ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡ ತನ್ನ ಮೊದಲ ಪಂದ್ಯದಲ್ಲಿ ಲಂಕಾ ಕಿವಿ ಹಿಂಡಿ ಸುಲಭ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಹಾಗಾದ್ರೆ ಬನ್ನಿ ನಿನ್ನೆ ಸೋಫಿಯಾ ಅಂಗಳದಲ್ಲಿ ಕೇನ್ ವಿಲಿಯಮ್ಸನ್ ಪಡೆ ಲಂಕನ್ನರ ಕಿವಿ ಹಿಂಡಿ ಗೆದ್ದಿದ್ದು ಹೇಗೆ ಅನ್ನೋದನ್ನ ನೋಡೋಣ.
ಲಂಕನ್ನರಿಗೆ ಮೊದಲ ಶಾಕ್ ಕೊಟ್ಟ ಮ್ಯಾಟ್ ಹೆನ್ರಿ
ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಪೀಲ್ಡಿಂಗ್ ಆಯ್ದುಕೊಂಡಿತು. ಲಂಕಾ ಪರ ಓಪನರ್ಸ್ಗಳಾಗಿ ಕಣಕ್ಕಿಳಿದ ಕ್ಯಾಫ್ಟನ್ ದೀಮುತ್ ಕರುಣಾರತ್ನೆ ಮತ್ತು ಲಾಹೀರು ತಿರುಮನ್ನೆ ಆeಛಿeಟಿಣ ಓಪನಿಂಗ್ ಕೊಡುವಲ್ಲಿ ಎಡವಿದ್ರು. ಮೊದಲ ಓವರ್ನ ಎರಡನೇ ಎಸೆತದಲ್ಲೆ ವೇಗಿ ಹೆನ್ರಿ ಲಾಹಿರು ತಿರುಮನ್ನೆಗೆ ಪೆವಿಲಿಯನ್ ದಾರಿ ತೋರಿಸಿದ್ರು.
ಇದಾದ ನಂತರ 9ನೇ ಓವರ್ನಲ್ಲಿ ಮತ್ತೆ ದಾಳಿಗಿಳಿದ ವೇಗಿ ಮ್ಯಾಟ್ ಹೆನ್ರಿ 29 ರನ್ ಗಳಿಸಿ ಮುನ್ನಗುತ್ತಿದ್ದ ಕುಶಾಲ್ ಪೆರೆರಾ ಮತ್ತು ಕುಶಾಲ್ ಮೆಂಡಿಸ್ ಅವರನ್ನ ಬಲಿ ತೆಗೆದುಕೊಂಡು ಬ್ಯಾಕ್ ಟು ಬ್ಯಾಕ್ ಎರಡು ವಿಕೆಟ್ ಪಡೆದ್ರು.
ನಂತರ ಬಂದ ಧನಂಜಯ್ ಡಿ’ಸಿಲ್ವಾ, ಆ್ಯಂಜಲೋ ಮ್ಯಾಥ್ಯೂಸ್, ಜೀವನ್ ಒಂದಂಕಿ ರನ್ ಬಾರಿಸಿ ಕಿವೀಸ್ ವೇಗಿಗಳ ಡೆಡ್ಲಿ ಸ್ಪೆಲ್ಗೆ ಬಲಿಯಾದ್ರು. ಲೋವರ್ ಆರ್ಡರ್ನಲ್ಲಿ ಬಂದ ಆಲ್ರೌಂಡರ್ ತಿಸ್ಸಾರಾ ಪೆರೆರಾ 27ರನ್ ಗಳಿಸಿ ಭರವಸೆ ಮೂಡಿಸಿದರಾದ್ರು ಸ್ಯಾಂಟ್ನರ್ಗೆ ವಿಕೆಟ್ ಒಪ್ಪಿಸಿ ಹೊರ ನಡೆದ್ರು.
ಶ್ರೀಲಂಕಾ ತಂಡ 29.2 ಓವರ್ಗಳಲ್ಲಿ 136 ರನ್ಗಳಿಗೆ ಆಲೌಟ್
ಒಂದೆಡೆ ವಿಕೆಟ್ ಬೀಳುತ್ತಿದ್ರೂ ಸ್ಲೊ ಅಂಡ್ ಸ್ಟಡಿ ಇನ್ನಿಂಗ್ಸ್ ಕಟ್ಟಿ ಏಕಾಂಗಿ ಹೋರಾಟ ಮಾಡಿದ ಕ್ಯಾಪ್ಟನ್ ದಿಮುರತ್ನೆ ಕೊನೆಯವರೆಗೂ ಹೋರಾಡಿ 84 ಎಸೆತ ಎದುರಿಸಿ 4 ಬೌಂಡರಿಯೊಂದಿಗೆ ಅಜೇಯ ಅರ್ಧ ಶತಕ ಗಳಿಸಿದ್ರು. ಕೊನೆಯಲ್ಲಿ ಸುರಂಗಾ ಲಕ್ಮಲ್ 7, ಲಿಸಿತ್ ಮಲಿಂಗಾ 1 ರನ್ ಗಳಿಸಿದ್ರು. ಲಂಕಾ ತಂಡ 29.2 ಓವರ್ಗಳಲ್ಲಿ 136 ರನ್ಗಳಿಗೆ ಆಲೌಟ್ ಆಯಿತು.
ಸಾಲಿಡ್ ಓಪನಿಂಗ್ ಕೊಟ್ಟ ಗಪ್ಟಿಲ್, ಮನ್ರೊ
136 ರನ್ಗಳ ಸುಲಭ ಟಾರ್ಗೆಟ್ ಬೆನ್ನತ್ತಿದ ಕಿವೀಸ್ಗೆ ಓಪನರ್ಸ್ಗಳಾದ ಮಾರ್ಟಿನ್ ಗಪ್ಟಿಲ್ ಮತ್ತು ಕಾಲಿನ್ ಮನ್ರೊ ಆeಛಿeಟಿಣ ಓಪನಿಂಗ್ ಕೊಟ್ರು. ಲಂಕಾ ಬೌಲರ್ಸ್ಗನ್ನ ಮನಬಂದಂತೆ ಚೆಂಡಾಡಿದ ಈ ಜೋಡಿ ಬೌಂಡರಿ ಸಿಕ್ಸರ್ಗಳ ಮಳೆಯನ್ನೆ ಸುರಿಸಿದ್ರು.
ಕಿವೀಸ್ಗೆ ಹತ್ತು ವಿಕೆಟ್ಗಳ ಭರ್ಜರಿ ಜಯ
ಡ್ಯಾಶಿಂಗ್ ಓಪನರ್ ಗಪ್ಟಿಲ್ 51 ಎಸೆತದಲ್ಲಿ 8 ಬೌಂಡರಿ 2 ಸಿಕ್ಸರ್ ಬಾರಿಸಿ ಅಜೇಯ 73 ರನ್ ಕಲೆ ಹಾಕಿದ್ರೆ, ಕಾಲಿನ್ ಮನ್ರೊ 47 ಎಸೆತದಲ್ಲಿ 6 ಬೌಂಡರಿ 1 ಸಿಕ್ಸರ್ ಬಾರಿಸಿ ಅಜೇಯ 58 ರನ್ ಗಳಿಸಿ ತಂಡವನ್ನ ಸುಲಭವಾಗಿ ಗೆಲುವಿನ ದಡ ಸೇರಿಸಿದ್ರು. ಇದರೊಂದಿಗೆ 10 ವಿಕೆಟ್ಗಳ ಭರ್ಜರಿ ಜಯ ಪಡೆದು ಟೂರ್ನಿಯಲ್ಲಿ ಶುಭಾರಂಭ ಮಾಡಿತು.