ಹಿಂದಿನ ಎನ್ ಡಿಎ ಸರ್ಕಾರದಲ್ಲಿ ಜಾರಿಗೊಳಿಸಿದ್ದ ವಿದೇಶಾಂಗ ನೀತಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲು ಸಾಧ್ಯವಾಯಿತು

ನವದೆಹಲಿ: ಈ ಹಿಂದಿನ 5 ವರ್ಷಗಳಲ್ಲಿ ಆಡಳಿತದಲ್ಲಿದ್ದ ಎನ್​ಡಿಎ ಸರ್ಕಾರ ಜಾರಿಗೊಳಿಸಿದ ವಿದೇಶಾಂಗ ನೀತಿ, ವಿಶ್ವದ ಅಗ್ರ ರಾಷ್ಟ್ರಗಳ ಸಾಲಿನಲ್ಲಿ ಭಾರತವನ್ನು ನಿಲ್ಲಿಸಿದೆ ಎಂಬ ಭರವಸೆ ದೇಶದ ಜನರಲ್ಲಿ ಮೂಡಿತು. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ಇದು ಸಹಕಾರಿಯಾಯಿತು ಎಂದು ವಿದೇಶಾಂಗ ಸಚಿವ ಎಸ್​. ಜೈಶಂಕರ್​ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ದೇಶ ಜಾಗತಿಕವಾಗಿ ಯಾವ ಸ್ಥಾನದಲ್ಲಿದೆ ಎಂಬ ಸಂಗತಿ ಮತದಾರರನ್ನು ಪ್ರಭಾವಿಸುತ್ತದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಈಗ ಇಡೀ ಜಗತ್ತು ಭಾರತವನ್ನು ಗೌರವಿಸಲಾರಂಭಿಸಿದೆ ಎಂಬ ಭಾವನೆ ದೇಶದಾದ್ಯಂತ ಅವ್ಯಾಹತವಾಗಿದೆ. ದೇಶದಲ್ಲಿ ಇಂತಹ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ಎನ್​ಡಿಎ 1 ಸರ್ಕಾರ ಜಾರಿಗೊಳಿಸಿದ್ದ ವಿದೇಶಾಂಗ ನೀತಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

ವಿದೇಶಾಂಗ ನೀತಿ ಮತ್ತು ದೇಶದ ಭದ್ರತೆ ಒಂದರ ಜತೆಗೊಂದರಂತೆ ಬೆಸೆದುಕೊಂಡಿವೆ. ಹಾಗಾಗಿ ಇವರೆಡನ್ನೂ ಸಮರ್ಥವಾಗಿ ನಿಭಾಯಿಸುವ ಬಗೆಗಿನ ವಿಶ್ವಾಸ ಕೂಡ ಸರಿಯಾದ ನಿರ್ಧಾರ ಕೈಗೊಳ್ಳಲು ಮತದಾರನ್ನು ಪ್ರಭಾವಿಸುತ್ತದೆ ಎಂದರು.

ಚುನಾವಣಾ ಪ್ರಚಾರದ ವೇಳೆ ರಾಷ್ಟ್ರೀಯ ಭದ್ರತಾ ವಿಷಯವನ್ನು ಪ್ರಸ್ತಾಪಿಸಿದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎಗೆ ಹೆಚ್ಚಿನ ಅನುಕೂಲವಾಯಿತು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ