ವಿಶ್ವಕಪ್ ಕಾಯುತ್ತಿರುವ ಟೀಂ ಇಂಡಿಯಾ ಆರಂಭದಲ್ಲೆ ಆಘಾತವೊಂದನ್ನ ಎದುರಿಸಿದೆ. ವಿಶ್ವಕಪ್ ಮಹಾ ಸಮರಕ್ಕೆ ಇನ್ನು ಬರೀ ಮೂರು ದಿನಗಳು ಬಾಕಿ ಇವೆ. ವಿಶ್ವ ಯುದ್ದಕ್ಕೆ ಸಜ್ಜಾಗುತ್ತಿರುವ ಕೊಹ್ಲಿ ಸೈನ್ಯ ಆರಂಭದಲ್ಲೆ ಇಂಜುರಿ ಸಮಸ್ಯೆಗೆ ಗುರಿಯಾಗಿ ಆರಂಭದ್ಲಲೆ ಹಿನ್ನಡೆ ಅನುಭವಿಸಿದೆ.
ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾಕ್ಕೆ ಆಘಾತ ಎದುರಾಗಿದೆ. ಆಲ್ರೌಂಡರ್ ವಿಜಯ್ ಶಂಕರ್, ಗಾಯಗೊಂಡ ಕಾರಣ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧದ 2 ಅಭ್ಯಾಸ ಪಂದ್ಯಗಳಿಂದ, ಹೊರಗುಳಿಯಲಿದ್ದಾರೆ. ನೆನ್ನೆ ನೆಟ್ ಪ್ರಾಕ್ಟೀಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವಿಜಯ್ ಶಂಕರ್, ಎಡಗೈ ವೇಗಿ ಖಲೀಲ್ ಅಹ್ಮದ್ ಬೌಲಿಂಗ್ನಲ್ಲಿ ಪುಲ್ ಮಾಡಲು ಹೋಗಿ ಮೊಳಕೈಗೆ ಗಾಯ ಮಾಡಿಕೊಂಡ್ರು. ನಂತರ ಅಭ್ಯಾಸವನ್ನ ಅರ್ಧಕ್ಕೆ ನಿಲ್ಲಿಸಿ ಮೈದಾನದಿಂದ ಹೊರನಡೆದ ಶಂಕರ್ಗೆ ಸ್ಕ್ಯಾನ್ ಮಾಡಿಸಲಾಯ್ತು.
ಇಂಜುರಿಯಿಂದ ಸೇಫ್ ಆದ ಆಲ್ರೌಂಡರ್ ವಿಜಯ್
ವಿಶ್ವಕಪ್ ಟೂರ್ನಿಗಾಗಿ ಟೀಂ ಇಂಡಿಯಾ ಇಂಗ್ಲೆಂಡ್ ನೆಲದಲ್ಲಿ ಅಭ್ಯಾಸ ಪಂದ್ಯ ಆಡುತ್ತಿದೆ. ನೆಟ್ ಪ್ರಾಕ್ಟೀಸ್ ವೇಳೆ ಟೀಂ ಇಂಡಿಯಾ ಅಲ್ರೌಂಡರ್ ವಿಜಯ್ ಶಂಕರ್ ಇಂಜುರಿಗೆ ತುತ್ತಾಗಿ ಆತಂಕ ಸೃಷ್ಟಿಸಿದ್ದರು. ಇದೀಗ ವಿಜಯ್ ಶಂಕರ್ ಸ್ಕ್ಯಾನಿಂಗ್ ರಿಪೋರ್ಟ್ ಬಹಿರಂಗವಾಗಿದೆ. ಯಾವುದೇ ಎಲುಬಿಗೆ ಗಾಯವಾಗಿಲ್ಲ ಎಂದು ವೈದ್ಯರು ರಿಪೋರ್ಟ್ ಕೊಟ್ಟಿದ್ದಾರೆ.
ವಿಜಯ್ ಶಂಕರ್ ಇಂಜುರಿ ವರದಿಯಿಂದ ಟೀಂ ಇಂಡಿಯಾ ನಿರಾಳವಾಗಿದೆ. ನಂ.4ನೇ ಕ್ರಮಾಂಕದಲ್ಲಿ ವಿಜಯ್ ಶಂಕರ್ ಸೂಕ್ತ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಇದರ ಬೆನ್ನಲ್ಲೇ ಶಂಕರ್ ಇಂಜುರಿಗೆ ತುತ್ತಾಗಿದ್ದರು. ಹೀಗಾಗಿ ಟೀಂ ಮ್ಯಾನೇಜ್ಮೆಂಟ್ ಚಿಂತೆಗೆ ಒಳಗಾಗಿತ್ತು.
ಪ್ರಾಕ್ಟೀಸ್ಗೆ ಶಿಖರ್ ಧವನ್ ಇಂಜುರಿ
ಟೀಂ ಇಂಡಿಯಾ ಎದುರಿಸಿದ ಮತ್ತೊಂದು ಶಾಕ್ ಎಂದರೆ ಅದು ತಂಡದ ಓಪನರ್ ಶಿಖರ್ ಧವನ್ ಪ್ರಾಕ್ಟೀಸ್ ವೇಳೆ ಗಾಯಗೊಂಡಿದ್ದಾರೆ. ತಂಡದ ಬ್ಯಾಟಿಂಗ್ ಕೋಚ್ ಎಸೆದ ಚೆಂಡು ಧವನ್ ಹೆಲ್ಮಟ್ಗೆ ಬಡಿಯಿತು. ಅದೃಷ್ಟವಶತ್ ಧವನ್ಗೆ ಚೆಂಡು ಜೋರಾಗಿ ಬಡಿದಿಲ್ಲ. ಧವನ್ಗೆ ಹೆಚ್ಚೇನು ಇಂಜುರಿಯಾಗದಿದ್ದರೂ ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಧವನ್ ಫ್ಲಾಪ್ ಆದ್ರು.
ಚೇತರಿಸಿಕೊಳ್ಳುತ್ತಿದ್ದಾರೆ ಕೇದಾರ್ ಜಾಧವ್
ಇನ್ನು ಐಪಿಎಲ್ ವೇಳೆ ಗಾಯಗೊಂಡಿದ್ದ ತಂಡದ ಮಿಡ್ಲ್ ಆರ್ಡರ್ ಬ್ಯಾಟ್ಸಮನ್ ಕೇದಾರ್ ಜಾಧವ್ ಇನ್ನು ಚೇತರಿಸಿಕೊಳ್ಳುತ್ತಿದ್ದಾರೆ. ಫೀಲ್ಡಿಂಗ್ ಮಾಡುವ ವೇಳೆ ಜಾಧವ್ ಗಾಯಗೊಂಡು ಟೂರ್ನಿಯಿಂದಲೇ ಹೊರ ನಡೆದಿದ್ದರು. ನಂತರ ಜಾಧವ್ ಐಪಿಎಲ್ ಆಡುವುದು ಅನುಮಾನದಿಂದ ಕೂಡಿತ್ತು. ಆದರೆ ಜಾಧವ್ ತಾವು ಫಿಟ್ ಆಗಿರೋದಾಗಿ ಹೇಳಿ ಬ್ಲೂ ಕ್ಯಾಂಪ್ ಸೇರಿದ್ರು. ಇದಿಗ ಜಾಧವ್ ಇನ್ನು ಚೇತರಿಸಿಕೊಂಡು ಫಿಟ್ನೆಸ್ ಪ್ರೂವ್ ಮಾಡಬೇಕಿದೆ.ಇದು ಕೋಚ್ ರವಿ ಶಾಸ್ತ್ರಿಗೆ ತಲೆಬಿಸಿ ಹೆಚ್ಚಿಸಿದೆ.
ಒಟ್ಟಾರೆ ವಿಶ್ವಕಪ್ ಮಹಾ ಯುದ್ದಕ್ಕೂ ಮುನ್ನ ಉತ್ಸಾಹದಿಂದ ಕೊಹ್ಲಿ ಸೈನ್ಯ ಇಂಜುರಿಯಿಂದಾಗಿ ಆರಂಭಿಕ ವಿಘ್ನ ಎದುರಿಸಿದೆ.