದ್ಧ ವೈಫಲ್ಯ ಅನುಭವಿಸಿದ್ದ ಆಸಿಸ್ ಬ್ಯಾಟ್ಸ್ಮನ್ಗಳು ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಫಾರ್ಮ್ಗೆ ಮರಳಿರುವ ಸ್ಟೀವ್ ಸ್ಮಿತ್ ಟೀಂ ಇಂಡಿಯಾ ಬೌಲರ್ಸ್ಗಳೆದುರು ಅಗ್ನಿ ಪರೀಕ್ಷೆ ಎದುರಿಸಲಿದ್ದಾರೆ. 8ನೇ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಕೌಲ್ಟರ್ ನೈಲ್ ಮತ್ತೆ ಪಂದ್ಯದ ದಿಕ್ಕನ್ನೇ ಬದಲಿಸಬಲ್ಲರು.. ಇನ್ನೂ ಮಿಶೆಲ್ ಸ್ಟಾರ್ಕ್, ಪಾಟ್ ಕಮಿಂಗ್ಸ್ರಂಥಹ ಘಾತಕ ವೇಗಿಗಳು ಆಸಿಸ್ ತಂಡದಲ್ಲಿದ್ದಾರೆ. ಜೊತೆಗೆ ಆಲ್ರೌಂಡರ್ಗಳಾದ ಕೌಲ್ಟರ್ ನೈಲ್, ಸ್ಟೋಯ್ನಿಸ್ ಸಹ ಉತ್ತಮ ದಾಳಿ ಸಂಘಟಿಸಬಲ್ಲರು.. ಜೊತೆಗೆ ಎದುರಾಳಿ ರನ್ ದಾಹಕ್ಕೂ ಕಡಿವಾಣ ಹಾಕಬಲ್ಲರು.. ಹೀಗಾಗಿ ಬ್ಲೂಬಾಯ್ಸ್ ಹೇಗೆ ಆಸಿಸ್ ಬೌಲರ್ಗಳಿಗೆ ಉತ್ತರ ನೀಡ್ತಾರೆ ಕಾದು ನೋಡಬೇಕಿದೆ..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ