ಟಿ, ದಾಸರಹಳ್ಳಿಯ ಹಾವನೂರು ಬಡಾವಣೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿವಾಜಿ ಶಾಖೆಯ ವತಿಯಿಂದ ಜೂನ್ 5 ವಿಶ್ವ ಪರಿಸರ ದಿನದ ಪ್ರಯುಕ್ತ, ಜನಜಾಗೃತಿಗಾಗಿ ಬೆಳಿಗ್ಗೆ 6.30 ರಿಂದ ಎಂ.ಎಸ್. ರಾಮಯ್ಯ ಬಡಾವಣೆ, ಡಿಫೇನ್ಸ್ ಕಾಲೋನಿ ಮತ್ತು ಮುನಿ ಕೊಂಡಪ್ಪ ಬಡಾವಣೆಗಳಲ್ಲಿ ಜಾಥ(ನಡಿಗೆ) ನಂತರ ಹೈ ಟೆಂಕ್ಷನ್ ಲೇನ್ ರಸ್ತೆ ಹತ್ತಿರ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವನಹಳ್ಳಿ ಯೋಜನಾ ಆಯೋಗದ ಉಪನಿರ್ದೇಶಕರಾದ ಜೆ,ಮಂಜುನಾಥ್ ವಹಿಸಿದ್ದರು, ಬಾಗಲಗುಂಟೆ ವಾರ್ಡ್ ಬಿಬಿಎಂಪಿ ಕಾರ್ಪೊರೇಟರ್ ನರಸಿಂಹನಾಯಕ್, ಪರಿಸರವಾದಿ ಶ್ಯಾಮ್ ಪ್ರಸಾದ್, ಯೋಗಗುರುಗಳಾದ ಉಮಾಮಹೇಶ್ವರ ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಪರಿಸರ ಪ್ರೇಮಿಗಳು ಹೀಗೆ 200 ಕ್ಕೂ ಹೆಚ್ಚು ಜನ ಭಾಗವಹಿಸಿ, ಹಸಿರು ಉಳಿವಿಗೆ, ಪ್ಲಾಸ್ಟಿಕ್ ಮುಕ್ತ ಪರಿಸರ ಮತ್ತು ಜಲ ಸಂರಕ್ಷಣೆ ಬಗ್ಗೆ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು, ಉಚಿತವಾಗಿ ಗಿಡಗಳನ್ನು ವಿತರಿಸಲಾಯಿತು,