ಸುಗುಣ ಆಸ್ಪತ್ರೆಯಲ್ಲಿ ಸಜ್ಜುಗೊಂಡ ಇಮೇಜ್ ಗೈಡೆಡ್ ಚಿಕಿತ್ಸಾ ವೇದಿಕೆ

ಬೆಂಗಳೂರು, ಜೂ.1- ರಾಜಾಜಿನಗರದ ಡಾ.ರಾಜ್‍ಕುಮಾರ್ ರಸ್ತೆಯಲ್ಲಿರುವ ಸುಗುಣ ಆಸ್ಪತ್ರೆಯ ಸುಗುಣ ಹಾರ್ಟ್ ಸೆಂಟರ್‍ನಲ್ಲಿ ಅತ್ಯಾಧುನಿಕ ಫಿಲಿಪ್ಸ್ ಅಜುರಿಯನ್ ಸರಣಿಯ ಉಪಕರಣದೊಂದಿಗೆ ಉನ್ನತ ಮಟ್ಟದ ಇಮೇಜ್ ಗೈಡೆಡ್ ಚಿಕಿತ್ಸಾ ವೇದಿಕೆ ಸಜ್ಜುಗೊಂಡಿದೆ.

ನಾಳೆ (ಜೂ.2) ಬೆಳಗ್ಗೆ 10.30ಕ್ಕೆ ಅತ್ಯಾಧುನಿಕ ಫಿಲಿಪ್ಸ್ ಅಜುರಿಯನ್ ಸಿ 7 ಉಪಕರಣದೊಂದಿಗೆ ಕ್ಯಾಥೆಟಿರೈಸೇಶನ್ ಉನ್ನತ ಮಟ್ಟದ ಪ್ರಯೋಗಾಲಯದ ಉದ್ಘಾಟನೆ ನೆರವೇರಲಿದೆ.

ಜಯದೇವ ಹೃದಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಮತ್ತು ಮುಖ್ಯಸ್ಥರಾದ ಡಾ.ಸಿ.ಎನ್.ಮಂಜುನಾಥ್, ಶಾಸಕ ಎಸ್.ಸುರೇಶ್‍ಕುಮಾರ್, ಮಣಿಪಾಲ್ ಹಾರ್ಟ್ ಫೌಂಡೇಶನ್ ಸಂಸ್ಥಾಪಕ ಡಾ.ಸುಭಾಷಚಂದ್ರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ