ಇಡೀ ಕ್ರಿಕೆಟ್ ಲೋಕವೇ ಕಾತರದಿಂದ ಕಾಯುತ್ತಿರುವ ವಿಶ್ವಕಪ್ ಮಹಾ ಸಂಗ್ರಾಮಕ್ಕೆ ಎಲ್ಲ ತಂಡಗಳು ಸಜ್ಜಾಗಿವೆ. ವಿಶ್ವಕಪ್ ಗೆಲ್ಲುವ ರೇಸ್ನಲ್ಲಿರುವ ಕೊಹ್ಲಿ ಸೈನ್ಯ ಈಗಾಗಲೇ ಆಂಗ್ಲರ ನಾಡಿಗೆ ತಲುಪಿದೆ. ಆಂಗ್ಲರ ನಾಡಲ್ಲಿ ನಡೆಯಲಿರುವ ವಿಶ್ವಕಪ್ನಲ್ಲೊ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳ ಪೈಕಿ ಒಂದಾಗಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ವಿಶ್ವಯುದ್ದಕ್ಕೂ ಮುನ್ನ ತಂಡದಲ್ಲಿ ಕೆಲವು ಸಮಸ್ಯೆಗಳು ಹಾಗೆ ಉಳಿದಿವೆ. ಇದರಲ್ಲಿ ನಾಲ್ಕನೆ ಸ್ಲಾಟ್ ಸಮಸ್ಯೆ ಕೂಡ ಒಂದು.
ಟೀಂ ಇಂಡಿಯಾಕ್ಕೆ ತಲೆ ನೋವಾಗಿದೆ ನಾಲ್ಕನೆ ಸ್ಲಾಟ್
ಟೀಂ ಇಂಡಿಯಾ ಕಳೆದ ಮೂರು ವರ್ಷಗಳಿಂದ ನಾಲ್ಕನೆ ಸ್ಲಾಟ್ ಸಮಸ್ಯೆಯಿಂದ ಬಳಲುತ್ತಿದೆ. ತಂಡದಲ್ಲಿ ಎಲ್ಲ ಸಮಸ್ಯೆಗಳನ್ನ ಬಗೆ ಹರಿಸಲಾಗಿದೆ . ಆದರೆ ನಾಲ್ಕನೆ ಸ್ಲಾಟ್ ಸಮಸ್ಯೆ ಮಾತ್ರ ಕಗ್ಗಂಟಾಗಿ ಉಳಿದಿದೆ. ಕಳೆದ ಮೂರು ವರ್ಷ ಅಂದ್ರೆ ಚಾಂಪಿಯನ್ಸ್ ಟ್ರೋಫಿ ನಂತರ ಈ ಸ್ಲಾಟ್ನಲ್ಲಿ ಬರೋಬ್ಬರಿ 11 ಬ್ಯಾಟ್ಸ್ಮನ್ಗಳು ಆಡಿದ್ದಾರೆ. ಆದರೆ ಈ ಯಾವ ಬ್ಯಾಟ್ಸ್ಮನ್ಗಳು ಗಟ್ಟಿಯಾಗಿ ನಿಲ್ಲಲ್ಲಿಲ್ಲ.
ಭರವಸೆ ಮೂಡಿಸಿ ತಂಡದಿಂದ ಗೇಟ್ ಪಾಸ್ ಪಡೆದ ಅಂಬಟಿ
ಟೀಂ ಇಂಡಿಯಾಕ್ಕೆ ಸಮಸ್ಯೆಯಾಗಿದ್ದ ನಾಲ್ಕನೆ ಸ್ಲಾಟ್ಗೆ ವರ್ಷದ ಹಿಂದೆ ಕೊನೆಗೂ ಒಂದು ಉತ್ತರ ಸಿಕ್ಕಿತ್ತು. ಅದೇ ಹೈದ್ರಾಬಾದ್ ಬ್ಯಾಟ್ಸಮನ್ ಅಂಬಟಿ ರಾಯ್ಡು . ಕಳೆದ ವರ್ಷ ನಾಲ್ಕನೆ ಸ್ಲಾಟ್ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ರಾಯ್ಡು ಭರವಸೆ ಮೂಡಿಸಿದ್ರು. ಕೊನೆಗೂ ಅಂತೂ ಇಂತೂ ನಾಲ್ಕರ ಸ್ಲಾಟ್ಗೆ ಪರಿಹಾರ ಸಿಕ್ಕಿತ್ತು ಅಂತ ಎಲ್ಲರೂ ನಿಟ್ಟುಸಿರು ಬಿಡುತ್ತಿರುವಾಗಲೇ ಅಂಬಾಟಿ ರಾಯ್ಡು ತವರಿನಲ್ಲಿ ನಡೆದ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಸರಣಿಗಳಲ್ಲಿ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಪರ್ಫಾಮನ್ಸ್ ಕೊಟ್ರು. ಇದರ ಪರಿಣಾಮವೇ ಅಂಬಟಿ ಲಂಡನ್ ಟಿಕೆಟ್ ಪಡೆಯುವ ಅವಕಾಶದಿಂದ ವಂಚಿತರಾದ್ರು.
ನಾಲ್ಕರ ಕಗ್ಗಂಟಿಗೆ ಪರಿಹಾರ ಸೂಚಿಸಿದ್ದ ಎಂ.ಎಸ್.ಕೆ ಪ್ರಸಾದ್
ವಿಶ್ವಕಪ್ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡಬೇಕೆನ್ನುವ ಸಮಸ್ಯಗೆ ಆಯ್ಕೆ ಮಂಡಳಿಯ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ಪರಿಹಾರ ಸೂಚಿಸಿದ್ದಾರೆ. ನಾಲ್ಕನೆ ಕ್ರಮಾಂಕದಲ್ಲಿ ತಮಿಳುನಾಡು ಆಲ್ರೌಂಡರ್ ವಿಜಯ್ ಶಂಕರ್ ಆಡಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂಜುರಿಗೆ ಗುರಿಯಾಗಿದ್ದಾರೆ ವಿಜಯ್ ಶಂಕರ್
ವಿಶ್ವಕಪ್ ಮಹಾ ಯುದ್ದದ್ದಲ್ಲಿ ತಂಡಕ್ಕೆ ತಲೆ ನೋವಾಗಿರುವ ನಾಲ್ಕನೆ ಸ್ಲಾಟ್ನಲ್ಲಿ ಆಡಲು ಸಜ್ಜಾಗಿರೊದಾಗಿ ತಮಿಳುನಾಡು ಆಲ್ರೌಂಡರ್ ವಿಜಯ ಶಂಕರ್ ಹೇಳಿದ್ದಾರೆ. ತಂಡದ ಸಹ ಆಲ್ರೌಂಡರ್ ಹಾರ್ದಿಕ್ ಜೊತೆ ಸ್ಪರ್ಧೆ ಮಾಡೊದಿಲ್ಲ ಎಂದಿರುವ ವಿಜಯ್ ಶಂಕರ್ ಮಹಾ ಟೂರ್ನಿಯಲ್ಲಿ ನಾಲ್ಕನೆ ಸ್ಲಾಟ್ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಮೊನ್ನೆ ವಿಜಯ್ ಶಂಕರ್ ಪ್ರಾಕ್ಟೀಸ್ ಮಾಡುವ ವೇಳೆ ಗಾಯಗೊಂಡಿದ್ದಾರೆ. ಹೀಗಾಗಿ ಗಾಯದಿಂದ ಈ ಹೈದ್ರಾಬಾದ್ ಬ್ಯಾಟ್ಸ್ಮನ್ ಚೇತರಿಸಿಕೊಳ್ಳುತ್ತಿದ್ದಾರೆ.
ನಂ.4 ರೇಸ್ನಲ್ಲಿ ಕೇದಾರ್ ಜಾಧವ್
ಮೊನ್ನೆ ನ್ಯುಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ನಾಲ್ಕನೆ ಸ್ಲಾಟ್ನಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಫ್ಲಾಪ್ ಆಗಿರೋದ್ರಿಂದ ಇದೀಗ ಕೇದಾರ್ ಜಾಧವ್ ರೇಸ್ನಲ್ಲಿದ್ದಾರೆ. ಕೇದಾರ್ ಜಾಧವ್ ಮೊನ್ನೆ ಐಪಿಎಲ್ನಲ್ಲಿ ಇಂಜುರಿಗೆ ಗುರಿಯಾಗಿ ಟೂರ್ನಿ ಯಿಂದ ಹೊರ ನಡೆದಿದ್ರು. ಇದೀಗ ಈ ಸ್ಲಾಟ್ನಲ್ಲಿ ಆಡಲು ಕೇದಾರ್ ಜಾಧವ್ ಕೂಡ ಪೈಪೋಟಿ ಕೊಡಲಿದ್ದಾರೆ. ಜಾಧವ್ ಈಗಷ್ಟೆ ಚೇತರಿಸಿಕೊಂಡಿದ್ದು ಫಿಟ್ನಸ್ ಪರೀಕ್ಷೆಯಲ್ಲಿ ಪಾಸಾಗಿ ತಂಡದಲ್ಲಿ ಸ್ಥಾನ ಪಡೆಯಬೇಕಿದೆ. ಒಟ್ಟಾರೆ ನಾಲ್ಕನೆ ಕ್ರಮಾಂಕಕ್ಕೆ ಕೇದಾರ್ ಜಾಧವ್ ಸ್ಥಾನ ಪಡೆದು ಈ ಸ್ಲಾಟ್ನಲ್ಲಿ ಜಾಧೂ ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.