ಸಚಿವರಾಗುವ ಆಸೆ ಸಧ್ಯಕ್ಕಿಲ್ಲ-ಎಚ್.ವಿಶ್ವನಾಥ್

ಬೆಂಗಳೂರು, ಮೇ 28-ಸಚಿವರಾಗುವ ಆಸೆ ಸದ್ಯಕ್ಕೆ ತಮಗಿಲ್ಲ ಎಂದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಯಾರ್ಯಾರಿಗೆ ಅರ್ಜೆಂಟ್ ಇದೆಯೋ ಅವರು ಮೊದಲು ಸಚಿವರಾಗಲಿ ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ್ಯಾರಿಗೆ ಸಚಿವರಾಗಬೇಕೆಂಬ ಆಸೆ ಇದೆಯೋ ಅವರೆಲ್ಲ ಸಚಿವರಾಗಲಿ ಎಂದು ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರವಾಗಿದ್ದು, ಯಾವಾಗ ವಿಸ್ತರಣೆಯಾಗಲಿದೆ ಎಂಬುದನ್ನು ಅವರನ್ನೇ ಕೇಳಬೇಕು ಎಂದರು.

ಮೈತ್ರಿ ಸರ್ಕಾರದ ಸಮನ್ವಯ ಸಮಿತಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರು ಸೇರ್ಪಡೆಯಾಗುವ ಕಾಲ ಕೂಡಿ ಬಂದಿದೆ. ಉಭಯ ಪಕ್ಷಗಳ ರಾಜ್ಯಾಧ್ಯಕ್ಷರು ಸಮಿತಿಯಲ್ಲಿರಬೇಕು ಎಂಬ ಆಗ್ರಹವನ್ನು ಮೊದಲಿನಿಂದಲೂ ಮಾಡುತ್ತಿದ್ದೇವೆ. ಸಮನ್ವಯ ಸಮಿತಿಯ ಅಧ್ಯಕ್ಷರಿಗೆ ಮನವಿ ಮಾಡುತ್ತಲೂ ಬಂದಿದ್ದೇವೆ.

ಯಾರೆಲ್ಲ ಸಮಿತಿಗೆ ಸೇರಿಸಿಕೊಳ್ಳಬೇಕು ಎಂಬ ನಿರ್ಧಾರ ಅವರೊಬ್ಬರದೇ ಅಂತ ಕಾಣುತ್ತೆ. ರಾಜ್ಯಾಧ್ಯಕ್ಷರುಗಳನ್ನು ಸೇರಿಸಿಕೊಳ್ಳಲು ಕಷ್ಟವೇನು?ಎಂದುಮಾರ್ಮಿಕವಾಗಿ ನುಡಿದರು.

ತಾವು ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ಸಮನ್ವಯ ಸಮಿತಿಗೆ ಸೇರುವ ಸಮಯ ಬಂದಿದೆ ಎಂದು ಹೇಳಿದರು.

ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರು ಜಿಂದಾಲ್ ಸಂಸ್ಥೆಗೆ ಸರ್ಕಾರಿ ಜಮೀನು ನೀಡಬಾರದೆಂದು ಪತ್ರ ಬರೆದಿರುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅವರು ಮುಖ್ಯಮಂತ್ರಿಗೆ ಲಿಖಿತವಾಗಿ ಪತ್ರ ಬರೆದಿರುವುದರಲ್ಲಿ ವಾಸ್ತವಾಂಶ ಇರಬಹುದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ