ಲಂಡನ್: ಆತಿಥೇಯ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಉದ್ಘಾಟನಾ ಪಂದ್ಯದಲ್ಲಿ ಅಚ್ಚರಿಯ ಘಟನೆ ಒಂದು ನಡೆದಿದೆ.
ಓವೆಲ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ ಓವರ್‍ನಲ್ಲಿ 8 ವಿಕೆಟ್ ನಷ್ಟಕ್ಕೆ 311 ರನ್ ಕಲೆ ಹಾಕಿತು.
ನಂತರ ದಕ್ಷಿಣ ಆಫ್ರಿಕಾ ತಂಡದ ಓಪನರ್ ಕ್ವಿಂಟಾನ್ ಡಿಕಾಕ್ 25 ರನ್ ಗಳಿಸಿ ಬ್ಯಾಟಿಂಗ್ ಮಾಡುವಾಗ ಅಚ್ಚರಿಯ ಘಟನೆ ನಡೆಯಿತು.
ಆದಿಲ್ ರಶೀದ್ ಅವರ ಹನ್ನೊಂದನೇ ಓವರ್‍ನ ಐದನೇ ಎಸೆತದಲ್ಲಿ ಕ್ವಿಂಟಾನ್ ಡಿಕಾಕ್ ಚೆಂಡನ್ನ ರಿವರ್ಸ್ ಸ್ವೀಪ್‍ಮಾಡಲು ಹೋದ್ರು. ಆದರೆ ಚೆಂಡು ವಿಕೆಟ್‍ಗೆ ಬಡಿಯಿತು. ಆದರೆ ಬೆಲ್ಸ್ ಬೀಳಲಿಲ್ಲ. ಚೆಂಡು ಬೌಂಡರಿ ಲೈನ್ ಸೇರಿತು. ಡಿಕಾಕ್ ಅದೃಷ್ಟ ಚೆನ್ನಾಗಿತ್ತು. ಒಂದು ವೇಳೆ ಬೆಲ್ಸ್ ಬಿದಿದ್ದರೇ ಡಿಕಾಕ್(68) ಅರ್ಧ ಶತಕ ಬಾರಿಸುತ್ತಿರಲಿಲ್ಲ. ಇದು ನೆರೆದಿದ್ದವರನ್ನ ಅಚ್ಚರಿಪಡಿಸಿತು. ಇಂಥದ್ದೆ ಘಟನೆ ಇತ್ತಿಚೆಗೆ ನಡೆದ ಐಪಿಎಲ್‍ನಲ್ಲೂ ನಡೆದಿತ್ತು. ಇದೀಗ ವಿಶ್ವಕಪ್‍ನಲ್ಲೂ ಮರುಕಳಿಸಿದ್ದು ಅದು ಉದ್ಘಾಟನಾ ಪಂದ್ಯದಲ್ಲಿ ಅನ್ನೋದೇ ಮತ್ತೊಂದು ವಿಶೇಷವಾಗಿದೆ.