ಬೆಂಗಳೂರು, ಜೂ.9-ಸಂಶೋಧನೆ ಎನ್ನುವುದು ಒಂದು ಮಹಾನ್ ತಪಸ್ಸು ಇದ್ದಂತೆ.ಸಂಶೋಧನೆ ವಿಭಾಗದಲ್ಲಿ ಯಶಸ್ಸು ಕಾಣಲು, ಸಾಧಿಸಲು ತಮ್ಮ ಇಡೀ ಬದುಕನ್ನೇ ಮುಡಿಪಾಗಿಡಬೇಕು ಎಂದು ಖ್ಯಾತ ಸಂಶೋಧಕ ಡಾ.ಎ.ಕೆ ಶಾಸ್ತ್ರಿ ಹೇಳಿದರು.
ಕಸಾಪದಲ್ಲಿ ನಡೆದ ಸಮಾರಂಭದಲ್ಲಿ ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿಯಿಂದ ನೀಡುವ ಚಿದಾನಂದ ಪ್ರಶಸ್ತಿ 2019ನ್ನು ಸ್ವೀಕರಿಸಿ ಮಾತನಾಡಿದ ಅವರು, ಇಂದು ಶ್ರೀಸಾಮಾನ್ಯರಿಗೆ ವಿe್ಞÁನಿಗಳ ಹೆಸರು ತಿಳಿದಿರುವುದಿಲ್ಲ ಆದರೆ ಅವರು ಸಿದ್ಧಪಡಿಸಿರುವ ತಂತ್ರe್ಞÁನ, ಉಪಕರಣಗಳನ್ನು ಬಳಸುತ್ತಿರುತ್ತಾರೆ. ಹೊಸ ಹೊಸ ಪ್ರಯೋಗಗಳ ಮೂಲಕ ಸಮಾಜಕ್ಕೆ ವಿವಿಧ ಕ್ಷೇತ್ರಗಳಿಗೆ ತಮ್ಮದೇ ಕೊಡುಗೆ ನೀಡುವ ಸಂಶೋಧಕರಿಗೆ ಹೆಚ್ಚು ಪ್ರಚಾರ ಸಿಗುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಸಾಹಿತ್ಯದಲ್ಲಿ ಸೃಜನಶೀಲ ಬರವಣಿಗೆ ಜೊತೆ ವಾಸ್ತವಿಕ ಅಂಶಗಳು ಅಡಗಿರಬೇಕು.ಕೇವಲ ಕಲ್ಪನಾ ಲೋಕದಲ್ಲಿ ಸಾಹಿತ್ಯ ಮುಳುಗಬಾರದು. ಚಾರಿತ್ರಿಕ ದಾಖಲೆಗಳ ಬಗ್ಗೆ ಸಂಶೋಧನೆ ನಡೆಯಬೇಕು ಅವುಗಳ ಸಂಗ್ರಹ ಮಾಡಬೇಕು, ಇದರಿಂದ ನಮ್ಮ ಸಾಹಿತ್ಯ, ಭಾಷೆ, ಲಿಪಿ, ಸಾಂಸ್ಕøತಿಕ ಪಾರಂಪರಿಕ ಚಾರಿತ್ರೆಗಳು ಉಳಿಯುತ್ತದೆ ಎಂದು ಹೇಳಿದರು.
ಸಮಿತಿ ಕಾರ್ಯದರ್ಶಿ ಡಾ.ಎಸ್.ಎಸ್.ಶ್ರೀನಿವಾಸ್ ಮಾತನಾಡಿ, ಎ.ಕೆ.ಶಾಸ್ತ್ರಿ ಅವರು ಸಂಶೋಧನೆಯ ಪಾಂಡಿತ್ಯರಸದ ಮೂಲಕ ಬರವಣಿಗೆ ರೂಢಿಸಿಕೊಂಡವರು. ಈ ಪಾಂಡಿತ್ಯ ರಸವನ್ನು ರೂಢಿಸಿಕೊಂಡವರು ಹಾಗೂ ಅರಗಿಸಿಕೊಂಡವರು ತುಂಬ ವಿರಳ ಎಂದರು.
ಸಂಶೋಧಕರಿಗೆ ಯಾವುದೇ ಪ್ರಶಸ್ತಿ ಇಲ್ಲದ ಕಾಲದಲ್ಲಿ ಜನ್ಮ ಪಡೆದ ಪ್ರಶಸ್ತಿ ಎಂದರೆ ಅದು ಚಿದಾನಂದ ಪ್ರಶಸ್ತಿ. ಸೃಜನ ಶೀಲ ಸಾಹಿತಿಗಳಿಗೆ ಬೇಗ ಸ್ಥಾನ ಸನ್ಮಾನ ಸಿಗುತ್ತದೆ ಆದರೆ, ಸಂಶೋಧಕರಿಗೆ ಮಾತ್ರ ಎಲೆಮರೆಯ ಕಾಯಿಯಾಗಿ ಮರೆಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಖ್ಯಾತ ಸಂಶೋಧಕ ಡಾ.ಎ.ಕೆ.ನಂಜುಂಡ ಸ್ವಾಮಿ ಅವರು ಎಎ.ಕೆ.ಶಾಸ್ತ್ರಿಯ ಆತ್ಮಕಥೆ ಹಾಗೂ ಬಾಲ್ಯ ಜೀವನದ ಬಗ್ಗೆ ಪರಿಚಯಿಸಿಕೊಟ್ಟರು.
ಪುರಾತತ್ವ ತಜ್ಞರು ಡಾ.ಎಸ್.ನಾಗರಾಜು, ಎಸï.ಎಸï.ಶ್ರೀನಿವಾಸ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.