ಇಡೀ ಜಗತ್ತೆ ಕಾತರದಿಂದ ಕಾಯುತ್ತಿರುವ ವಿಶ್ವಕಪ್ಗೆ ಇನ್ನು ಒಂದು ದಿನ ಬಾಕಿ ಇದೆ. ಈ ಬಾರಿ ವಿಶ್ವಕಪ್ ಯಾರು ಗೆಲ್ತಾರೆ ಅನ್ನೋದನ್ನ ಹೇಳೋದು ಕಷ್ಟ ಆದ್ರೆ ಸೆಮಿಫೈನಲ್ಗೆ ಯಾರೆಲ್ಲ ಹೋಗಬಹುದು ಅನ್ನೋದನ್ನ ಸುಲಭವಾಗಿ ಹೇಳಬಹುದಾಗಿದೆ. ಬನ್ನಿ ಹಾಗಾದ್ರೆ ಸೆಮಿಫೈನಲ್ಗೆ ಹೋಗಬಹುದಾದ ಟಾಪ್ 5 ತಂಡಗಳು ಯಾವುದು ಅನ್ನೊದನ್ನ ನೋಡೋಣ.
ನಂ. 1 ಟೀಂ ಇಂಡಿಯಾ
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಈ ಬಾರಿಯ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳ ಪೈಕಿ ಒಂದಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಟೀಂ ಇಂಡಿಯಾ ಸೀಮಿತ ಓವರ್ಗಳ ಫಾರ್ಮೆಟ್ನಲ್ಲಿ ಇನ್ನಿಲ್ಲದ ಸಾಧನೆ ಮಾಡಿದೆ. ಇದಕ್ಕೆ ಕ್ಯಾಪ್ಟನ್ ಕೊಹ್ಲಿಯ ನಾಯಕತ್ವ ಮತ್ತು ಆಟಗಾರರ ಪರಶ್ರಮವೇ ಕಾರಣವಾಗಿದೆ. ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ರಂಥಹ ವಿಶ್ವ ಶ್ರೇಷ್ಠ ಓಪನರ್ಸ್ಗಳು ಹಾಗೂ ಯಾರ್ಕರ್ ಕಿಂಗ್ ಬೂಮ್ರಾ ಮತ್ತು ಹಾರ್ದಿಕ್ ಪಾಂಡ್ಯರಂತ ಯುವ ಆಟಗಾರರು ತಂಡವನ್ನ ಹೊಸ ದಿಕ್ಕಿನತ್ತಕೊಂಡೊಯ್ದಿದ್ದಾರೆ. ಇನ್ನು ಸ್ಪಿನ್ ಡಿಪಾರ್ಟ್ಮೆಂಟ್ನಲ್ಲಿ ರಿಸ್ಟ್ ಸ್ಪಿನ್ನರಸ್ಗಳಾದ ಚಹಲ್ ಮತ್ತು ಕುಲ್ದೀಪ್ ತಂಡದ ಸ್ಪಿನ್ ವಿಭಾಗಕ್ಕೆ ಹೊಸ ಚರಿಷ್ಮಾ ತಂದುಕೊಟ್ಟಿದ್ದಾರೆ. ಈ ಬಾರಿಯ ವಿಶ್ವಕಪ್ನಲ್ಲಿ ಈ ಇಬ್ಬರು ಸ್ಪಿನ್ನರ್ಸ್ಗಳು ಮಿಂಚಿದ್ರೆ ಟೀಂ ಇಂಡಿಯಾ ಸೆಮಿಫೈನಲ್ವರೆಗೂ ಹೋಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ನಂ.2 ಇಂಗ್ಲೆಂಡ್
ಈ ಬಾರಿಯ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ. ಯಾಕಂದ್ರೆ ಆಂಗ್ಲರು ತವರಿನಲ್ಲಿ ವಿಶ್ವಕಪ್ ಆಡುತ್ತಿದ್ದಾರೆ ಮತ್ತು ಎಲ್ಲ ತಂಡಗಳಿಗಿಂತಲೂ ತಂಡದ ಬಲಿಷ್ಠವಾಗಿದೆ. ಇದರ ಜೊತೆಗೆ ಈ ಹಿಂದೆ ನಡೆದ ಎರಡು ವಿಶ್ವಕಪ್ಗಳಲ್ಲೂ ಆತಿಥ್ಯ ವಹಿಸಿದವರೇ ಗೆದ್ದಿರೋದ್ರಿಂದ ಆಂಗ್ಲರೇ ಈ ಬಾರಿ ವಿಶ್ವಕಪ್ಗೆ ಮುತ್ತಿಕ್ಕುವ ಫೇವರಿಟ್ ಎನಿಸಿದ್ದಾರೆ. ಆಂಗ್ಲರು ಈ ಬಾರಿ ವಿಶ್ವಕಪ್ ಗೆಲ್ಲುತ್ತಾರೆ ಅನ್ನೋದಕ್ಕೆ ಬಲವಾದ ಕಾರಣ ಏನೆಂದರೆ ಇಡೀ ತಂಡ ಎಲ್ಲ ಡಿಪಾರ್ಟ್ಮೆಂಟ್ನಲ್ಲೂ ಸಮತೋಲನದಿಂದ ಕೂಡಿದೆ. ಜಾಸನ್ ರಾಯ್ ಮತ್ತು ಜಾನಿ ಬೇರ್ ಸ್ಟೋ ಒಳ್ಳೆಯ ಓಪನರ್ಸ್ ಜೊತೆಗೆ ಮಿಡ್ಲ್ ಆರ್ಡರ್ನಲ್ಲಿ ನಾಯಕ ಇಯಾನ್ ಮಾರ್ಗನ್ ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ಒಳ್ಳೆಯ ಫಾರ್ಮ್ನಲ್ಲಿದ್ದಾರೆ. ಇನ್ನು ಬೌಲಿಂಗ್ ಡಿಪಾರ್ಟ್ಮೆಂಟ್ನಲ್ಲಿ ಟಾಮ್ ಕರನ್ ಮತ್ತು ಕ್ರಿಸ್ ವೋಕ್ಸ್ ರಂಥ ಪ್ರತಿಭಾನ್ವಿತರಿದ್ದಾರೆ.
ನಂ.3 ಆಸ್ಟ್ರೇಲಿಯಾ
ಇದುವರೆಗಿನ ಎಲ್ಲ ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ತಂಡ ಎಂದರೆ ಅದು ಆಸ್ಟ್ರೇಲಿಯಾ. ಐದು ವಿಶ್ವಕಪ್ ಗೆದ್ದಿರುವ ಆಸಿಸ್ ಈ ಬಾರಿಯ ವಿಶ್ವಕಪ್ ಆರನೇ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದೆ. ಈ ಬಾರಿಯ ವಿಶ್ವಕಪ್ಗೂ ಮುನ್ನ ತಂಡದ ಸ್ಟಾರ್ ಆಟಗಾರರಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಬಂದಿದ್ದು ಫಿಂಚ್ ಪಡೆಗೆ ಆನೆ ಬಲ ಬಂದಂತಾಗಿದೆ. ಉಸ್ಮಾನ್ ಖ್ವಜಾ ಮತ್ತು ಶಾನ್ ಮಾರ್ಷ್ ತಂಡದ ಆಧಾರ ಸ್ತಂಭವಾಗಿದ್ದಾರೆ. ಬೌಲಿಂಗ್ ಡಿಪಾರ್ಟ್ಮೆಂಟ್ನಲ್ಲಿ ಪ್ಯಾಟ್ ಕಮಿನ್ಸ್ ಮತ್ತು ಆ್ಯಡಮ್ ಜಾಂಪಾ ನಿರ್ಣಾಯಕ ಪಾತ್ರವಹಿಸಲಿದ್ದಾರೆ.
ನಂ.4 ದಕ್ಷಿಣ ಆಫ್ರಿಕಾ
ಸೌತ್ ಆಫ್ರಿಕಾ ವಿಶ್ವ ಕ್ರಿಕೆಟ್ನ ಬಲಿಷ್ಠ ತಂಡ ಆದ್ರೆ ಐಸಿಸಿ ಟೂರ್ನಿಗಳಲ್ಲಿ Uಟಿಟuಛಿಞಥಿ ತಂಡ ಎಂದು ಗುರುತಿಸಿಕೊಂಡು ಛಿhoಞeಡಿs ಎಂಬ ಹಣೆ ಪಟ್ಟಿ ಹೊಂದಿದೆ. ಪ್ರತಿ ವಿಶ್ವಕಪ್ನಲ್ಲೂ ಬಲಿಷ್ಠ ತಂಡದೊಂದಿಗೆ ಬಂದ್ರು ಅದೃಷ್ಟ ಈ ತಂಡದೊಂದಿಗೆ ಇರೊದಿಲ್ಲ. ಈ ಕಾರಣಕ್ಕಾಗಿ ವಿಶ್ವಕಪ್ ಗೆಲ್ಲುವ ಸನಿಹದಲ್ಲಿ ಮುಗ್ಗರಿಸಿ ಬಿದ್ದು ಈ ಬಾರಿ ವಿಶ್ವಕಪ್ನಲ್ಲಿ ಬಲಿಷ್ಠ ತಂಡವನ್ನ ಕಟ್ಟಿಕೊಂಡು ಕಣಕ್ಕಿಳಿದು ಈ ಬಾರಿ ಚೊಚ್ಚಲ ವಿಶ್ವಕಪ್ ಗೆಲ್ಲಲ್ಲೇಬೇಕೆಂದು ಟೊಂಕ ಕಟ್ಟಿ ನಿಂತಿದೆ. ಹಾಶಿಂ ಆಮ್ಲಾ, ಫಾಫ್ ಡುಪ್ಲೆಸಿಸ್ ಕ್ವಿಂಟಾನ್ ಡಿಕಾಕ್ ರಂತ ಪ್ರತಿಭಾನ್ವಿತಾ ಆಟಗಾರರಿದ್ದಾರೆ. ಇನ್ನು ಬೌಲಿಂಗ್ ಡಿಪಾರ್ಟ್ಮೆಂಟ್ನಲ್ಲಿ ಡೇಲ್ ಸ್ಟೇನ್, ಕಗಿಸೊ ರಬಾಡ ಮತ್ತು ಲುಂಗಿ ಗಿಡಿಯಂಥ ಟ್ಯಾಲೆಂಟ್ ಬೌಲರ್ಗಳಿದ್ದಾರೆ.
ನಂ.5 ನ್ಯೂಜಿಲೆಂಡ್
ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾ ತಂಡದಂತೆ ವಿಶ್ವ ಕ್ರಿಕೆಟ್ನಲ್ಲಿ ಬಲಿಷ್ಠ ತಂಡ ಆದ್ರೆ ಐಸಿಸಿ ಟೂರ್ನಿಗಳಲ್ಲಿ ದಕ್ಷಿಣ ಆಫ್ರಿಕಾ ತಂಡದಂತೆ ಚೋಕರ್ಸ್ ಎಂಬ ಹಣೆಪಟ್ಟಿ ಹೊತ್ತಿದೆ. ಪ್ರತಿ ವಿಶ್ವಕಪ್ನಲ್ಲೂ ಚೆನ್ನಾಗಿ ಆಡಿದ್ರು ಕೊನೆಯಲ್ಲಿ ಕಿವಿ ಹಿಂಡಿಸಿಕೊಂಡು ಟೂರ್ನಿಯಿಂದ ಹೊರ ಬಿದ್ದಿದೆ ಹೆಚ್ಚು. ಇದಕ್ಕೆ ಬೆಸ್ಟ್ ಅಂದ್ರೆ ಕಳೆದ ಬಾರಿಯ ವಿಶ್ವಕಪ್ ಫೈನಲ್ನಲ್ಲಿ ಆಸಿಸ್ ವಿರುದ್ಧ ಹೀನಾಯವಾಗಿ ಸೋತಿತ್ತು. ಈ ಬಾರಿಯ ವಿಶ್ವಕಪ್ ಮಹಾ ಸಂಗ್ರಾಮದಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದಲ್ಲಿ ಕಿವೀಸ್ ಎಂಥ ಬಲಿಷ್ಠ ತಂಡಗಳನ್ನ ಹೊಡೆದುರುಳಿಸುವ ತಾಖತ್ತು ಹೊಂದಿದೆ. ಮಾರ್ಟಿನ್ ಗಪ್ಟಿಲ್, ಕೇನ್ ವಿಲಿಯಮ್ಸನ್, ರಾಸ್ ಟೇಲರ್ ಮತ್ತು ಟಾಮ್ ಲಾಥಮ್ ರಂಥ ಸ್ಪೋಟಕ ಆಟಗಾರರಿದ್ದಾರೆ. ಇನ್ನು ಬೌಲಿಂಗ್ ಡಿಪಾರ್ಟ್ಮೆಂಟ್ನಲ್ಲಿ ಟ್ರಂಟ್ ಬೌಲ್ಟ್, ಮಿಶೆಲ್ ಸ್ಯಾಂಟ್ನರ್ ಮತ್ತು ಜೇಮ್ಸ್ ನೀಶಾಮ್ ರಂಥ ಪ್ರತಿಭಾನ್ವಿತಾ ಬೌಲರ್ಸ್ಗಳಿದ್ದಾರೆ.
ಒಟ್ಟಾರೆ ಈ ಬಾರಿಯ ವಿಶ್ವಕಪ್ನಲ್ಲಿ ಈ ಐದು ತಂಡಗಳು ಸೆಮಿಫೈನಲ್ಗೆ ಹೋಗುವ ಫೇವರಿಟ್ ತಂಡಗಳೆನಿಸವೆ.