ಮುಂಬೈ: ಪಾಕಿಸ್ತಾನದಲ್ಲಿನ ಭಾರತದ ರಾಯಭಾರಿ ಕಚೇರಿ ರಮಜಾನ್ ಹಿನ್ನಲೆಯಲ್ಲಿ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದ ಅಥಿಗಳಿಗೆ ಕಿರುಕುಳ ನೀಡಿದ್ದ ಪಾಕ್ ಸೇನಾ ಸಿಬ್ಬಂದಿ ವಿರುದ್ಧ ಶಿವಸೇನೆ ತೀವ್ರ ವಾಗ್ದಾಳಿ ನಡೆಸಿದ್ದು, ಮಧ್ಯ ಸೇವಿಸಿದ ಮಂಗಗಳು ಎಂದು ಜರಿದಿದೆ.
ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಪಾಕ್ ಗಣ್ಯರಿಗಾಗಿ ಇಸ್ಲಮಾಬಾದ್ನಲ್ಲಿ ಇಫ್ತಾರ ಕೂಟ ಆಯೋಜಿಸಿದ್ದರು. ನೂರಾರು ಗಣ್ಯರು ಸಹ ಹೋಟೆಲ್ಗೆ ಆಗಮಿಸಿದ್ದರು. ಆದರೆ, ಹೋಟೆಲ್ ಸುತ್ತುವರಿದಿದ್ದ ಸೇನೆ ಅವರೆಲ್ಲರಿಗೆ ಪ್ರಾಣ ಬೆದರಿಕೆ ಹಾಕಿ ಅವಮಾನಿಸಿತ್ತು.
ಸೇನಾ ಸಿಬ್ಬಂದಿಯ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ ಶಿವಸೇನೆ ಅಲ್ಲಿನ ಸರ್ಕಾರದ ವಿರುದ್ಧವೂ ಹರಿಹಾಯ್ದಿದೆ. ಪಾಕ್ ಸೇನೆಯನ್ನು ಮದ್ಯಪಾನ ಮಾಡಿದ ಕೋತಿಗಳಿಗೆ ಹೋಲಿಸಿದೆ. ಪಾಕ್ ಮಂಗಗಳು ಮಾಡಿದ ಈ ಅವಮಾನವನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಉಗ್ರ ಮಸೂದ್ ವಿಚಾರದಲ್ಲಿ ಪಾಕಿಸ್ತಾನ ದ್ವಂದ್ವ ನೀತಿ ಪರಿಪಾಲಿಸುತ್ತಿದೆ. ನಮ್ಮ ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಭಿನಂದನೆ ತಿಳಿಸಿ, ಶಾಂತಿ ಸ್ಥಾಪನೆ ಮತ್ತು ಅಭಿವೃದ್ಧಿಗಾಗಿ ಜತೆಯಾಗಿ ಕೆಲಸ ಮಾಡೋಣ ಎಂದಿದ್ದಾರೆ. ಆದರೆ, ಸೇನಾ ಸಿಬ್ಬಂದಿ ಇಂತಹ ಹೀನ ವರ್ತನೆ ತೋರಿಸಿದ್ದಾರೆ. ಇದೇನಾ ಶಾಂತಿಯೆಡೆಗಿನ ಹೆಜ್ಜೆ ಎಂದು ಶಿವಸೇನೆ ಪ್ರೆಶ್ನಿಸಿದೆ.
Drunken monkey: Shiv Sena slams Pakistan for humiliating guests at Indian High Commission’s Iftar party