ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೊತೆ ಪ್ರಮಾಣ ವಚನ ಸ್ವೀಕರಿಸಲಿರುವ ನೂತನ ಸಚಿವರ ಪಟ್ಟಿ ಲಭ್ಯವಾಗಿದ್ದು, 2014ರ ಸಂಪುಟದಲ್ಲಿದ್ದ ಕೆಲವು ಸಚಿವರನ್ನು ಕೈಬಿಟ್ಟು, ಹೊಸಬರಿಗೆ ಅವಕಾಶ ಕಲ್ಪಿಸಲಾಗಿದ್ದು, ಒಟ್ಟು 32 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಸಂಜೆ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ವಿದೇಶಿ ಗಣ್ಯರು ಆಗಮಿಸಲಿದ್ದಾರೆ.
ಸಚಿವರ ಪಟ್ಟಿ: ರವಿಶಂಕರ್ ಪ್ರಸಾದ್ ಪಿಯೂಶ್ ಗೋಯಲ್, ಸ್ಮೃತಿ ಇರಾನಿ, ನಿರ್ಮಲ ಸೀತಾರಾಮನ್, ಕಿರಣ್ ರಿಜು, ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ರಾವ್ ಇಂದ್ರಜಿತ್ ಸಿಂಗ್, ಅರುಣ್ ರಾವ್ ಮೇಘವಲ್, ಕ್ರಿಶನ್ ಪಾಲ್ ಗುರ್ಜರ್, ಎಚ್.ಕೌರ್, ಡಿ.ವಿ.ಸದಾನಂದ ಗೌಡ, ಬಾಬು ಲಾಲ್ ಸುಪ್ರಿಯೊ, ಪ್ರಕಾಶ್ ಜಾವಡ್ಕೆಕರ್, ರಾಮದಾಸ್ ಅಠಾವಳೇ, ಜೀತೇಂದ್ರ ಸಿಂಗ್, ನಿರಂಜನ್ ಜ್ಯೋತಿ, ಪುರುಷೋತ್ತಮ ರೂಪಾಲ್, ತಾವರ್ ಚಾಂದ್ ಗೆಹಲೋಟ್
ಹೊಸ ಮುಖಗಳು: ರತನ್ ಲಾಲ್ ಕಠಾರೀಯ, ರಮೇಶ್ ಪೊಕ್ರೀಯಾಲ್ ನಿಶಾಂಕ್, ಆರ್.ಸಿ.ಪಿ. ಸಿಂಗ್, ಜಿ.ಕಿಶನ್ ರೆಡ್ಡಿ, ಸುರೇಶ್ ಅಂಗಡಿ, ಎ ರವೀಂದ್ರನಾಥ್, ಕೈಲಾಶ್ ಚೌದರಿ, ಪ್ರಹ್ಲಾದ್ ಜೋಶಿ, ಸೋಮ್ ಪ್ರಕಾಶ್, ರಾಮೇಶ್ವರ್ ತೇಲಿ, ಸುಬ್ರಾತ್ ಪಾಠಕ್, ದೇಬಾಶ್ರೀ ಚೌಧರಿ.
PM Modi cabinet,New Ministers, Including First-Timers list