ಅದ್ಬುತ ಬೌಲಿಂಗ್ ದಾಳಿ ನಡೆಸಿದ ಮಿಂಚಿದ ಅಫ್ಘಾನಿಸ್ತಾನ ತಂಡ ಬ್ಯಾಟಿಂಗ್ನಲ್ಲಿ ಎಡವಿದ ಕಾರಣ ಸೋಲಿಗೆ ಶರಣಾಗಿದೆ. ವಿಶ್ವಕಪ್ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 201 ರನ್ಗೆ ಆಲೌಟ್ ಮಾಡಿದ್ದ ಅಫ್ಘಾನಿಸ್ತಾನ 152 ರನ್ಗೆ ಆಲೌಟ್ ಆಗೋ ಮೂಲಕ ಸೋಲು ಅನುಭವಿಸಿದೆ. ಈ ಮೂಲಕ ಲಂಕಾ ತಂಡಕ್ಕೆ ಶಾಕ್ ನೀಡೋ ಅಫ್ಘಾನ್ ಕನಸು ನನಸಾಗಲಿಲ್ಲ.
ಮಳೆಯಿಂದಾಗಿ ಪಂದ್ಯವನ್ನು 41 ಓವರ್ಗಳಿಗೆ ಸೀಮಿತಗೊಳಿಸಲಾಗಿತ್ತು. ಡಕ್ವರ್ತ್ ನಿಯಮದ ಪ್ರಕಾರ 187 ರನ್ ಟಾರ್ಗೆಟ್ ಪಡೆದ ಅಫ್ಘಾನ್ ಬ್ಯಾಟಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿತು. ಆರಂಭದಲ್ಲೇ ಮೊಹಮ್ಮದ್ ಶೆಹಝಾದ್ 7 ರನ್ ಸಿಡಿಸಿ ಔಟಾದರು. ರಹಮತ್ ಶಾ 2, ಹಶ್ಮತುಲ್ಹಾ ಶಾಹಿದಿ 4 ರನ್ ಸಿಡಿಸಿ ಔಟಾದರು.
ಹಜ್ರತುಲ್ಹಾ ಜಝೈ 30 ರನ್ ಕಾಣಿಕೆ ನೀಡಿದರು. ಮೊಹಮ್ಮದ್ ನಬಿ 11 ರನ್ ಸಿಡಿಸಿ ನಿರ್ಗಮಿಸಿದರು. ನಾಯಕ ಗುಲ್ಬಾದಿನ್ ನಬಿ 23 ರನ್ ಸಿಡಿಸಿ ಔಟಾದರು.
ರಶೀದ್ ಖಾನ್ 2 ರನ್ ಸಿಡಿಸಿ ಔಟಾದರು. ನಜೀಬುಲ್ಲಾ ಜರ್ದಾನ್ ಹೋರಾಟ ಮುಂದುವರಿಸಿದರು. ಆದರೆ ದಲ್ವತ್ ಜರ್ದಾನ್ 6 ರನ್ ಸಿಡಿಸಿ ಔಟಾದರು.
ನಜೀಬುಲ್ಲಾ ಜರ್ದಾನ್ 43 ರನ್ ಸಿಡಿಸಿ ರನೌಟ್ಗೆ ಬಲಿಯಾದರು. ಹಮಿದ್ ಹಸನ್ ವಿಕೆಟ್ ಪತನದೊಂದಿಗೆ ಅಫ್ಘಾನಿಸ್ತಾನ 32.4 ಓವರ್ಗಳಲ್ಲಿ 152 ರನ್ಗೆ ಆಲೌಟ್ ಆಯಿತು. ಈ ಮೂಲಕ ಲಂಕಾ 34 ರನ್ ಗೆಲವು ಸಾಧಿಸಿತು.