ಬೆಂಗಳೂರು, ಜೂ.2-ನನ್ನ ಇಂಗ್ಲಿಷ್ ಪುಸ್ತಕಗಳು ಕನ್ನಡದಲ್ಲಿ ಹುಟ್ಟಿದ್ದವು.ಬರವಣಿಗೆ ಆಂಗ್ಲವಾಗಿರಬಹುದು ಆದರೆ ಲೇಖನದ ಹೃದಯ ಮಾತ್ರ ಕನ್ನಡ ಎಂದು ಸಾಹಿತಿ, ಸಮಾಜ ಸೇವಕಿ ಡಾ.ಸುಧಾಮೂರ್ತಿ ಕನ್ನಡದ ಭಾಷಾ ಪ್ರೇಮವನ್ನು ಉಲ್ಲೇಖಿಸಿದರು.
ಕಸಾಪದಲ್ಲಿ ನಡೆದ 2019 ಅನುಪಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ 2019ರ ಅನುಪಮಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಜನರು, ನಮ್ಮ ನಾಡು, ನನ್ನ ನೆಚ್ಚಿನ ಲೇಖಕಿ ಅನುಪಮಾ ಅವರ ಪ್ರಶಸ್ತಿ ಪುರಸ್ಕøತ ತವರು ಮನೆಯಿಂದ ಬಾಗೀನ ಪಡೆದಷ್ಟೇ ಸಂತೋಷವಾಗಿದೆ ಎಂದು ಹೇಳಿದರು.
ಕನ್ನಡದಲ್ಲಿ ಹೃದಯದ ಭಾವನೆಗಳನ್ನು, ಮನದಾಳದ ಮಾತುಗಳನ್ನು ಬರೆಯಲು ಸಾಧ್ಯವೆಂದ ಅವರು, ನನಗೆ ಬರವಣಿಗೆ ತುಂಬ ಸಂತೋಷ ತಂದಿದೆ ಹಾಗೂ ಕೆಲಸದ ಒತ್ತಡವನ್ನು ಓದು ಮತ್ತು ಬರವಣಿಗೆಯಿಂದ ನಿಭಾಯಿಸಬಹುದು ಎಂದರು.
ಅನುಪಮಾ ಅವರ ಹಲವು ಕೃತಿಗಳನ್ನು ಓದಿದ್ದೇನೆ. ಅವರ ಕಾದಂಬರಿಗಳು ಅತ್ಯಂತ ಅರ್ಥಪೂರ್ಣ ಮತ್ತು ಹೃದಯಕ್ಕೆ ಹತ್ತಿರವಾಗಿ ಬರೆಯುತ್ತಿದ್ದಾರೆ.ನನ್ನ ಬಾಲ್ಯಾವಧಿಯಲ್ಲಿ ಅವರ ಲೇಖನಗಳು ನನ್ನ ಸಾಹಿತ್ಯ ಬರವಣಿಗೆ ಪರೋಕ್ಷವಾಗಿ ಪ್ರೇರಣೆ ನೀಡಿದ್ದವು ಎಂದು ಪ್ರಶಂಸಿದರು.
ಡಾ.ಮನು ಬಳಿಗಾರ್ ಮಾತನಾಡಿ, ಬಹಳ ಸರಳ ಸಜ್ಜನಿಕೆಯಿಂದ ಜೀವನ ನಡೆಸುತ್ತಿರುವವರು..ಸುಧಾಮೂರ್ತಿಯವರು ಸರಳತೆಯ ಸಹಕಾರ ಮೂರ್ತಿ ಎಂದು ಹೊಗಳಿದರು.
ಸದಾ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡವರು.ಬರಗಾಲ, ವಿಪತ್ತು ಕಾಲದಲ್ಲಿ ದೇಶಕ್ಕೆ ಸಮಾಜ ಸೇವೆ ಮಾಡುತ್ತಾ, ತಾಯಿ ಹೃದಯವನ್ನುವುಳ್ಳವರು ಎಂದು ಪ್ರಶಂಸಿಸಿದರು.
ಸಮಾಜದಲ್ಲಿ ಶೋಷಿತ ಮಕ್ಕಳ, ಮಹಿಳೆಯರಿಗೆ ಜೀವನ ಕಟ್ಟಿಕೊಂಡವರು, ತ್ಯಾಗ ಮನೋಭಾವದ ಮಹತ್ವ ತಿಳಿದವರು ಡಾ.ಸುಧಾಮೂರ್ತಿ ಅವರು ಜೀವನ ನಮಗೆಲ್ಲಾ ಮಾರ್ಗದರ್ಶನ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ನಾಗರತ್ನ ಚಂದ್ರಶೇಖರ್, ಜಿ.ವಿ.ನಿರ್ಮಲಾ, ವನಮಾಲಾ ಸಂಪನ್ನಕುಮಾರ್, ಪ್ರಭಾಮೂರ್ತಿ, ಡಾ.ಟಿ.ಸಿ.ಪೂರ್ಣಿಮಾ ಉಪಸ್ಥಿತರಿದ್ದರು..