ನವದೆಹಲಿ: ಭಾರತೀಯ ವಾಯುಪಡೆಗೆ ಸೇರಿದ ಎಎನ್-32 ವಿಮಾನ ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ವಿಮಾನದಲ್ಲಿ 8 ಜನ ಸಿಬ್ಬಂದಿ ಮತ್ತು 5 ಜನ ಪ್ರಯಾಣಿಕರು ಸೇರಿ 13 ಜನರಿದ್ದರು.
ಸೋಮವಾರ ಮಧ್ಯಾಹ್ನ 12.25ಕ್ಕೆ ಜೋರಾತ್ ವಾಯುನೆಲೆಯಿಂದ ಅರುಣಾಚಲ ಪ್ರದೇಶದ ಮೆಂಚುಕಕ್ಕೆ ವಿಮಾನ ತೆರಳುತ್ತಿತ್ತು. ಟೇಕಾಫ್ ಆದ ಅರ್ಧಗಂಟೆಯಲ್ಲಿ ಅರುಣಾಚಲ ಪ್ರದೇಶದ ವ್ಯಾಪ್ತಿಯಲ್ಲಿ ವಿಮಾನ ಸಂಪರ್ಕ ಕಡಿದುಕೊಂಡಿದೆ.
ವಾಯುನೆಲೆಯೊಂದಿಗೆ ಸಂಪರ್ಕ ಕಡಿದುಕೊಂಡು ಎರಡೂವರೆ ಗಂಟೆಯಾದರೂ ವಿಮಾನದೊಂದಿಗೆ ಸಂಪರ್ಕ ಮರುಸ್ಥಾಪನೆ ಸಾಧ್ಯವಾಗಿಲ್ಲ. ಇದರಿಂದಾಗಿ ಆತಂಕ ಹೆಚ್ಚಿದೆ. ಮಿಗ್-17 ಸುಖೋಯ್ ಯುದ್ಧ ವಿಮಾನದ ಮೂಲಕ ನಾಪತ್ತೆಯಾಗಿರುವ ವಿಮಾನದ ಪತ್ತೆ ಕಾರ್ಯಆರಂಭವಾಗಿದೆ.
Air Force An-32 transport plane goes missing near China border with 13 people onboard