ಭಾರತ ಆಸ್ಟ್ರೇಲಿಯಾ ವಿಶ್ವಕಪ್ ಇತಿಹಾಸ : ಮಹಾಸಂಗ್ರಾಮದಲ್ಲಿ ಆಸಿಸ್ನದ್ದೆ ದರ್ಬಾರ್

ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳು ಮದಗಜಗಳಂತೆ ರಣಾಂಗಣದಲ್ಲಿ ಹೋರಾಡಿವೆ. ವಿಶ್ವಕಪ್‍ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಟಾಪ್ ಐದು ರೋಚಕ ಕದನಗಳ್ಯಾವು ಅನ್ನೋದನ್ನ ನೋಡೋಣ ಬನ್ನಿ

ವರ್ಷ 1992 :ಭಾರತಕ್ಕೆ ಒಂದು ರನ್ಗಳ ವಿರೋಚಿತ ಸೋಲು
1992ರ ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆದಿತ್ತು. ಲೀಗ್ನಲ್ಲಿ ಮೊಹ್ಮದ್ ಅಜರುದ್ದೀನ್ ನೇತೃತ್ವದ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ತಂಡವನ್ನ ಎದುರಿಸಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ ಓವರ್ನಲ್ಲಿ 9 ವಿಕೆಟ್ಗೆ 237 ರನ್ ಕಲೆ ಹಾಕಿತು. ಸುಲಭ ಮೊತ್ತ ಬೆನ್ನತ್ತಿದ ಭಾರತ ಮೊಹ್ಮದ್ ಅಜರುದ್ದೀನ್ ಅವರ 93 ರನ್ಗಳ ಹೊರತಾಗಿಯೂ ಕೊನೆಯತಲ್ಲಿ 1 ರನ್ಗಳ ವಿರೋಚಿತ ಸೋಲು ಕಂಡಿತು.
ವರ್ಷ 1996 ವಾಂಖೆಡೆಯಲ್ಲಿ ಮಕಾಡೆ ಮಲಗಿದ ಭಾರತ
1996ರ ವಿಶ್ವಕಪ್ ಭಾರತದಲ್ಲಿ ನಡೆದಿತ್ತು. ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಭಾರತ ಲೀಗ್ ಆಸ್ಟ್ರೇಲಿಯಾ ತಂಡವನ್ನ ಮುಂಬೈನ ವಾಂಖೆಡೆಯಲ್ಲಿ ಎದುರಿಸುತ್ತೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ ಓವರ್ನಲ್ಲಿ 258 ರನ್ ಗಳಿಗೆ ಆಲೌಟ್ ಆಗುತ್ತೆ. ಸವಾಲಿನ ಟಾರ್ಗೆಟ್ ಬೆನ್ನತ್ತಿದ ಭಾರತ ಸವ್ಯಸಾಚಿ ಸಚಿನ್ ಹಾಗೂ ಮಂಜ್ರೆಕರ್ ಅವರ ಅರ್ಧ ಶತಕದ ಹೊರತಾಗಿಯೂ ಕೊನೆಯಲ್ಲಿ 16 ರನ್ ಗಳ ವಿರೋಚಿತ ಸೋಲು ಅನುಭವಿಸುತ್ತೆ.
ವರ್ಷ 1999 ಒವೆಲ್ ಅಂಗಳದಲ್ಲಿ ಆಸಿಸ್ಗೆ ಶರಣಾಗಿದ್ದ ಭಾರತ
1999ರಲ್ಲಿ ಮೊಹ್ಮದ್ ಅಜರುದ್ದೀನ್ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಆಡಲು ಆಂಗ್ಲರ ನಾಡಿಗೆ ತೆರೆಳಿತ್ತು. ಲೀಗ್ನಲ್ಲಿ ಸಿಹಿ ಕಹಿ ಎರಡನ್ನು ಅನುಭವಿಸಿ ಸೂಪರ್ 8ಗೆ ಎಂಟ್ರಿ ಕೊಟ್ಟಿದ್ದ ಭಾರತ ಕ್ಕೆ ಸ್ಟೀವ್ ವಾ ನೇತೃತ್ವದ ಆಸ್ಟ್ರೇಲಿಯಾ ಎದುರಾಳಿಯಾಗಿತ್ತು. ಒವೆಲ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ ಓವರ್ನಲ್ಲಿ 6 ವಿಕೆಟ್ಗೆ 282 ರನ್ ಕಲೆ ಹಾಕಿತು. ಸವಾಲಿನ ಮೊತ್ತ ಬೆನ್ನತ್ತಿದ ಭಾರತ ಅಜೇಯ್ ಜಡೇಜಾ ಅವರ ಶತಕದ ಹೊರತಾಗಿಯೂ 77 ರನ್ಗಳಿಂದ ಆಸಿಸ್ಗೆ ಶರಣಾಯಿತು.
ವರ್ಷ 2003 ಫೈನಲ್ನಲ್ಲಿ ಕಾಂಗರೂಗಳಿಗೆ ಶರಣಾದ ಟೀಂಇಂಡಿಯಾ
ಸೌರವ್ ಗಂಗೂಲಿ ನೇತೃತ್ವದ ಟೀಂ ಇಂಡಿಯಾ 2003ರಲ್ಲಿ ವಿಶ್ವಕಪ್ ಆಡಲು ದಕ್ಷಿಣ ಆಫ್ರಿಕಾಕ್ಕೆ ತೆರೆಳಿರುತ್ತೆ. ಟೂರ್ನಿ ಗೆಲ್ಲುವ ರೇಸ್ನಲ್ಲಿ ಟೀಂ ಇಂಡಿಯಾ ಕೂಡ ಒಂದಾಗಿರುತ್ತೆ. ಆದರೆ ಆಸ್ಟ್ರೇಲಿಯಾ ತಂಡ ಟೀಂ ಇಂಡಿಯಾ ಪಾಲಿಗೆ ಕಬ್ಬಣದ ಕಡಲೆಯಾಗಿರುತ್ತೆ. ಅದರಂತೆ ಲೀಗ್ನಲ್ಲಿ ಸೆಂಚೂರಿಯನ್ನಲ್ಲಿ ಹೀನಾಯವಾಗಿ ಸೋಲು ಕಂಡಿರುತ್ತೆ. ನಂತರ ಒಳ್ಳೆಯ ಪರ್ಫಾಮನ್ಸ್ ಕೊಟ್ಟು ಫೈನಲ್ ತಲುಪುತ್ತೆ . ಆದರೆ ಫೈನಲ್ನಲ್ಲಿ ಮತ್ತೆ ಪಾಟಿಂಗ್ ಪಡೆ ಮತ್ತೆ ಎದುರಾಗುತ್ತೆ. ಜೋಹನ್ಸ್ಬರ್ಗ್ನಲ್ಲಿ ನಡೆದ ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಕ್ಯಾಪ್ಟನ್ ರಿಕಿಪಾಟಿಂಗ್ ಅವರ ಶತಕದ ನೆರವಿನಿಂದ ನಿಗದಿತ ಓವರ್ನಲ್ಲಿ 359 ರನ್ ಕಲೆ ಹಾಕುತ್ತೆ. ಬಿಗ್ ಟಾರ್ಗೆಟ್ ಬೆನ್ನತ್ತಿದ ಟೀಂ ಇಂಡಿಯಾ 39.2 ಓವರ್ಗಳಲ್ಲಿ 234 ರನ್ಗಳಿಗೆ ಆಲೌಟ್ ಆಗುತ್ತೆ ಇದರೊಂದಿಗೆ ವಿಶ್ವಕಪ್ ಗೆಲ್ಲುವ ಅವಕಾಶದಿಂದ ಟೀಂ ಇಂಡಿಯಾದ ಕನಸು ಛದ್ರ ಛಿದ್ರವಾಗುತ್ತೆ.
ವರ್ಷ 2011 ಕಾಂಗರೂಗಳನ್ನ ಬಗ್ಗುಬಡೆದಿದ್ದ ಧೋನಿ ಪಡೆ
2011 ಭಾರತೀಯ ಕ್ರಿಕೆಟ್ ಪಾಲಿಗೆ ಸ್ಮರಣಿಯ ವರ್ಷ. 2011ರಲ್ಲಿ ಭಾರತ ವಿಶ್ವಕಪ್ನ ಆತಿಥ್ಯ ವಹಿಸಿತ್ತು. ಆ ವಿಶ್ವಕಪ್ನಲ್ಲಿ ಧೋನಿ ಪಡೆ ಎರಡನೇ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದಿತ್ತು. ಟೂರ್ನಿಯದ್ದಕ್ಕೂ ಬರೀ ಕಠಿಣ ಸವಾಲುಗಳನ್ನ ಎದುರಿಸಿ ಒಂದು ಸೋಲನ್ನ ಕಾಣದೇ ಪ್ರಶಸ್ತಿ ಗೆದ್ದಿತ್ತು. ಅದರಲ್ಲೂ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರಾಗಿತ್ತು. ಡೂ ಆರ್ ಡೈ ಮ್ಯಾಚ್ಅಹ್ಮದಾಬಾದ್ನಲ್ಲಿ ನಡೆದಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಿಕಿ ಪಾಂಟಿಂಗ್ ಪಡೆ ನಿಗದಿತ ಓವರ್ನಲ್ಲಿ 6 ವಿಕೆಟ್ಗೆ 260 ರನ್ ಗಳಿಸಿತ್ತು. ಕಠಿಣ ಸವಾಲು ಬೆನ್ನತ್ತಿದ ಟೀಂ ಇಂಡಿಯಾ ಸವ್ಯಸಾಚಿ ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್ ಮತ್ತು ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅವರ ಅರ್ಧ ಶತಕ ನೆರವಿನಿಂದ 5 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ ಕಾಂಗರೂಗಳನ್ನ ಬಗ್ಗು ಬಡಿದಿತ್ತು.
ವರ್ಷ 2015ಆಸ್ಟ್ರೇಲಿಯಾಕ್ಕೆ 95 ರನ್ ಗೆಲವು
2015ರಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ವಿಶ್ವ ಕಪ್ ಆಡಲು ಆಸ್ಟ್ರೇಲಿಯಾಕ್ಕೆ ತೆರೆಳಿತ್ತು. ಲೀಗ್ನಲ್ಲಿ ಒಂದೇ ಒಂದು ಸೋಲು ಕಾಣದೇ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಟೀಂ ಇಂಡಿಯಾ ಕ್ವಾರ್ಟರ್ ಫೈನಲ್ನಲ್ಲಿ ಬಾಂಗ್ಲಾದೇಶ ವಿರುದ್ಧ 109 ರನ್ಗಳ ಭರ್ಜರಿ ಜಯ ಪಡೆದಿತ್ತು. ನಂತರ ಸೆಮಿಫೈನಲ್ನಲ್ಲಿ ಆತಿಥೇಯ ಆಸ್ಟ್ರೇಲಿಯಾ ಎದುರಾಳಿಯಾಗಿತ್ತು. ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ಅವರ ಶತಕದ ನೆರವಿನಿಂದ 7 ವಿಕೆಟ್ಗೆ 328 ರನ್ ಕಲೆ ಹಾಕಿತು. ಬಿಗ್ ಟಾರ್ಗೆಟ್ ಬೆನ್ನತ್ತಿದ ಧೋನಿ ಪಡೆ 46.5 ಓವರ್ಗಳಲ್ಲಿ 233 ರನ್ಗಳಿಗೆ ಆಲೌಟ್ ಆಗಿ ಟೂರ್ನಿಯಿಂದಲೇ ಹೊರ ಬಿದ್ದಿತ್ತು. ಆತಿಥೇಯ ಆಸ್ಟ್ರೇಲಿಯಾ ಟೀಂ ಇಂಡಿಯಾವನ್ನ ಸೋಲಿಸಿ ಫೈನಲ್ಗೆ ಎಂಟ್ರಿಕೊಟ್ಟಿತ್ತು.ಈಗ ಮತ್ತೆ ವಿಶ್ವಕಪ್ ಬಂದಿದೆ.. ಮತ್ತೆ ಟೀಮ್ ಇಂಡಿಯಾ ಮೊದಲ ವಿಶ್ವಕಪ್ ಪಂದ್ಯದಲ್ಲಿ ಭರ್ಜರಿಯಾಗೇ ಗೆದ್ದಿದೆ. ಅದೇ ರೀತಿ ಈ ಬಾರಿಯೂ ಕೂಡ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುವ ಮೋಸ್ಟ್ ಫೇವರೇಟ್ ತಂಡಗಳಲ್ಲಿ ಒಂದಾಗಿದೆ.. ಆಸ್ಟ್ರೇಲಿಯಾ ವಿರುದ್ಧ ಹೇಗೆ ಅನ್ನೋದನ್ನ ಕಾದು ನೋಡಬೇಕಿದೆ..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ