ಬೆಂಗಳೂರು, ಜೂ.4-ಸಮಾಜದಲ್ಲಿ ಶೋಷಿತ ಸಮುದಾಯಗಳು ಇನ್ನೂ ಶೋಷಿತರಾಗಿಯೇ ಉಳಿದಿವೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಕಂಡ ದಲಿತ ಸಮುದಾಯಗಳ ಅಭಿವೃದ್ಧಿ ಕನಸು ದೇಶದಲ್ಲಿ ಇಂದಿಗೂ ಕನಸಾಗಿಯೇ ಉಳಿದಿದೆ. ಅವರ ಕನಸು ಸಾಕಾರವಾಗುವವರೆಗೂ ದಲಿತ ಸಮುದಾಯಗಳ ಒಕ್ಕೊರಲ ಹೋರಾಟ ಮುಂದುವರೆಯಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ಅಂಬೇಡ್ಕರ್ ಭವನದಲ್ಲಿ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 135 ನೇ ಜಯಂತಿ ಹಾಗೂ ಡಾ.ಎಂ ವೆಂಕಟಸ್ವಾಮಿ ಅವರ 65 ನೇ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಪರಿವರ್ತನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು..
ಸಮಾಜದಲ್ಲಿ ಇಂದಿಗೂ ಕೆಲವು ಬುಡಕಟ್ಟು ಸಮುದಾಯಗಳು ಮುಖ್ಯವಾಹಿನಿಗೆ ಬರದೆ, ಆಧುನಿಕ ಪ್ರಪಂಚದ ಅರಿವಿಲ್ಲದೆ ಬದುಕುತ್ತಿದ್ದಾರೆ.ಇಂತಹವರಿಗಾಗಿ ನಿಮ್ಮ ಹೋರಾಟ ನಿಲ್ಲಾಬಾರದು ಮುಂದುವರೆಯಬೇಕು ಎಂದರು.
ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ಶೋಷಿತ ವರ್ಗಗಳ ಅಭಿವೃದ್ಧಿಯಾಗಿಲ್ಲ. ಎಷ್ಟೋ ದಲಿತ ಸಮುದಾಯದ ಮಕ್ಕಳು ಶಿಕ್ಷದಿಂದ ವಂಚಿರಾಗಿದ್ದಾರೆ ಇವರಿಗೆ ಸೂಕ್ತ ಶಿಕ್ಷಣ, ಸೌಲಭ್ಯ ಸಿಗಬೇಕಾಗಿದೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಬಡ್ತಿ ಮೀಸಲಾತಿ ಹೋರಾಟದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರದು ಸಿಂಹಪಾಲು. ಇಡೀ ಜೀವನವನ್ನು ಸಮಾಜದ ಸೇವೆಗೆ, ಹೋರಾಟಕ್ಕೆ ಮುಡಪಾಗಿಟ್ಟಿದ್ದವರು ಎಂದು ಹೊಗಳಿದರು.
ಹೋರಾಟಗಾರ ಡಾ.ಎಂ.ವೆಂಕಟಸ್ವಾಮಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ದಕ್ಷ ಅಡಳಿತಗಾರರು. ಅವರು ನಮಗೆ ಮಾರ್ಗದರ್ಶಕರು, ಸರ್ಕಾರ ಅವರ ಜನ್ಮ ದಿನಾಚರಣೆ ದಿನವನ್ನು ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು ಒತ್ತಾಯಿಸಿದರು.
ಇನ್ನೂ ಸಮಾಜದಲ್ಲಿ ಇಂದಿಗೂ ಶೇಕಡ 60ರಷ್ಟು ಜನ ಮುಖ್ಯವಾಹಿಯಿಂದ ವಂಚಿತರಾಗಿದ್ದಾರೆ ಅಂತಹವರ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಹೇಳಿದರು.
ಸಮಾರಂಭಕ್ಕೂ ಮುನ್ನ ನಾಲ್ವಡಿ ಅವರ ಭಾವಚಿತ್ರವನ್ನು ಸಾಂಸ್ಕøತಿಕ ಕಲಾ ತಂಡದೊಂದಿಗೆ ಫ್ರೀಡಂ ಪಾರ್ಕ್ನಿಂದ ಅಂಬೇಡ್ಕರ್ ಭವನದ ವರೆಗೆ ಮೆರವಣಿಗೆ ಮಾಡಲಾಯಿತು..
ಹೋರಾಟಗಾರ ಡಾ.ಎಂ.ವೆಂಕಟಸ್ವಾಮಿ, ಶ್ರೀಕಂಠಿ ವೆಂಕಟರಮಣ್ಣ ಮತ್ತಿತರರು ಉಪಸ್ಥಿತರಿದ್ದರು.