ನವದೆಹಲಿ: ನೂತನ ಕೇಂದ್ರ ಗೃಹಸಚಿವ ಅಮಿತ್ ಷಾ ದೆಹಲಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.
34,488 ಪೊಲೀಸ್ ಸಿಬ್ಬಂದಿಯ ಗೌರವಾರ್ಥ ನಿರ್ಮಿಸಲಾಗಿರುವ ಈ ಸ್ಮಾರಕದಲ್ಲಿ ಹುತಾತ್ಮರಿಗೆ ಗೃಹ ಸಚಿವರು ಗೌರವ ಸಲ್ಲಿಸಿದರು.
ಮೊದಲ ಬಾರಿಗೆ ಕೇಂದ್ರ ಸಚಿವ ಸಂಪುಟ ಸೇರಿರುವ ಅಮಿತ್ ಷಾ ಶನಿವಾರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಬಿಳಿಕ ಅಮಿತ್ ಷಾ ಅವರೊಂದಿಗೆ ಉನ್ನತ ಪೊಲೀಸ್ ಅಧಿಕಾರಿಗಳೂ ಇದ್ದರು. ಸೆಲ್ಯೂಟ್ ಮಾಡುವ ಮೂಲಕ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು.
ಕಳೆದ ಬಾರಿಯ ಸಂಪುಟದಲ್ಲಿ ರಾಜನಾಥ್ ಸಿಂಗ್ ಗೃಹ ಸಚಿವರಾಗಿದ್ದರು. ಈ ಬಾರಿ ಅವರು ರಕ್ಷಣಾ ಖಾತೆ ವಹಿಸಿಕೊಂಡಿದ್ದು ಅಮಿತ್ ಷಾ ಹೆಗಲಿಗೆ ಗೃಹ ಖಾತೆ ಜವಾಬ್ದಾರಿ ಹೊರಿಸಲಾಗಿದೆ.
Amit Shah Pays Tribute At National Police Memorial In Delhi