ಸಾಮರ್ಥ್ಯ ಪ್ರೂವ್ ಮಾಡಬೇಕು ಟೀಂ ಇಂಡಿಯಾ ಬಾಂಗ್ಲಾ ವಿರುದ್ಧ ಇಂದು ಅಭ್ಯಾಸ ಪಂದ್ಯ

ವಿಶ್ವಯುದ್ದಕ್ಕೆ ಸಜ್ಜಾಗಿರುವ ಕೊಹ್ಲಿ ಸೈನ್ಯ ಮೊನ್ನೆ ಕಿವೀಸ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಕಿವಿ ಹಿಂಡಿಸಿಕೊಂಡಿದೆ. ಈ ಸೋಲಿಗೆ 2 ತಿಂಗಳು ನಡೆದ ಐಪಿಎಲ್ ಕಾರಣವಾ..? ಇಲ್ಲ ನಂತರ ಸಿಕ್ಕ ರಿಲ್ಯಾಕ್ಸ್ ಮೂಡ್ನಿಂದ ಆಟಗಾರರು ಹೊರಬರದಿರುವುದು ಕಾರಣವಾ..? ಆಲ್ರೌಂಡರ್ ರವೀಂದ್ರ ಜಡೇಜಾ ಬಿಟ್ಟರೆ ಇನ್ಯಾವ ಆಟಗಾರನು ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಪ್ರತಿರೋಧ ತೋರಲಿಲ್ಲ.. ಇದಕ್ಕೆ ಪ್ರತಿಫಲವಾಗಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿತು…

ಕ್ರಿಕೆಟ್ ಪಂಡಿತರ ಲೆಕ್ಕಾಚಾರದ ಪ್ರಕಾರ ಯಾರು ಕೂಡ ಈ ರೀತಿಯ ಸೋಲು ನಿರೀಕ್ಷಿಸಿರಲಿಲ್ಲ.. ಆದ್ರೆ, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರ ಟೀಮ್ ಇಂಡಿಯಾ ಕುರಿತು ಸ್ಪಷ್ಟನೆ ಸಿಕ್ಕಿದೆ. ಇದೆ ರೀತಿಯ ಆಟ ಮುಂದುವರಿಸಿದ್ರೆ ಮಾತ್ರ ಟೀಮ್ ಇಂಡಿಯಾ ಸೆಮಿಫೈನಲ್ ಸಹ ಪ್ರವೇಶಿಸಲ್ಲ ಎಂಬ ಸ್ಪಷ್ಟ ನಿಲುವಿನಲ್ಲಿ ಇದ್ದಾರೆ..

ಲೆಕ್ಕಾಚಾರ ಬದಲಿಸಲು ಇದೆ ಮತ್ತೊಂದು ಚಾನ್ಸ್..!
ಯೆಸ್.. ಸದ್ಯ ಮೊದಲ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಮುಖಭಂಗ ಅನುಭವಿಸಿದೆ. ಆದ್ರೆ, ಮೊದಲ ಅಭ್ಯಾಸ ಪಂದ್ಯದಲ್ಲಿನ ತಪ್ಪುಗಳನ್ನು ತಿದ್ದಿಕೊಳ್ಳಲು ಟೀಮ್ ಇಂಡಿಯಾಕ್ಕೆ ಇನ್ನೋಂದು ಚಾನ್ಸ್ ಇದೆ. ಹೀಗಾಗಿ ನಾಯಕ ವಿರಾಟ್ ಕೊಹ್ಲಿ ಮೊದಲ ವಾರ್ಮ್ ಅಫ್ ಮ್ಯಾಚ್ನಲ್ಲಾದ ತಪ್ಪುಗಳನ್ನು ತಿದ್ದಿಕೊಂಡು ವಿಶ್ವಕಪ್ನಲ್ಲಿ ಹೋರಾಟ ನಡೆಸಬೇಕಿದೆ. ಇದಕ್ಕೆ ಬಾಂಗ್ಲಾ ಟೈಗರ್ಸ್ ವಿರುದ್ಧ ನಡೆಯುವ ಅಭ್ಯಾಸ ಪಂದ್ಯವೇ ವೇದಿಕೆಯಾಗಿ ಟೀಮ್ ಇಂಡಿಯಾ ರೂಪಿಸಿಕೊಳ್ಳಬೇಕಿದೆ…

ಟೀಂ ಇಂಡಿಯಾ ಸೋಲಲು ಬ್ಯಾಟ್ಸಮನ್ಗಳು ಕಾರಣ
ಟೀಂ ಇಂಡಿಯಾ ಆಂಗ್ಲರ ನಾಡಲ್ಲಿ ಪ್ರತಿ ಬಾರಿಯೂ ಸೋಲೋದಕ್ಕೆ ಬ್ಯಾಟಿಂಗ್ ಪ್ರಮುಖ ಕಾರಣವಾಗಿದೆ. ಇಲ್ಲಿನ ಕಂಡೀಶನ್ಗೆ ಒಗ್ಗಿಕೊಳ್ಳುವುದೇ ದೊಡ್ಡ ಚಾಲೆಂಜ್ ಆಗಿದೆ. ಇದರ ಜೊತೆಗೆ ಒತ್ತಡ ನಿಭಾಯಿಸುವುದು ದೊಡ್ಡ ಚಾಲೆಂಜ್ ಆಗಿದೆ.

ಜವಾಬ್ದಾರಿ ನಿರ್ವಹಿಸಬೇಕು ಟಾಪ್ ಆರ್ಡರ್ ಬ್ಯಾಟ್ಸ್ಮನ್ಸ್..!
ಬ್ಲಾಕ್ ಕ್ಯಾಪ್ಸ್ ವಿರುದ್ಧ ಫ್ಲಾಪ್ ಪರ್ಫಾಮೆನ್ಸ್ ನೀಡಿದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಸ್ ಕಮ್ ಬ್ಯಾಕ್ ಮಾಡಬೇಕಿದೆ. ಇನ್ನೂ ಆರಂಭಿಕ ಬ್ಯಾಟ್ಸ್ಮನ್ಗಳಾದ ರೋಹಿತ್ ಶರ್ಮಾ-ಶಿಖರ್ ಧವನ್ ನೆಲಕಚ್ಚಿ ಆಡಬೇಕಿದೆ. ಈ ಮೂಲಕ ಮಧ್ಯಮಕ್ರಮಾಂಕದ ಮೇಲೆ ಒತ್ತಡ ಬೀಳದಂತೆ ತಮ್ಮ ಕಾರ್ಯನಿರ್ವಹಿಸಬೇಕು.. ಅಕಸ್ಮತ್ ಓಪನರ್ಸ್ ಫ್ಲಾಫ್ ಆದ್ರೆ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಕ್ರೀಸ್ಗೆ ಅಂಟಿಕೊಳ್ಳಬೇಕಾಗುವುದು ಅನಿವಾರ್ಯವಾಗಿದೆ. ಪ್ರಮುಖವಾಗಿ 4ನೇ ಕ್ರಮಾಂಕದದಲ್ಲಿ ಬ್ಯಾಟ್ ಬೀಸುವ ಕನ್ನಡಿಗ ಕೆ.ಎಲ್.ರಾಹುಲ್ಗೆ ಅಗ್ನಿಪರೀಕ್ಷೆಯ ಅಭ್ಯಾಸ ಪಂದ್ಯವಾಗಿದ್ದು, ನಾಯಕ ವಿರಾಟ್ ಕೊಹ್ಲಿಗೆ ಮೆಚ್ಚುವಂಥ ಆಟ ಮೂಡಿಬರಬೇಕಿದೆ.

ಪಾಂಡ್ಯಾ, ಧೋನಿ ಮೇಲಿದೆ ಮತ್ತಷ್ಟು ಜವಾಬ್ದಾರಿ..!
ಐಪಿಎಲ್ನಲ್ಲಿ ತಮ್ಮ ತಂಡಗಳ ಪಾಲಿನ ಮ್ಯಾಚ್ ಫಿನಿಷರ್ಗಳಾಗಿದ್ದ ಹಾರ್ದಿಕ್ ಪಾಂಡ್ಯಾ- ಧೋನಿ, ವಿಶ್ವಕಪ್ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕಾದ ಅನಿವಾರ್ಯತೆ ಇದ್ದೆ ಇದೇ. ಹೀಗಾಗಿ ಇವರಿಬ್ಬರು ಎಂಥ ಕಠಿಣ ಪಿಚ್ನಲ್ಲೂ ಕ್ರೀಸ್ಗೆ ನೆಲಕಚ್ಚಿ ನಿಲ್ಲಬೇಕಿದೆ.

ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪ್ರದರ್ಶನ ಬೌಲರ್ಗಳ ಮೇಲೂ ಇದೆ. ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಯಾವೊಬ್ಬ ಬೌಲರ್ ಸಹ ಎದುರಾಳಿಗೆ ಕಾಡದಿರುವುದು ಮತ್ತಷ್ಟು ಚಿಂತೆಗೆ ಕಾರಣವಾಗಿದೆ. ಶಮಿ, ಭುವನೇಶ್ವರ್ ಹಾಗೂ ಬೂಮ್ರಾ ಪೇಸರ್ಗಳಾಗಿ ಹೆಚ್ಚೆಚ್ಚು ವಿಕೆಟ್ ಕೀಳ್ತಾರಾ ಅನ್ನೋ ಆತಂಕವೂ ಇದೆ.

ಮುಂದಿನ ದಿನಗಳಲ್ಲಿ ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಾಹಲ್ ಮ್ಯಾಜಿಕ್ ಮಾಡಲೇಬೇಕಿದೆ. ಇಂಗ್ಲೆಂಡ್ನ ಅಂಗಳಗಳಲ್ಲಿ ಬೌಲರ್ಸ್ ಹೆಚ್ಚು ಕ್ಲಿಕ್ ಆಗುವುದು ತಂಡಕ್ಕೆ ಅನಿವಾರ್ಯವಾಗಿದ್ದು, ಬಾಂಗ್ಲಾ ವಿರುದ್ಧದ 2ನೇ ಅಭ್ಯಾಸ ಪಂದ್ಯವನ್ನು ಟೀಮ್ ಇಂಡಿಯಾ ಆಟಗಾರರು ಯಾವ ರೀತಿ ಬಳಸಿಕೊಂಡು ಕಮ್ ಬ್ಯಾಕ್ ಮಾಡ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ