ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ ಅವರನ್ನು ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವ ಹಿನ್ನೆಲೆಯಲ್ಲಿ ಅವರಿಗೆ ಈ ಬಾರಿ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಿ ಗೌರವಿಸಲಾಗಿದೆ.
2014ರಲ್ಲಿ ದೋವೆಲ್ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ನೇಮಕಗೊಂಡಿದ್ದರು. ದೋವೆಲ್ ಇನ್ನು 5 ವರ್ಷ ಈ ಹುದ್ದೆಯಲ್ಲಿಯೇ ಮುಮ್ದುವರೆಯಲಿದ್ದಾರೆ. 2016ರಲ್ಲಿ ಉರಿ ಉಗ್ರರ ದಾಳಿಯ ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್ ಮತ್ತು 2019ರ ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ಗಳು ಇವರ ನಿಗಾವಣೆಯಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿತ್ತು.
1968ರ ತಂಡದ ಐಪಿಎಸ್ ಅಧಿಕಾರಿಯಾಗಿರುವ ಇವರು ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಹೆಚ್ಚು ಕೆಲಸ ಮಾಡಿದ್ದರು. ಇವರು ಐಬಿಯ ಮುಖ್ಯಸ್ಥರೂ ಆಗಿದ್ದರು.
1988ರಲ್ಲಿ ಇವರಿಗೆ ಕೀರ್ತಿ ಚಕ್ರ ಪದಕ ನೀಡಲಾಗಿದೆ. ಈ ಪದಕ ಪಡೆದ ಮೊಟ್ಟಮೊದಲ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
Ajit Doval Stays As NSA, Gets Cabinet Rank With 5-Year Term