ವಿರಾಟ್ ಕೊಹ್ಲಿ ಟೀಂ ಇಂಡಿಯಾದ ರನ್ ಮಷೀನ್. ವಿಶ್ವದ ಎಲ್ಲ ಮೈದಾನಗಳಲ್ಲೂ ರನ್ ಮಳೆಯನ್ನ ಹರಿಸಿ ದಿಗ್ಗಜರ ದಾಖಲೆಗಳನ್ನೆ ಪೀಸ್ ಪೀಸ್ ಮಾಡಿ ಇಡೀ ವಿಶ್ವ ಕ್ರಿಕೆಟ್ಟೆ ತನ್ನತ್ತ ನೋಡುವಂತೆ ಮಾಡಿದವರು. ಒಂದು ವರ್ಷದಲ್ಲಿ ಐಸಿಸಿಯ ಪ್ರಮುಖ ಪ್ರಶಸ್ತಿಗಳು ಒಬ್ಬರ ಪಾಲಾಗುವುದು ಯಾರಿಗೂ ಸಾಧ್ಯವಾಗದ ಮಾತು. ಇದು ರನ್ ಮಷೀನ್ ಕೊಹ್ಲಿಗೆ ಮಾತ್ರ ಸಾಧ್ಯ..ಹೌದು. . ಈ ಗರಿಮೆಗಳೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಪ್ರದರ್ಶನಕ್ಕೆ ನಿದರ್ಶನವಾಗಿವೆ.
ಒಬ್ಬ ಬ್ಯಾಟ್ಸ್ಮನ್ ಆಗಿ ಕೊಹ್ಲಿ ಪ್ರಬುದ್ಧತೆ ಎಂಥದ್ದು ಎಂದು ಹೇಳಲು ಸಾಧ್ಯವಾಗದ ಮಾತು. ದಿಗ್ಗಜ ಆಟಗಾರರನ್ನು ಸಹ ಸಾಮಾನ್ಯ ಆಟಗಾರರಂತೆ ಬದಲಾಯಿಸಿದ್ದು ವಿರಾಟ್ ಕೊಹ್ಲಿಯ ರನ್ ಪ್ರವಾಹ.. ಸ್ವದೇಶ ಇರಲಿ, ವಿದೇಶವಿರಲಿ ರನ್ ಗಳಿಸೋದ್ರಲ್ಲಿ ವಿರಾಟ್ ಕೊಹ್ಲಿಗೆ ಸರಿಸಾಟಿಯೇ ಇಲ್ಲ..
ನಾಯಕನಾಗಿಯೂ ಕೂಡ ವಿರಾಟ್ ಕೊಹ್ಲಿ ಹಲವು ಮಹತ್ತರ ಸಾಧನೆ ಮಾಡಿದ್ದಾರೆ.. ಆದ್ರೆ, ಹಲವು ಸಾಧನೆಗಳನ್ನು ಮಾಡಿರುವ ವಿರಾಟ್ಗೆ ಇರೋದು ಆ ಒಂದು ಕನಸು ಮಾತ್ರ..
ನಾಯಕನಾಗಿ ವಿರಾಟ್ಗೆ ಇದೆ ಅದೊಂದು ಕನಸು..!
ಯೆಸ್.. ಒಬ್ಬ ಬ್ಯಾಟ್ಸ್ಮನ್ ಆಗಿ, ಕ್ಯಾಪ್ಟನ್ ಆಗಿ ವಿರಾಟ್ ಕೊಹ್ಲಿ, ಮುಂದಿರುವ ಅತಿದೊಡ್ಡ ಕನಸು ವಿಶ್ವಕಪ್.. ಆ ಒಂದು ಕನಸು ನನಸು ಮಾಡಿಕೊಳ್ಳಲು ನಾಯಕ ವಿರಾಟ್ ಕೊಹ್ಲಿಗೆ ಇದಕ್ಕಿಂತ ಮೊತ್ತೊಂದು ಅವಕಾಶ ಮುಂದೆ ಸಿಗಲಾರದು.. ಪಿಚ್ ಯಾವುದೇ ಇರಲಿ ನಿರರ್ಗಳವಾಗಿ ರನ್ ಮಳೆ ಹರಿಸೋ ವಿರಾಟ್ ಕೊಹ್ಲಿಯನ್ನ ಕಟ್ಟಿಹಾಕಿದ್ರೆ ಸಾಕು ಅನ್ನೋ ಲೆಕ್ಕಾಚಾರದಲ್ಲಿ ಎದುರಾಳಿಗಳಿದ್ದಾರೆ. ಹೀಗಾಗಿಯೇ ಎದುರಾಳಿ ತಂಡದಲ್ಲಿನ ಬೌಲರ್ಗಳು ಹೊಸ ಅಸ್ತ್ರಗಳನ್ನು ಸಿದ್ದ ಮಾಡಿಕೊಂಡಿದ್ದಾರೆ. ಆದ್ರೆ, ವಿರಾಟ್ ಕೊಹ್ಲಿಯ ಆಸೆ ಆಕಾಂಕ್ಷೆಗಳು ದೊಡ್ಡದಿದೆ. ಹೀಗಾಗಿ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಹೇಗೆ ಆಡ್ತಾರೆ ಅನ್ನೋದೆ ಕುತೂಹಲದ ಸಂಗತಿ.. ಸದ್ಯ ಬ್ಯಾಟಿಂಗ್ ವಿಚಾರದಲ್ಲಿ ಎತ್ತರದಲ್ಲಿರುವ ವಿರಾಟ್ ಕೊಹ್ಲಿಗೆ ವಿಶ್ವಕಪ್ ಗೆಲ್ಲಲು ಇದಕ್ಕಿಂತ ಒಳ್ಳೆಯ ಸಮಯ ಮತ್ತೊಂದಿಲ್ಲ.. ಆದ್ರೆ, ವಿಶ್ವವನ್ನ ಆಳಬೇಕೆಂದ್ರೆ ವಿರಾಟ್ ಕೊಹ್ಲಿ ಮುಂದೆ ಹಲವು ಸವಾಲುಗಳಿವೆ..
ವಿರಾಟ್ ಕೊಹ್ಲಿ ಆಡಬೇಕು, ತಂಡವನ್ನು ಆಡಿಸಬೇಕು..!
ಈ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಮುಂದೆ ಎರಡು ಸವಾಲುಗಳಿವೆ. ಒಂದು ವಿರಾಟ್ ಕೊಹ್ಲಿ ಆಡಬೇಕು.. ಮತ್ತೊಂದು ತಂಡದಲ್ಲಿರುವ ಆಟಗಾರರನ್ನು ಆಡಿಸಬೇಕು.. ಆದ್ರೆ, ಟೀಮ್ ಇಂಡಿಯಾ ಬ್ಯಾಟಿಂಗ್ ಲೈನ್ಆಫ್ ಬಲವಾಗಿದ್ರು. ಆಟಗಾರರು ಉತ್ತಮ ಫಾರ್ಮ್ನಲ್ಲಿ ಇಲ್ಲ ಅನ್ನೋದು ಸಾಭೀತಾಗಿದೆ. ಬೆಸ್ಟ್ ಓಪನರ್ಸ್ ಎನಿಸಿಕೊಂಡ ರೋಹಿತ್-ಶಿಖರ್ ಧವನ್ ನೈಜ ಆಟ ಬರ್ತಿಲ್ಲ… ನಾಲ್ಕನೇ ಕ್ರಮಾಂಕಕ್ಕೆ ಯಾರು ಅನ್ನೋದೆ ಇನ್ನೂ ಗೊಂದಲದ ಗೂಡಾಗಿದೆ.ಹೀಗಾಗಿ ಟಾಪ್ ಆರ್ಡರ್ನಲ್ಲಿ ಹಾಗೂ ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿಯೇ ಆಧಾರವಾಗಬೇಕಿದೆ. ಒತ್ತಡದಲ್ಲಿ ಮತ್ತಷ್ಟು ವಿಧ್ವಂಸಕ ಬ್ಯಾಟಿಂಗ್ ನಡೆಸೋದ್ರಲ್ಲಿ ವಿರಾಟ್ ಸೈ.. ಆದ್ರೆ, ನಿರ್ಣಯ ತೆಗೆದುಕೊಳ್ಳುವುದರಲ್ಲಿ ಎಡವುದು ಕೊಹ್ಲಿಯ ವೀಕ್ನೆಸ್, ಇದು ಐಪಿಎಲ್ ಟೂರ್ನಿಯಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಆದ್ರೆ. ಇಲ್ಲಿ ಮಹೇಂದ್ರ ಸಿಂಗ್ ಧೋನಿ ನೆರವಿಗೆ ಬರೋದ್ರಿಂದ ವಿಶ್ವಕಪ್ನಲ್ಲಿ ವಿರಾಟ್ಗೆ ಪ್ಲಸ್ ಪಾಯಿಂಟ್..
ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟ್ಸ್ಮನ್ಸ್ಗಳ ಏಕಾಗ್ರತೆ ಹಾಳು ಮಾಡಲು ಎದುರಾಳಿಗಳು ಮುಂದಾಗುತ್ತಾರೆ. ಇದು ಜಂಟಲ್ಮ್ಯಾನ್ ಗೇಮ್ನಲ್ಲಿ ಮಾಮೂಲು. ಸ್ಲೆಂಡ್ಜಿಂಗ್ ವೇಳೆ ಏಕಾಗ್ರತೆ ಕಳೆದುಕೊಂಡು ಇತರೆ ಆಟಗಾರರು ವಿಕೆಟ್ ಒಪ್ಪಿಸಬಹುದು. ಆದ್ರೆ, ವಿರಾಟ್ ಏಕಾಗ್ರತೆ ಕೆಡಿಸಲು ಮುಂದಾದಷ್ಟು ವಿರಾಟ್ ಅಪಾಯಕಾರಿ ಆಗೋದ್ರಲ್ಲಿ ಅನುಮಾನವೇ ಇಲ್ಲ.. ಇದು ಈಗಾಗಲೇ ಫ್ರೂವ್ ಆಗಿದೆ. ಅಲ್ದೇ ವಿರಾಟ್ಗೆ ಸ್ಲೆಡ್ಜಿಂಗ್ ಮಾಡಬೇಡಿ ಅನ್ನೋ ಸೂಚನೆಯೂ ಕೊಟ್ಟಿದ್ದನ್ನು ನಾವು ಸ್ಮರಿಸಬಹುದು.. ಪ್ರಮುಖವಾಗಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನದ ವಿರುದ್ಧ ಸ್ಲೆಡ್ಜಿಂಗ್ಗೆ ಅವಕಾಶವಿದ್ದು, ವಿರಾಟ್ ಹೇಗೆ ಎದುರಿಸುತ್ತಾರೆ ಅನ್ನೋದು ಕೂಡ ವಿರಾಟ್ ಕೊಹ್ಲಿ ಮುಂದಿದೆ..
ಇನ್ನೂ 2011ರಲ್ಲಿ ಟೀಮ್ ಇಂಡಿಯಾದಲ್ಲಿ ಸಾಮಾನ್ಯ ಆಟಗಾರನಾಗಿದ್ದ ವಿರಾಟ್ ಕೊಹ್ಲಿ, 2015ರ ವಿಶ್ವಕಪ್ ವೇಳೆಗೆ ಸೂಪರ್ ಸ್ಟಾರ್ ಬ್ಯಾಟ್ಸ್ಮನ್ ಆಗಿ ಬೆಳೆದಿದ್ದು ಇತಿಹಾಸ.. ಬಳಿಕ ಟೀಮ್ ಇಂಡಿಯಾದ ಚುಕ್ಕಾಣಿ ಹಿಡಿದ ವಿರಾಟ್ ಕೊಹ್ಲಿ ತಂಡಕ್ಕೆ ಹಲವು ದಿಗ್ವಿಜಯಗಳನ್ನು ತಂದುಕೊಟ್ಟಿದ್ದಾರೆ. ಆದ್ರೆ, ಇದೇ ಮೊದಲ ಬಾರಿ ವಿರಾಟ್ ನೇತೃತ್ವದಲ್ಲಿ ಟೀಮ್ ಇಂಡಿಯಾ ವಿಶ್ವಯುದ್ದಕ್ಕೆ ಹೊರಟಿದ್ದಾರೆ. ಇನ್ನೂ ಉತ್ತುಂಗ ಫಾರ್ಮ್ನಲ್ಲಿರುವ ನಾಯಕ ವಿರಾಟ್ ಕೊಹ್ಲಿಗೆ ಈ ವಿಶ್ವಕಪ್ ಗೆಲ್ಲುವುದು ಪ್ರತಿಷ್ಠೆಯ ವಿಚಾರವಾಗಿದೆ…
ಚಾಂಪಿಯನ್ಸ್ ಟ್ರೋಫಿಯಲ್ಲಿ ಕೈಕೊಟ್ಟಿದ್ದ ಅದೃಷ್ಟ
ಕ್ಯಾಪ್ಟನ್ ಕೊಹ್ಲಿ ನಾಯಕನಾಗಿ ಹಲವಾರು ಸರಣಿಗಳನ್ನ ಗೆದ್ದಿದ್ದಾರೆ. ಆದರೆ ಐಸಿಸಿ ಟ್ರೋಫಿಯನ್ನ ಇದುವರೆಗೂ ಗೆದ್ದಿಲ್ಲ. ಎರಡು ವರ್ಷಗಳ ಹಿಂದೆ ಇದೇ ಆಂಗ್ಲರ ನಾಡಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ವಿರಾಟ್ ಪಡೆ ಹೀನಾಯ ಸೋಲು ಕಂಡಿತ್ತು. ಅಂದು ಕೈಗೆ ಬಂದು ತುತ್ತು ಬಾಯಿಗೆ ಬಂದಿಲ್ಲ ಎನ್ನುವಂತಾಗಿತ್ತು ಕ್ಯಾಪ್ಟನ್ ಕೊಹ್ಲಿಯ ಸ್ಥಿತಿ.