ಲತಾ ಮಂಗೇಶ್ಕರ್ ಮತ್ತು ಆಶಾ ಭೊಸ್ಲೆ ಗೌರವಾರ್ಪಣೆ-ಜೂನ್ 1ರಂದು ಸಂಗೀತಾ ಸಂಜೆ

ಬೆಂಗಳೂರು, ಮೇ 28- ದೇಶ ಕಂಡ ಅತ್ಯುತಮ ಗಾನ ಕೋಗಿಲೆ ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಅವರಿಗೆ ಗೌರವಾರ್ಪಣೆ ಮಾಡುವ ಮತ್ತೊಂದು ಸುಂದರ ಸಂಗೀತ ಸಂಜೆ ಜೂನ್ 1ರಂದು ಸಂಜೆ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ.

2018 ರ ಜೂನ್‍ನಲ್ಲಿ ಆಯೋಜಿಸಿದ್ದ ಏಕ್ ರಾಧಾ ಏಕ್ ಮೀರಾ-1 ಸಂಗೀತ ಸಂಜೆಯು ಅತ್ಯಂತ ಯಶಸ್ವಿಯಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಲತಾ-ಆಶಾ ಅವರ ಅಭಿಮಾನಿಗಳ ಒತ್ತಾಯದ ಮೇರೆಗೆ ಇದೀಗ 2019 ರ ಜೂನ್ 1 ರಂದು ಬೆಂಗಳೂರಿನಲ್ಲಿ ಸಂಗೀತ ಸಂಜೆಯನ್ನು ಆಯೋಜಿಸಲಾಗುತ್ತಿದೆ.

ಏಕ್ ರಾಧಾ ಏಕ್ ಮೀರಾ-2 ಎಂಬ ಈ ರಸ ಸಂಜೆಯಲ್ಲಿ ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಅವರು ಹಾಡಿರುವ ಅನೇಕ ಸೂಪರ್‍ಹಿಟ್ ಹಾಡುಗಳನ್ನು ಖ್ಯಾತ ಗಾಯಕಿಯರು ಹಾಡಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಲತಾ ಮತ್ತು ಆಶಾ ಅವರು ತಮ್ಮ ಇಡೀ ಜೀವನವನ್ನು ಸಂಗೀತಕ್ಕೆ ಮುಡಿಪಾಗಿಟ್ಟಿದ್ದು, ಇವರಿಬ್ಬರೂ ದೇಶದ ಹೆಮ್ಮೆ ಎನಿಸಿದ್ದಾರೆ. ಈ ಇಬ್ಬರು ಸಹೋದರಿಯರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ಸಂಗೀತ ರಸ ಸಂಜೆಯನ್ನು ಏರ್ಪಡಿಸಲಾಗಿದೆ.

ಅಂದು ಸಂಜೆ 6 ಗಂಟೆಯಿಂದ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಗಾಯಕರಾದ ಏಕ್ತಾ ಶಾಹ್, ಅನಿಕೇತ್ ಪ್ರಭು, ಶೃತಿ ಭಿಂಡೆ, ರಘುಪತಿ ಝಾ ಅವರು ಹಾಡಿ ರಂಜಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ