ಇಸ್ಲಾಮಾಬಾದ್, ಜೂ.8- ಸೇನಾ ವಾಹನವನ್ನು ಗುರಿಯಾಗಿಟ್ಟುಕೊಂಡು ಉಗ್ರಗಾಮಿಗಳು ನಡೆಸಿದ ರಸ್ತೆಬದಿ ಬಾಂಬ್ ದಾಳಿಯಲ್ಲಿ ಪಾಕಿಸ್ತಾನಿ ಸೇನೆಯ ಮೂವರು ಅಧಿಕಾರಿಗಳು ಮತ್ತು ಓರ್ವ ಯೋಧ ಹತರಾಗಿ, ಇನ್ನೂ ನಾಲ್ವರು ಸೈನಿಕರು ತೀವ್ರ ಗಾಯಗೊಂಡ ಘಟನೆ ಇಂದು ಬೆಳಗ್ಗೆ ಹಿಂಸಾಚಾರ ಪೀಡಿತ ವಜೀರಿಸ್ತಾನದಲ್ಲಿ ನಡೆದಿದೆ.
ಪಾಕಿಸ್ತಾನ-ಆಫ್ಘಾನಿಸ್ತಾನ ಗಡಿಯಲ್ಲಿರುವ ಬುಡಕಟ್ಟು ಜಿಲ್ಲೆ ವಜೀರಿಸ್ತಾನ್ ಉತ್ತರ ಭಾಗದಲ್ಲಿ ಉಗ್ರರು ರಸ್ತೆಬದಿಯಲ್ಲಿ ಬಾಂದ್ ಹುದುಗಿರಿಸಿದ್ದರು. ಇದೇ ಸಂದರ್ಭದಲ್ಲಿ ಮಿಲಿಟರಿ ವಾಹನ ಹಾದು ಹೋದಾಗ ಸುಧಾರಿತ ಸ್ಫೋಟಕ (ಐಇಡಿ) ಆಸ್ಫೋಟಗೊಂಡಿತು. ಈ ಘಟನೆಯಲ್ಲಿ ಮೂವರು ಪಾಕ್ ಸೇನಾಧಿಕಾರಿಗಳು ಮತ್ತು ಓರ್ವ ಯೋಧ ಹತರಾದರು, ಇನ್ನೂ ನಾಲ್ವರು ಸೈನಿಕರಿಗೆ ಗಾಯಗಳಾಗಿವೆ ಎಂಧು ಸೇನೆ ಹೇಳಿಕೆಯೊಂದರಲ್ಲಿ ತಿಲಿಸಿದೆ.
ಲೆಫ್ಟಿನೆಂಟ್ ಕರ್ನಲ್ ರಶೀದ್ ಕರೀಂ ಬೇಗ್, ಮೇಜರ್ ಮೋಯಿಜ್ ಮಖ್ಸೂದ್ ಬೇಗ್, ಕ್ಯಾಪ್ಟರ್ ಆರೀಫ್ ಉಲ್ಲಾ ಮತ್ತು ಲಾನ್ಸ್ ಹವಲ್ದಾರ್ ಜಾಹೀರ್ ಮೃತಪಟ್ಟಿದ್ದಾರೆ ಎಂದು ಸೇನೆಯ ಮಾಧ್ಯಮ ಘಟಕ ಅಂತರ್‍ಸೇವೆಗಲ ಸಾರ್ವಜನಿಕ ಸಂಬಂಧಗಳ(ಐಎಸ್‍ಪಿಆರ್) ತಿಳಿಸಿದೆ.
ಈ ಪ್ರದೇಶದಲ್ಲಿ ಸೇನೆ ಮತ್ತು ಯೋಧರನ್ನು ಗುರಿಯಾಗಿಟ್ಟುಕೊಂಡು ಉಗ್ರರು ದಾಳಿಯನ್ನು ತೀವ್ರಗೊಳಿಸಿದ್ದಾರೆ. ಇತ್ತೀಚೆಗೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 10 ಭದ್ರತಾ ಸಿಬ್ಬಂದಿ ಹತರಾಗಿ, 35ಕ್ಕೂ ಹೆಚ್ಚು ಯೋದರು ಗಾಯಗೊಂಡಿದ್ದರು.