ಬಿಡಿ ತೆಂಗಿನ ಎಣ್ಣೆಯಲ್ಲಿ ಕಲಬೆರಕೆ-ಬೆಳಕಿಗೆ ತಂದ ಸಿಒಎಂಎ

ಬೆಂಗಳೂರು, ಜೂ.4- ಬಿಡಿ ತೆಂಗಿನ ಎಣ್ಣೆ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಈ ಬಾರಿ ಬಿಡಿ ತೆಂಗಿನ ಎಣ್ಣೆಯಲ್ಲಿ ಕಲಬೆರಕೆ ಮಾಡುತ್ತಿರುವುದನ್ನು ಕೊಚ್ಚಿನ್ ಒಯಿಲ್ ಮರ್ಚಂಟ್ಸ್ ಅಸೋಸಿಯೇಷನ್ (ಸಿಒಎಂಎ) ಬೆಳಕಿಗೆ ತಂದಿದೆ.

ಸಿಒಎಂಎ ಅಧ್ಯಕ್ಷರು ಹೇಳುವಂತೆ ತೆಂಗಿನ ಎಣ್ಣೆಗೆ ದ್ರಾವಣದಿಂದ ತೆಗೆದ ಎಣ್ಣೆಯನ್ನು ವ್ಯಾಪಕವಾಗಿ ಮಿಶ್ರಣ ಮಾಡಲಾಗುತ್ತಿದೆ.ದ್ರಾವಣದಿಂದ ಹೊರತೆಗೆದ ಘಟನೆಗಳು ಔದ್ಯಮಿಕ ಉದ್ದೇಶಕ್ಕೆ ಎಣ್ಣೆ ಹಿಂಡಿಗಳನ್ನು ಆಮದು ಮಾಡಿಕೊಂಡು ಮತ್ತು ನಂತರ ಹೊರತೆಗೆದ ಎಣ್ಣೆಯನ್ನು ಬಿಡಿ ತೆಂಗಿನ ಎಣ್ಣೆಯೊಂದಿಗೆ ಕಡಿಮೆ ಬೆಲೆಯಲ್ಲಿ ತಯಾರಿಸಲು ಮಿಶ್ರಣ ಮಾಡಲಾಗುತ್ತಿದೆ.

ಬಿಡಿ ತೆಂಗಿನೆಣ್ಣೆಯ ಕಲಬೆರಕೆ ಮಾಡುವ ಪ್ರಕ್ರಿಯೆ ಕೇರಳ ರಾಜ್ಯಕ್ಕೆ ಮಾತ್ರ ಸೀಮಿತವಲ್ಲ. ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಕೇರಳ ಸೇರಿದಂತೆ ವಾಸ್ತವಿಕವಾಗಿ 25ಕ್ಕೂ ಹೆಚ್ಚು ರಾಜ್ಯಗಳು ಬಿಡಿ ತೆಂಗಿನ ಎಣ್ಣೆ ಮಾರಾಟವನ್ನು ನಿಷೇಧಿಸಿವೆ ಮತ್ತು ದೇಶದ ವಿವಿಧೆಡೆ ತಪ್ಪು ಮಾಡಿದವರಿಗೆ ಜಾಗರೂಕ ಆಹಾರ ಸುರಕ್ಷತೆ ಅಧಿಕಾರಿಗಳು ಶಿಕ್ಷೆ ವಿಧಿಸಿದ್ದಾರೆ. ಕಳೆದ ವರ್ಷ ಕಲಬೆರಕೆ ಆರೋಪದಲ್ಲಿ ಆಹಾರ ಮತ್ತು ಔಷಧ ನಿರ್ವಹಣೆ ಇಲಾಖೆ ಅಧಿಕಾರಿಗಳು ಮುಂಬೈ ನಲ್ಲಿ 30 ಲಕ್ಷ ರೂ.ಮತ್ತು ಪುಣೆಯಲ್ಲಿ 42 ಲಕ್ಷ ರೂ. ಮೌಲ್ಯದ ಬಿಡಿ ಕಾದ್ಯ ತೈಲವನ್ನು ವಶಪಡಿಸಿಕೊಂಡಿದ್ದಾರೆ.

ಗ್ರಾಹಕರು ತಾವು ಖರೀದಿಸುತ್ತಿರುವ ತೈಲದ ಲೇಬಲ್‍ಗಳ ಮೇಲೆ ಎಫ್‍ಎಸ್‍ಎಸ್‍ಎಐ ಚಿಹ್ನೆ ಇದೆಯೇ ಎಂದು ನೋಡಬೇಕು. ಇದು ಎಣ್ಣೆಯ ಶುದ್ಧ ಮತ್ತು ಉತ್ತಮ ಗುಣಮಟ್ಟವನ್ನು ಖಚಿತಪಡಿಸುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ