ಎದುರಾಳಿಗಳ ಖೇಲ್ ಖತಂ ಮಾಡಲಿದ್ದಾರೆ ಗೇಮ್ ಫಿನಿಶರ್ಗಳು: ವಿಶ್ವ ಯುದ್ದಲ್ಲಿ ಗೇಮ್ ಫಿನಿಶರ್ಗಳು ಯಾರು ಗೊತ್ತಾ ?

ಈ ಬಾರಿಯ ವಿಶ್ವಕಪ್ನಲ್ಲಿ ಗೇಮ್ ಫಿನಿಶರ್ಗಳು ಗಮನ ಸೆಳೆಯುತ್ತಾರೆ. ಗೇಮ್ ಫಿನಿಶರ್ಗಳ ಮೇಲೆ ತಂಡದ ಗೆಲುವು ನಿಂತಿರೋದ್ರಿಂದ ಐದು ಗೇಮ್ ಫಿನಿಶರ್ಗಳು ಮಹಾಸಂಗ್ರಾಮದಲ್ಲಿ ಗಮನಸೆ ಸೆಳೆಯಲಿದ್ದಾರೆ . ಹಾಗಾದ್ರೆ ಈ ಗೇಮ್ ಫಿನಿಶರ್ಗಳು ಯಾರು ಅನ್ನೋದನ್ನ ನೋಡೋಣ.

ಹಾರ್ದಿಕ್ ಪಾಂಡ್ಯ
ಟೀಂ ಇಂಡಿಯಾದ ಆಲ್ರೌಂಡರ್ ವಿಭಾಗಕ್ಕೆ ಹೊಸ ಚರಿಷ್ಮಾ ತಂದುಕೊಟ್ಟಿದ್ದು ಹಾರ್ದಿಕ್ ಪಾಂಡ್ಯ. ಸದ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸೌಂಡ್ ಮಾಡುತ್ತಿರುವ ಈ ಬರೋಡಾ ಸ್ಟಾರ್ ತಂಡದ ಗೇಮ್ ಫಿನಿಶರ್ ಆಗಿದ್ದಾರೆ. ಏಳನೇ ಸ್ಲಾಟ್ನಲ್ಲಿ ಆಡುವ ಹಾರ್ದಿಕ್ ಪಂದ್ಯದ ಗತಿಯನ್ನೆ ಬದಲಿಸುವ ತಾಕತ್ತು ಹೊಂದಿದ್ದಾರೆ. ಇತ್ತಿಚೆಗೆ ಮುಗಿದ ಐಪಿಎಲ್ನಲ್ಲಿ ಈ ಆಲ್ರೌಂಡರ್ ಸಿಡಿಲಬ್ಬರ್ ಬ್ಯಾಟಿಂಗ್ ಮಾಡಿ ಗೇಮ್ ಫಿನಿಶರ್ರಾಗಿ ಮಿಂಚಿದ್ರು.

ಭರ್ಜರಿ ಫಾರ್ಮ್ನಲ್ಲಿರುವ ಹಾರ್ದಿಕ್ ಈ ಬಾರಿಯ ವಿಶ್ವಕಪ್ನಲ್ಲಿ ರಗಡ್ ಬ್ಯಾಟಿಂಗ್ ಮಾಡ್ತಾರೆ ಅಂಥ ಅಭಿಮಾನಿಗಳು ಅಪಾರ ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ. ಇದಲ್ಲದೇ ಹಾರ್ದಿಕ್ ಈ ಹಿಂದೆ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಇದೀಗ ವಿಶ್ವಕಪ್ನಲ್ಲಿ ಹಾರ್ದಿಕ್ ಡೆಡ್ಲಿ ಬ್ಯಾಟಿಂಗ್ ಮಾಡಿ ತಂಡದ ಗೇಮ್ ಫಿನಿಶರ್ ಆಗ್ತಾರೆ ಎಂದು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಹಾರ್ದಿಕ್ ಅವರ clear Strike ಮತ್ತು ಕಾನ್ಫಿಡೆನ್ಸ್ ತಂಡದ ಗೇಮ್ ಫಿನಿಶರ್ ಆದ್ರು ಆಶ್ಚರ್ಯಪಡಬೇಕಿಲ್ಲ.

ಜೋ ರೂಟ್
ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಡಿಪಾರ್ಟ್ಮೆಂಟ್ಗೆ ಹೊಸ ಖದರ್ ತಂದಿದ್ದು ಜೋ ರೂಟ್. ಜಸ್ಟ್ 28 ವರ್ಷದ ಜೋ ರೂಟ್ ವೈಟ್ ಬಾಲ್ನಲ್ಲಿ ರನ್ ಹೊಳೆಯನ್ನ ಹರಿಸ್ತಾರೆ. ಜೋಸ್ ಬಟ್ಲರ್ ಬ್ಯಾಟಿಂಗ್ನಿಂದಲೇ ಸೀಮಿತ ಓವರ್ಗಳಲ್ಲಿ ಇಂಗ್ಲೆಂಡ್ ತಂಡದ ಗ್ರಹಿಕೆ ಬದಲಾಗಿದೆ. ಈ ಬಾರಿ ಇಂಗ್ಲೆಂಡ್ ವಿಶ್ವಕಪ್ ಎತ್ತಿ ಹಿಡಿಯಬೇಕಿದ್ದರೇ ಜೋಸ್ ಬಟ್ಲರ್ ಜಬರ್ದಸ್ತ್ ಬ್ಯಾಟಿಂಗ್ ಮಾಡಬೇಕು.

ಮೊನ್ನೆ ಪಾಕಿಸ್ತಾನ ವಿರುದ್ಧದ ತ್ರಿಕೋನ ಸರಣಿಯಲ್ಲಿ ಕೇವಲ 50 ಎಸೆತಗಳಲ್ಲಿ ಶತಕ ಬಾರಿಸಿ ವೇಗದ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಹೀಗಾಗಿ ಇಂಗ್ಲೆಂಡ್ ತಂಡ ಇತ್ತೀಚಿನ ದಿನಗಳಲ್ಲಿ ಬಿಗ್ ಟಾರ್ಗೆಟ್ ಕಲೆ ಹಾಕುತ್ತಿದೆ ಅಂದ್ರೆ ಅದಕ್ಕೆ ಜೋಸ್ ಬಟ್ಲರ್ ಕಾರಣರಾಗಿದ್ದಾರೆ.

ಆ್ಯಂಡ್ರೆ ರಸ್ಸೆಲ್
ಆ್ಯಂಡ್ರೆ ರಸ್ಸೆಲ್ ವಿಶ್ವ ಕ್ರಿಕೆಟ್ನ ಡೇಂಜರಸ್ ಬ್ಯಾಟ್ಸಮನ್. ಇತ್ತೀಚೆಗಷ್ಟೆ ಐಪಿಎಲ್ನಲ್ಲಿ ಕೋಲ್ಕತ್ತಾ ತಂಡದ ಪರ ರಗಡ್ ಬ್ಯಾಟಿಂಗ್ ಮಾಡಿದ್ದ ಈ ಜಮೈಕನ್ ಸ್ಟಾರ್ ಗೇಮ್ ಫಿನಿಶರ್ರಾಗಿ ಹೊರ ಹೊಮ್ಮಿದ್ರು. ಈ ಕಾರಣಕ್ಕಾಗಿ ಈ ಬಾರಿಯ ಮಹಾಸಂಗ್ರಾಮದಲ್ಲಿ ಎಲ್ಲರ ಕಣ್ಣು ರಸ್ಸೆಲ್ ಮೇಲೆ ನೆಟ್ಟಿದೆ. ಟಿ20 ಫಾರ್ಮೆಟ್ನಲ್ಲಿ ಪಂಟರ್ ಆಗಿರುವ ಈ ಜಮೈಕನ್ ಆಟಗಾರ ಇತ್ತಿಚೆಗೆ ಏಕದಿನ ಫಾರ್ಮೆಟ್ನಲ್ಲೂ Consistency ಪರ್ಫಾಮನ್ಸ್ ಕೊಟ್ಟಿದ್ದಾರೆ. ರಸ್ಸೆಲ್ ಅಬ್ಬರಿಸಿದ್ರೆ ತಂಡದ ಗೇಮ್ ಫಿನಿಶರ್ ಆಗೋದ್ರಲ್ಲಿ ಅನುಮಾನವೇ ಇಲ್ಲ.

ಮಾರ್ಕಸ್ ಸ್ಟೋಯ್ನಿಸ್
ವರ್ಷದ ಹಿಂದೆ Ball  Tamperingನಲ್ಲಿ   ಆಸಿಸ್ ಸಿಲುಕಿಕೊಂಡು ಒದ್ದಾಡುತ್ತಿದ್ದಾಗ ಮಾರ್ಕಸ್ ಸ್ಟೋಯ್ನಿಸ್ ಎಂಬ ಟ್ಯಾಲೆಂಟ್ ಕ್ರಿಕೆಟರ್ ಎಂಟ್ರಿಯಾಗಿತ್ತು. ಸಿಕ್ಕ ಅವಕಾಶಗಳನ್ನೆಲ್ಲ ಚೆನ್ನಾಗಿ ಬಳಸಿಕೊಂಡಿರುವ ಮಾರ್ಕಸ್ ಸ್ಟೋಯ್ನಿಸ್ ಗೇಮ್ ಫಿನಿಶರ್ರಾಗಿ ಗುರುತಿಸಿಕೊಂಡಿದ್ದಾರೆ. ಸ್ಟೋಯ್ನಿಸ್ ಕಳೆದ 14 ಇನ್ನಿಂಗ್ಸ್ಗಳಿಂದ 95 ಸ್ಟ್ರೈಕ್ ರೇಟ್ನಲ್ಲಿ 500 ರನ್ ಕಲೆ ಹಾಕಿದ್ದಾರೆ. ವಿಶ್ವಕಪ್ನಲ್ಲಿ ಆಲ್ರೌಂಡರ್ ಗೇಮ್ ಫಿನಿಶರ್ ಆದ್ರೆ ಅಚ್ಚರಿ ಪಡಬೇಕಿಲ್ಲ.

ಮೊಹ್ಮದ್ ನಬಿ
ಮೊಹ್ಮದ್ ನಬಿ ಅಫ್ಘಾನಿಸ್ತಾನ ತಂಡದ  experienced ಪ್ಲೇಯರ್. ಆಲ್ರೌಂಡರ್ ಆಗಿರುವ ಮೊಹ್ಮದ್ ನಬಿ ಬೌಲಿಂಗ್ಗಿಂತ ಬ್ಯಾಟಿಂಗ್ನಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ನಬಿ ತಂಡಕ್ಕೆ ಬಹುತೇಕ ಪಂದ್ಯಗಳಲ್ಲಿ ತಂಡಕ್ಕೆ ಗೇಮ್ ಫಿನಿಶರ್ರಾಗಿ ಹೊರ ಹೊಮ್ಮಿದ್ದಾರೆ. ಹೀಗಾಗಿ ಮೊಹ್ಮದ್ ನಬಿ ವಿಶ್ವಕಪ್ನಲ್ಲಿ ತಮ್ಮ ಅನುಭವವನ್ನ ಧಾರೆಯೆರೆಯಬೇಕಿದೆ.

ಒಟ್ನಲ್ಲಿ ಈ ಐದು ಬ್ಯಾಟ್ಸ್ಮನ್ಗಳ ಮೇಲೆ ಅಭಿಮಾನಿಗಳ ಕಣ್ಣಿದ್ದು ಇವರಲ್ಲಿ ಯಾರು ಗೇಮ್ ಫಿನಿಶರ್ ಆಗ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ. ‘

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ