ಜೈಪುರ: ರಾಜಸ್ಥಾನ ಕಾಂಗ್ರೆಸ್ನಲ್ಲೂ ಭಿನ್ನಮತ ಭುಗಿಲೆದ್ದಿದ್ದು, ನಾಯಕರು ಪರಸ್ಪರರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಲೋಕಸಭ ಚುನಾವಣೆಯಲ್ಲಿ ತನ್ನ ಮಗ ವೈಭವ್ ಸೋಲಲು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಕಾರಣ ಎಂದು ಸಿಎಂ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಜೋಧಪುರ ಕ್ಷೇತ್ರದಿಂದ ಸ್ಪರ್ಧಿಸುವಂತೆ ತಮ್ಮ ಪುತ್ರ ವೈಭವ್ ಗೆಹ್ಲೋಟ್ಗೆ ಸೂಚಿಸಿದ್ದು ಸಚಿನ್ ಪೈಲಟ್. ಅಲ್ಲಿ ಅವರು ಬಿಜೆಪಿಯ ಗಜೇಂದ್ರ ಸಿಂಗ್ ಶೇಖಾವತ್ ವಿರುದ್ಧ 2.7 ಲಕ್ಷ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಈ ಸೋಲಿನ ಹೊಣೆಯನ್ನು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹೊರಬೇಕು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ನಾವು ದೊಡ್ಡ ಅಂತರದಿಂದ ಗೆಲ್ಲುತ್ತೇವೆ ಎಂದು ಪೈಲಟ್ ತಿಳಿಸಿದ್ದರು. ಜೋಧಪುರ ಕ್ಷೇತ್ರದಲ್ಲಿ ಕಾಂಗ್ರೆಸ್ನ 6 ಶಾಸಕರಿದ್ದು, ವೈಭವ್ ಪರ ವ್ಯಾಪಕ ಪ್ರಚಾರ ಮಾಡಲಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು. ವೈಭವ್ ಅಲ್ಲಿ ಸೋಲಲು ಏನು ಕಾರಣ ಎಂಬ ಕುರಿತು ವಿವರವಾದ ಆತ್ಮಾವಲೋಕನ ಮಾಡಿಕೊಳ್ಳೋಣ. ವೈಭವ್ ಜತೆಯಲ್ಲೇ ನಾವು ಎಲ್ಲಾ 25 ಸೀಟುಗಳಲ್ಲೂ ಸೋಲನುಭವಿಸಿದ್ದೇವೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ.
Sachin Pilot Should Take Responsibility for My Son’s Defeat in Jodhpur, says Ashok Gehlot