ಮೋದಿ ಸಂಪುಟದ 52 ಸಚಿವರು ಕೋಟ್ಯಧಿಪತಿಗಳು, 22 ಸಚಿವರು ಕ್ರಿಮಿನಲ್ ಹಿನ್ನಲೆಯುಳ್ಳವರು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೂತನ ಎನ್ ಡಿಎ ಸರ್ಕಾರದ ಮಂತ್ರಿ ಮಂಡಲದಲ್ಲಿ 52 ಸಚಿವರು ಕೋಟ್ಯಧಿಪತಿಗಳಾಗಿದ್ದರೆ, 22 ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ.

ಪ್ರಧಾನಿ ಮೋದಿ ಮಂತ್ರಿ ಮಂಡಲ ರಚನೆಯಾಗಿ ಖಾತೆ ಹಂಚಿಕೆಯಾದ ಬೆನ್ನಲ್ಲೇ ಜನಪ್ರತಿನಿಧಿಗಳ ಬಗ್ಗೆ ಸಮೀಕ್ಷೆ ನಡೆಸಿರುವ ಎಡಿಆರ್, ವರದಿಯೊಂದನ್ನು ಮಾಡಿದೆ. ಇದರ ಪ್ರಕಾರ ಮೋದಿ ಸಂಪುಟದಲ್ಲಿ 51 ಜನರು ಕರೋಡ್ ಪತಿಗಳಿದ್ದಾರೆ ಹಾಗೂ 22 ಸಚಿವರುಗಳ ವಿರುದ್ಧ ಕ್ರಿಮಿನಲ್ ಕೇಸ್ ಗಳು ದಾಖಲಾಗಿವೆ.

ಮೋದಿ ಸಚಿವ ಸಂಪುಟದಲ್ಲಿ 58 ಜನ ಸಚಿವರಿದ್ದು, ಈ ಪೈಕಿ 51 ಜನರು ಕೋಟ್ಯಾಧಿಪತಿಗಳಾಗಿದ್ದು, 58 ಸಚಿವರ ಪೈಕಿ 22 ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ.

58 ಸಚಿವರ ಪೈಕಿ 56 ಸಚಿವರು ಸಲ್ಲಿಸಿರುವ ಪ್ರಮಾಣ ಪತ್ರವನ್ನು ಅಧ್ಯಯನ ಮಾಡಿ ಎಡಿಆರ್ ಈ ವರದಿ ಪ್ರಕಟಿಸಿದೆ. ಮೋದಿ ಸಂಪುಟದ ಕರೋಡ್ ಪತಿ ಸಚಿವರಲ್ಲಿ ಪ್ರತಿ ವ್ಯಕ್ತಿಗೆ ಸರಾಸರಿ 14.72 ಕೋಟಿ ರೂಪಾಯಿ ಆಸ್ತಿ ಇದೆ. ಪ್ರಮುಖವಾಗಿ ಸಚಿವೆ ಹರ್ ಸಿಮ್ರತ್ ಬಾದಲ್ ಮೋದಿ ಸಂಪುಟದಲ್ಲೇ ಅತಿ ಶ್ರೀಮಂತ ಸಚಿವೆಯಾಗಿದ್ದಾರೆ ಎಂದು ಎಡಿಆರ್ ವಿಶ್ಲೇಷಿಸಿದೆ.

Narendra Modi government 2.0: 51 crorepati ministers, 22 face criminal cases, says ADR

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ