ಬೆಂಗಳೂರು, ಜೂ.4- ಬಿಬಿಎಂಪಿಯಲ್ಲಿ ಆನ್ಲೈನ್ ಆಸ್ತಿ ತೆರಿಗೆ ವ್ಯವಸ್ಥೆ ಜಾರಿಗೆ ಬಂದ ಮೇಲೆ ನಾಗರಿಕರು ನಾ ಮುಂದು, ತಾ ಮುಂದು ಎಂದು ತೆರಿಗೆ ಕಟ್ಟುತ್ತಿದ್ದಾರೆ. ಆದರೆ ಕೆಲವು ತೆರಿಗೆಗಳ್ಳರು ಕಳೆದ ಎಂಟು ವರ್ಷಗಳಿಂದ ತೆರಿಗೆ ಪಾವತಿಸದೆ ಪಾಲಿಕೆಗೆ ಕೋಟ್ಯಂತರ ರೂ. ವಂಚಿಸಿದ್ದಾರೆ.
ಇಂತಹ ತೆರಿಗೆ ಕಟ್ಟದ ಟಾಪ್ಮೋಸ್ಟ್ 15 ಮಂದಿ ಪಟ್ಟಿ ಲಭ್ಯವಾಗಿದೆ. ಇಂತಹ 15 ಆಸ್ತಿ ಮಾಲೀಕರಿಂದ ಬರೋಬ್ಬರಿ 29 ಕೋಟಿ ತೆರಿಗೆ ಪಾಲಿಕೆಯ ಬೊಕ್ಕಸಕ್ಕೆ ಬರಬೇಕಿದೆ.
ಇದರಲ್ಲಿ ಸರ್ಕಾರಿ ಇಲಾಖೆಯೂ ಸೇರಿದಂತೆ ಗಣ್ಯ ವ್ಯಕ್ತಿಗಳ ಕಟ್ಟಡಗಳ ತೆರಿಗೆಯೂ ಬಾಕಿ ಇದೆ.
ತೆರಿಗೆ ಬಾಕಿದಾರರ ಪಟ್ಟಿ:
1. ಬೆಂಗಳೂರು ಟ್ರಾನ್ಸ್ಪೋರ್ಟ್ ಸರ್ವೀಸ್ -7.35 ಕೋಟಿ ರೂ.
2. ಬಿ.ಎನ್.ಸುಶೀಲಮ್ಮ, ಕೋಗಿಲು ವಿಲೇಜ್ -3.51 ಕೋಟಿ ರೂ.
3. ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು- 2.56 ಕೋಟಿ ರೂ.
4. ಡೀಟಾ ಕನ್ಸ್ಟ್ರಕ್ಷನ್ – 2.27 ಕೋಟಿ ರೂ.
5. ಟಾಂಗ್ಲಿನ್ ಡೆವಲಪ್ಮೆಂಟ್ಸ್ -2.20 ಕೋಟಿ ರೂ.
6. ಆರ್ಎನ್ಎಸ್ ಇಂಡಸ್ಟ್ರೀಸ್-ಪೀಣ್ಯ-1.75 ಕೋಟಿ ರೂ.
7. ಕೆಎಸ್ಟಿಡಿ ವಲಯ ನಿಯಂತ್ರಕ 1.74 ಕೋಟಿ ರೂ.
8. ಯಶೋಧ ಮೆಡಿಕೇರ್ ರಿಸರ್ಚ್ ಸೆಂಟರ್-1.40 ಕೋಟಿ ರೂ.
9. ಲೀಲಾ ಸ್ಕಾಟೀಸ್ ಲೇಸ್- 92 ಲಕ್ಷ ರೂ.
10. ಡಿಪೋ ಮ್ಯಾನೇಜರ್ ಮಹಾನಗರ ಸಾರಿಗೆ- 82 ಲಕ್ಷ ರೂ.
11.ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ , ಕೋರಮಂಗಲ -81 ಲಕ್ಷ ರೂ.
12. ಶರೀಫ್ ಸೆಂಟ್ರ ರಿಚ್ಮಂಡ್ ಟೌನ್ -79 ಲಕ್ಷ ರೂ.
13. ಸಾದಾ ಐಟಿ ಪಾರ್ಕ್ , ಮಹದೇವಪುರ-77 ಲಕ್ಷ ರೂ.
14. ದಿ ವರ್ಕ್ ಮ್ಯಾನೇಜರ್ , ಶಾಂತಿನಗರ -73 ಲಕ್ಷ ರೂ.
15. ಒಕ್ಕಲಿಗರ ಸಂಘ,ಪ್ರಧಾನ ಕಾರ್ಯದರ್ಶಿ -10390207.38 ರೂ.
ಇವರುಗಳಿಗೆ ತೆರಿಗೆ ಕಟ್ಟುವಂತೆ ಈಗಾಗಲೇ ಹಲವು ಬಾರಿ ನೋಟಿಸ್ ನೀಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.