ಬೆಂಗಳೂರು: ಬಿಜೆಪಿಯ ಕಾರ್ಯಕರ್ತನಾಗಿ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, ಈ ಭಾರೀ ನರೇಂದ್ರ ಮೋದಿ, ಅಮಿತ್ ಷಾ ಅವರು ಸಚಿವನಾಗಿ ಸೇವೆ ಸಲ್ಲಿಸಲು ಒಂದು ಅವಕಾಶ ಮಾಡಿಕೊಟ್ಟಿದ್ದು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಸಂಸದ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಯಾರು ಯಾವ ಖಾತೆ ನಿಭಾಯಿಸಬಲ್ಲರು ಎಂಬುದನ್ನು ನೋಡಿ ಪಕ್ಷವೇ ಆ ಸಚಿವ ಸ್ಥಾನ ನೀಡಲಿದೆ. ಹಿರಿಯರು ಸಚಿವ ಸ್ಥಾನ ನೀಡುವುದರ ಕುರಿತು ಅವರೇ ನಿರ್ಧರಿಸಿರುತ್ತಾರೆ. ತನಗೆ ಯಾವುದೇ ಖಾತೆ ನೀಡಿದರು ನಿಭಾಯಿಸುವುದಾಗಿ ತಿಳಿಸಿದರು.
ಜನತೆಗೆ ಪ್ರಧಾನಿ ಮೋದಿ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು, ಈ ಹಿನ್ನೆಲೆಯಲ್ಲಿ ಮುಂದೆ ಮಾಡಬೇಕಾದ ಕೆಲಸಗಳನ್ನು ಎದುರಿಸುವ ಸವಾಲು ಸಹ ನನ್ನ ಮುಂದೆ ಇದೆ ಎಂದರು.