ಬೆಂಗಳೂರು, ಜೂ.1- ರಾಜಾಜಿನಗರದ ಡಾ.ರಾಜ್ಕುಮಾರ್ ರಸ್ತೆಯಲ್ಲಿರುವ ಸುಗುಣ ಆಸ್ಪತ್ರೆಯ ಸುಗುಣ ಹಾರ್ಟ್ ಸೆಂಟರ್ನಲ್ಲಿ ಅತ್ಯಾಧುನಿಕ ಫಿಲಿಪ್ಸ್ ಅಜುರಿಯನ್ ಸರಣಿಯ ಉಪಕರಣದೊಂದಿಗೆ ಉನ್ನತ ಮಟ್ಟದ ಇಮೇಜ್ ಗೈಡೆಡ್ ಚಿಕಿತ್ಸಾ ವೇದಿಕೆ ಸಜ್ಜುಗೊಂಡಿದೆ.
ನಾಳೆ (ಜೂ.2) ಬೆಳಗ್ಗೆ 10.30ಕ್ಕೆ ಅತ್ಯಾಧುನಿಕ ಫಿಲಿಪ್ಸ್ ಅಜುರಿಯನ್ ಸಿ 7 ಉಪಕರಣದೊಂದಿಗೆ ಕ್ಯಾಥೆಟಿರೈಸೇಶನ್ ಉನ್ನತ ಮಟ್ಟದ ಪ್ರಯೋಗಾಲಯದ ಉದ್ಘಾಟನೆ ನೆರವೇರಲಿದೆ.
ಜಯದೇವ ಹೃದಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಮತ್ತು ಮುಖ್ಯಸ್ಥರಾದ ಡಾ.ಸಿ.ಎನ್.ಮಂಜುನಾಥ್, ಶಾಸಕ ಎಸ್.ಸುರೇಶ್ಕುಮಾರ್, ಮಣಿಪಾಲ್ ಹಾರ್ಟ್ ಫೌಂಡೇಶನ್ ಸಂಸ್ಥಾಪಕ ಡಾ.ಸುಭಾಷಚಂದ್ರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.