ಲಂಡನ್: ಬೆನ್ಸ್ಟೋಕ್ಸ್ ಅವರ ಆಲ್ರೌಂಡ್ ಆಟದ ನೆರವಿನಿಂದ ಆತಿಥೇಯ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 104 ರನ್ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ವಿಶ್ವಕಪ್ನಲ್ಲಿ ಶುಭಾರಂಭ ಮಾಡಿದೆ.
ಲಂಡನ್ನ ಒವೆಲ್ ಅಂಗಳದಲ್ಲಿ ನಡೆದ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇಂಗ್ಲೆಂಡ್ ಪರ ಆರಂಭಕರಾಗಿ ಬಂದ ಜೆಸನ್ ರಾಯ್ ಮತ್ತು ಜಾನಿ ಬೈರ್ಸ್ಟೊ ಉತ್ತಮ ಆರಂಭ ಕೊಡುವಲ್ಲಿ ಎಡವಿದ್ರು. ಆರಂಭಿಕ ಬ್ಯಾಟ್ಸಮನ್ ಜಾನಿ ಬೈರ್ಸ್ಟೊ ಡಕೌಟ್ ಆದ್ರು. ಎರಡನೇ ವಿಕೆಟ್ಗೆ ಬೈರ್ಸ್ಟೊ ಜೊತೆಗೂಡಿದ ಜೋ ರೂಟ್ ತಂಡವನ್ನ ಆರಂಭಿಕ ಆಘಾತದಿಂದ ಪಾರು ಮಾಡಿ ತಲಾ ಅರ್ಧ ಶತಕದ ಸಂಭ್ರಮವನ್ನ ಆಚರಿಸಿಕೊಂಡ್ರು. ಆದರೆ 54 ರನ್ ಗಳಿಸಿದ್ದ ಜಾಸನ್ ರಾಯ್ ಫಹ್ಲುಕುವಾಯೊಗೆ ವಿಕೆಟ್ ಒಪ್ಪಿಸಿದ್ರೆ 51 ರನ್ ಗಳಿಸಿದ್ದ ಜೋ ರೂಟ್ ರಬಾಡಗೆ ಬಲಿಯಾದ್ರು.
111 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ ಇಂಗ್ಲೆಂಡ್ಗೆ ನಾಯಕ ಇಯಾನ್ ಮಾರ್ಗನ್ ಮತ್ತು ಆಲ್ರೌಂಡರ್ ಬೆನ್ಸ್ಟೋಕ್ಸ್ ಆಸರೆಯಾದರು. ಈ ಜೋಡಿ ನಾಲ್ಕನೆ ವಿಕೆಟ್ಗೆ 106 ರನ್ಗಳ ಜೊತೆಯಾಟ ನೀಡಿದರು. ಅರ್ಧ ಶತಕ ಪೂರೈಸಿದ ಇಯಾನ್ ಮಾರ್ಗನ್ (57), ತಾಹೀರ್ಗೆ ಬಲಿಯಾದ್ರು. ನಂತರ ಬಂದ ಜೋಸ್ ಬಟ್ಲರ್ (18), ಮೊಯಿನ್ ಅಲಿ 3, ಕ್ರಿಸ್ ವೋಕ್ಸ್ 13 ರನ್ಗಳಿಸಿ ಪೆವಲಿಯನ್ ಸೇರಿದ್ರು. ಏಕಾಂಗಿ ಹೋರಾಟ ಮಾಡಿದ ಬೆನ್ ಸ್ಟೋಕ್ಸ್ 79 ಎಸೆತ ಎದುರಿಸಿ 9 ಬೌಂಡರಿಗಳೊಂದಿಗೆ 89 ರನ್ ಕಲೆ ಹಾಕಿದ್ರು. ಕೊನೆಯಲ್ಲಿ ಪ್ಲಂಕೆಟ್ 9, ಆರ್ಚರ್ 7 ರನ್ ಗಳಿದರು. ಕೊನೆಯಲ್ಲಿ ಇಂಗ್ಲೆಂಡ್ ತಂಡ ನಿಗದಿತ ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿತು. ಲುಂಗಿ ಗಿಡಿ ಮೂರು ವಿಕೆಟ್ ಪಡೆದು ಸಂಭ್ರಮಿಸಿದ್ರು.
ಆರಂಭಿಕ ಆಘಾತ ಅನುಭವಿಸಿ ಹರಿಣಗಳು
312 ರನ್ಗಳ ಬೃಹತ್ ಸವಾಲನ್ನ ಬೆನ್ನತ್ತಿದ ದ.ಆಫ್ರಿಕಾ ತಂಡ ಆರಂಭಿಕ ಪ್ಲಂಕೆಟ್ ಮತ್ತು ಆರ್ಚರ್ ದಾಳಿಗೆ ತತ್ತರಿಸಿ ಹೋಯ್ತು. ಮಾರ್ಕ್ರಾಮ್ 11, ಫಾಫ್ ಡುಪ್ಲೆಸಿಸ್ 5, ಮೂರನೇ ವಿಕೆಟ್ಗೆ ಜೊತೆಗೂಡಿದ ವಾನ್ ಡೆರ್ ಡಸೆನ್ 50, ಡಿ ಕಾಕ್ 68 ಭರವಸೆ ಮೂಡಿಸಿದ್ದರು. ಆದರೆ ಈ ಇಬ್ಬರು ಬ್ಯಾಟ್ಸ್ಮನ್ಗಳು ಅರ್ಧ ಶತಕ ಬಾರಿಸಿ ಪೆವಿಲಿಯನ್ ಸೇರಿದ್ರು. ನಂತರ ಡುಮಿನಿ 8, ಪ್ರಟೊರಿಯಸ್ 1, ಫಹ್ಲುಕುವಾಯೋ 24 ರನ್ ಗಳಿಸಿದ್ರು ಕೊನೆಯಲ್ಲಿ ದಕ್ಷಿಣ ಆಫ್ರಿಕಾ ತಂಡ 39.5 ಓವರ್ಗಳಲ್ಲಿ 207 ರನ್ಗೆ ಆಲೌಟ್ ಆಯಿತು. ಅರ್ಧ ಶತಕದ ಜೊತೆಗೆ ಎರಡು ವಿಕೆಟ್ ಪಡೆದು ಆಲ್ರೌಂಡ್ ಪರ್ಫಾಮನ್ಸ ಕೊಟ್ಟ ಬೆನ್ಸ್ಟೋಕ್ಸ್ ಪಮದ್ಯ ಶ್ರೇಷ್ಠ ಪ್ರಶಸ್ತಿಗೆ ಭಜನರಾದರು.