ನವದೆಹಲಿ,ಮೇ 31- ನಿನ್ನೆಯಷ್ಟೇ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಖಾತೆಗಳನ್ನು ಹಂಚಿದ್ದಾರೆ.
ಅಚ್ಚರಿ ಎಂಬಂತೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾಸೀತಾರಾಮನ್ ಅವರಿಗೆ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ನೀಡಲಾಗಿದೆ. ಕಳೆದ ಬಾರಿ ಅವರು ರಕ್ಷಣಾ ಖಾತೆ ಸಚಿವರಾಗಿದ್ದರು.
ಇತ್ತೀಚಿನ ದಶಕಗಳಲ್ಲಿ ಅತ್ಯಂತ ಮಹತ್ವದ ಹಣಕಾಸು ಖಾತೆಯನ್ನು ಮಹಿಳಾ ಸಚಿವರೊಬ್ಬರು ವಹಿಸಿಕೊಂಡಿರುವುದು ಇದೇ ಮೊದಲು.
ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಡಿ.ವಿ.ಸದಾನಂದಗೌಡ ಅವರಿಗೆ ರಾಸಯನಿಕ ಮತ್ತು ರಸಗೊಬ್ಬರ, ಪ್ರಹ್ಲಾದ್ ಜೋಶಿಗೆ ಸಂಸದೀಯ ವ್ಯವಹಾರ ಹಾಗೂ ರಾಜ್ಯ ಖಾತೆ ಸಚಿವರಾಗಿರುವ ಸುರೇಶ್ ಅಂಗಡಿಗೆ ಅತ್ಯಂತ ಮಹತ್ವದ ರೈಲ್ವೆ ಖಾತೆ ನೀಡಲಾಗಿದೆ.
ಇನ್ನು ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರಕ್ಕೆ ಬರುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಗೃಹ ಖಾತೆಯನ್ನು ನೀಡಲಾಗಿದೆ.
ಕಳೆದ ಬಾರಿ ಗೃಹ ಖಾತೆಯನ್ನು ನಿರ್ವಹಿಸಿದ್ದ ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಖಾತೆಯನ್ನು ನೀಡಲಾಗಿದೆ.
ರಾಜ್ಯವನ್ನು ಪ್ರತಿನಿಧಿಸುವ ಡಿ.ವಿ.ಸದಾನಂದಗೌಡ ಅವರಿಗೆ ರಸಗೊಬ್ಬರ ಮತ್ತು ರಸಾಯನಿಕ ಖಾತೆ ನೀಡಲಾಗಿದೆ. ಕಳೆದ ಬಾರಿ ಕರ್ನಾಟಕದವರೇ ಆದ ಅನಂತ್‍ಕುಮಾರ್ ಅವರಿಗೆ ನೀಡಲಾಗಿತ್ತು.
ಇನ್ನು ರಾಜ್ಯದಿಂದ ಮತ್ತೋರ್ವ ಸಚಿವರಾಗಿರುವ ಪ್ರಹ್ಲಾದ್‍ಜೋಶಿಗೆ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಖಾತೆಯನ್ನು ನೀಡಲಾಗಿದೆ. ಮೊದಲ ಬಾರಿಗೆ ಸಂಪುಟಕ್ಕೆ ಸೇರ್ಪಡೆಯಾಗಿರುವ ಪ್ರಹ್ಲಾದ್‍ಜೋಶಿಗೆ ಅತ್ಯಂತ ಮಹತ್ವದ ಖಾತೆ ನೀಡಿರುವುದು ವಿಶೇಷ.
ಇನ್ನು ಬಹುತೇಕ ಸಚಿವರಿಗೆ ಹಿಂದೆ ನಿಭಾಯಿಸಿದ್ದ ಖಾತೆಗಳನ್ನೇ ನೀಡಲಾಗಿದೆ. ಕೆಲವು ಮಹತ್ವದ ಖಾತೆಗಳಲ್ಲಿ ಸಣ್ಣಪುಟ್ಟ ಬದಲಾವಣೆ ಹೊರತುಪಡಿಸಿದರೆ ಬಹುತೇಕ ಹಳೆ ಮುಖಗಳಿಗೆ ಮತ್ತೆ ಅದೇ ಖಾತೆಯನ್ನು ನೀಡಲಾಗಿದೆ.
ಅಚ್ಚರಿ ಎಂಬಂತೆ ಸಂಪುಟಕ್ಕೆ ಸೇರ್ಪಡೆಯಾಗಿದ್ದ ನಿವೃತ್ತ ಐಎಫ್‍ಎಸ್ ಅಧಿಕಾರಿ ಡಾ.ಸುಬ್ರಹ್ಮಣ್ಯಮ್ ಜಯಶಂಕರ್‍ಗೆ ವಿದೇಶಾಂಗ ವ್ಯವಹಾರ ಖಾತೆ, ಪಿಯೂಸ್ ಗೋಯಲ್‍ಗೆ ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯ ಹೊಣೆಗಾರಿಕೆಯನ್ನು ನೀಡಲಾಗಿದೆ.
ಖಾತೆಗಳ ವಿವರ:
ನರೇಂದ್ರ ಮೋದಿ-ಪ್ರಧಾನಿ, ಬಾಹ್ಯಾಕಾಶ, ಅಣುಶಕ್ತಿ, ರಾಷ್ಟ್ರೀಯ ಭದ್ರತೆ, ಗುಪ್ತಚರ
ಅಮಿತ್ ಶಾ- ಗೃಹ
ನಿತಿನ್‍ಗಡ್ಕರಿ-ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ
ಡಿ.ವಿ.ಸದಾನಂದಗೌಡ-ರಾಯನಿಕ ಮತ್ತು ರಸಗೊಬ್ಬರ
ನಿರ್ಮಲಾಸೀತಾರಾಮನ್-ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರ
ರಾಮ್‍ವಿಲಾಸ್‍ಪಾಸ್ವನ್- ಗ್ರಾಹಕರ ವ್ಯವಹಾರ, ಗ್ರಾಹಕರ ಕಲ್ಯಾಣ ಮತ್ತು ಸಾರ್ವಜನಿಕ ಪಡಿತರ ವಿತರಣೆ
ನರೇಂದ್ರಸಿಂಗ್ ತೋಮರ್-ಕೃಷಿ
ರವಿಶಂಕರ್ ಪ್ರಸಾದ್-ಕಾನೂನು ಮತ್ತು ಸಾಮಾಜಿಕ ನ್ಯಾಯ
ಹಸ್ರ್ಮಿತ್ ಕೌರ್ ಬಾದಲ್-ಆಹಾರ ಸಂರಕ್ಷಣೆ
ತಾವರ್‍ಚೆಂದ್ ಗೆಹ್ಲೋಟ್-ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಸ್ಮೃತಿ ಇರಾನಿ- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜವಳಿ
ಡಾ.ಹರ್ಷವರ್ಧನ-ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ತಂತ್ರಜ್ಞಾನ, ಭೂವಿಜ್ಞಾನ
ಪ್ರಕಾಶ್ ಜಾವಡೇಕರ್-ಪರಿಸರ, ಅರಣ್ಯ, ಹವಾಮಾನ ಬದಲಾವಣೆ, ವಾರ್ತಾ ಮತ್ತು ಪ್ರಚಾರ
ಪಿಯೂಷ್ ಗೋಯಲ್-ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕೆ
ಧಮೇಂದ್ರಪ್ರಧಾನ್- ಸ್ಟೀಲ್, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ
ಮುಕ್ತಾರ್ ಅಬ್ಬಾಸ್ ನಖ್ವಿ-ಅಲ್ಪಸಂಖ್ಯಾತ ವ್ಯವಹಾರ
ಪ್ರಹ್ಲಾದ್ ಜೋಷಿ-ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ
ಡಾ.ಮಹೇಂದ್ರನಾಥ್ ಪಾಂಡೆ-ಕೌಶಲ್ಯಾಭಿವೃದ್ಧಿ ಮತ್ತು ಉದ್ದಿಮೆ
ಅರವಿಂದ್ ಗಣಪತ್ ಸಾವಂತ್-ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ
ಗಿರಿರಾಜ್ ಸಿಂಗ್-ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ
ಗಜೇಂದ್ರಸಿಂಗ್ ಶೇಖಾವತ್-ಜಲಶಕ್ತಿ
ಸ್ವತಂತ್ರ ನಿರ್ವಹಣೆ ರಾಜ್ಯ ಸಚಿವರು:
ಸಂತೋಷ್‍ಕುಮಾರ್ ಗಂಗ್ವಾರ್-ಉದ್ಯೋಗ ಮತ್ತು ಕಾರ್ಮಿಕ
ರಾವ್ ಇಂದ್ರಜಿತ್‍ಸಿಂಗ್-ಯೋಜನೆ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ
ಶ್ರೀಪಾದ್ ಯಶೋನಾಯಕ್-ರಕ್ಷಣಾ ಖಾತೆ ಜೊತೆ ಆಯುಷ್
ಜಿತೇಂದ್ರಸಿಂಗ್-ಉತ್ತರವಲಯ ಅಭಿವೃದ್ಧಿ , ಅಣುಶಕ್ತಿ, ಬಾಹ್ಯಾಕಾಶ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ
ಕಿರಣ್ ರಿಜಿಜು-ಕ್ರೀಡೆ ಮತ್ತು ಯುವಜನ ಸೇವೆ ಹಾಗೂ ಅಲ್ಪಸಂಖ್ಯಾತ ವ್ಯವಹಾರ
ಪ್ರಹ್ಲಾದ್‍ಸಿಂಗ್ ಪಟೇಲ್-ಪ್ರವಾಸೋದ್ಯಮ ಮತ್ತು ಸಂಸ್ಕøತಿ
ರಾಜ್‍ಕುಮಾರ್‍ಸಿಂಗ್-ಇಂಧನ, ಕೌಶಲ್ಯಾಭಿವೃದ್ಧಿ
ಹರದೀಪ್‍ಸಿಂಗ್ ಪುರಿ-ವಸತಿ, ನಗರಾಭಿವೃದ್ಧಿ, ವಾಣಿಜ್ಯ ಮತ್ತು ಕೈಗಾರಿಕೆ
ಮನ್‍ಸುಖ್ ಮಾಂಡವೀಯ-ರಾಸಾಯನಿಕ ಮತ್ತು ರಸಗೊಬ್ಬರ, ಹಡಗು
ರಾಜ್ಯ ಸಚಿವರು:
ಪಗಾನ್‍ಸಿಂಗ್ ಕುಲಸ್ತೆ-ಸ್ಟೀಲ್
ಅಶ್ವಿನಿಕುಮಾರ್ ಚೌಬೆ-ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಅರ್ಜುನ್‍ರಾಮ್ ಮೇಘವಾಲ್-ಸಂಸದೀಯ ವ್ಯವಹಾರ, ಭಾರೀ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ
ಜನರಲ್ ವಿ.ಕೆ.ಸಿಂಗ್-ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು
ಕೃಷ್ಣನ್ ಪಾಲ್-ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಧನ್ವೇ ರಾವ್ ಸಾಹೇಬ್ ದಾದಾರಾವ್-ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕರ ವಿತರಣೆ
ಜಿ.ಕೃಷ್ಣಾರೆಡ್ಡಿ-ಗೃಹ
ಪರ್ಷೋತ್ತಮ್ ರೂಪಾಲಾ-ಕೃಷಿ ಮತ್ತು ರೈತ ಕಲ್ಯಾಣ
ರಾಮದಾಸ್ ಹತಾವಲೆ-ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಸಾದ್ವಿ ನಿರಂಜನ್ ಜ್ಯೋತಿ-ಗ್ರಾಮೀಣಾಭಿವೃದ್ಧಿ
ಬಬುಲ್ ಸುಪ್ರಿಯೋ-ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ
ಸಂಜೀವ್‍ಕುಮಾರ್ ಬಲಿಯಾನ್-ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ
ದೋತ್ರೆ ಸಂಜಯ್ ಶ್ಯಾಮರಾವ್-ಮಾನವ ಸಂಪನ್ಮೂಲ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ
ಅನುರಾಗ್‍ಸಿಂಗ್ ಠಾಕೂರ್-ಹಣಕಾಸು, ಕಾರ್ಪೊರೇಟ್
ಸುರೇಶ್ ಅಂಗಡಿ-ರೈಲ್ವೆ
ನಿತ್ಯಾನಂದ ರೈ-ಗೃಹ
ರತನ್‍ಲಾಲ್ ಕಠಾರಿಯಾ-ಜಲಶಕ್ತಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ವಿ.ಮುರಳೀಧರನ್-ವಿದೇಶಾಂಗ ಮತ್ತು ಸಂಸದೀಯ ವ್ಯವಹಾರ
ರೇಣುಕಾಸಿಂಗ್ ಸರೂಟ-ಬುಡಕಟ್ಟು ವ್ಯವಹಾರ
ಸೋಂಪ್ರಕಾಶ್-ವಾಣಿಜ್ಯ ಮತ್ತು ಕೈಗಾರಿಕೆ
ರಾಮೇಶ್ವರ್ ತೆಲಿ-ಆಹಾರ ಸಂಸ್ಕರಣಾ ಕೈಗಾರಿಕೆ
ಪ್ರತಾಪ್‍ಚಂದ್ರ ಸಾರಂಗಿ-ಸೂಕ್ಷ್ಮ, ಸಣ್ಣ ಮಧ್ಯಮ ಕೈಗಾರಿಕೆ ಮತ್ತು ಪಶುಸಂಗೋಪನೆ
ಕೈಲಾಸ್ ಚೌಧರಿ-ಕೃಷಿ ಮತ್ತು ರೈತರ ಕಲ್ಯಾಣ
ಸುಶ್ರೀ ದೇಬಾಶ್ರೀ ಚೌಧುರಿ-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ