ಉದಯ್ಪುರ : ಶ್ರೀ ರಾಮನ ಕೆಲಸವನ್ನು ನಾವೇ ಮಾಡಬೇಕು. ಅದನ್ನು ಮಾಡಿಯೇ ಮಾಡುತ್ತೇವೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಭರ್ಜರಿ ಜಯ ದಾಖಲಿಸಿ ಸರ್ಕಾರ ರಚನೆಯ ಪ್ರಕ್ರಿಯೆಗೆ ಚಾಲನೆ ದೊರೆತ ಬೆನ್ನಲ್ಲೇ ನಡೆದ ಆರ್ಎಸ್ಎಸ್ನ ಮೊದಲ ಸಭೆಯಲ್ಲಿ ಮಾತನಾಡಿದ ಮೋಹನ್ ಭಾಗ್ವತ್, ರಾಮನ ಕೆಲಸ ಮಾಡಬೇಕಾಗಿದೆ. ಈ ಬಗ್ಗೆ ಜನರು ಪ್ರಜ್ಞಾಪೂರ್ವಕವಾಗಿ, ಶಾಂತಿಯುತವಾಗಿ, ಕ್ರಿಯಾಶೀಲವಾಗಿ ಮತ್ತು ಗಟ್ಟಿತನದೊಂದಿಗೆ ಇರಬೇಕು ಎಂದರು.
ಶ್ರೀರಾಮನ ಕೆಲಸವನ್ನು ನಾವೇ ಮಾಡಬೇಕು. ಅದನ್ನು ಬೇರೊಬ್ಬರಿಗೆ ವಹಿಸಿದರೆ ಅವರ ಮೇಲೆ ನಿಗಾ ಇಡಬೇಕಾಗುತ್ತದೆ. ಇದು ಸ್ವಲ್ಪ ಕಷ್ಟದ ಕೆಲಸ. ಆದ್ದರಿಂದ, ಶ್ರೀರಾಮನ ಕಾರ್ಯವನ್ನು ನಾವೇ ಮಾಡೋಣ ಎಂದು ಹೇಳಿದರು.
ಜನರು ಪ್ರಜ್ಞಾಪೂರ್ವಕವಾಗಿ, ಶಾಂತಿಯುತವಾಗಿ ಇದ್ದಾಗ ದೇಶ ನಿರಂತರವಾಗಿ ಮತ್ತು ಸ್ಥಿರವಾಗಿ ಚಲನಶೀಲವಾಗಿ ಉಳಿಯುತ್ತದೆ ಎಂದು ದೇಶದ ಇತಿಹಾಸದಿಂದ ತಿಳಿದುಬರುತ್ತದೆ. ಹಾಗಾಗಿ ನಾವೆಲ್ಲರೂ ನಮ್ಮ ಆಶೋತ್ತರಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಬೇಕು. ಅದರಂತೆ ನಮ್ಮ ಗುರಿಯನ್ನು ಈಡೇರಿಸಿಕೊಳ್ಳಲು ಸಹಕರಿಸುವ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಸಲಹೆ ನೀಡಿದರು.
We have to do Ram’s work and will get it done: RSS chief Mohan Bhagwat