![DSC_0010](http://kannada.vartamitra.com/wp-content/uploads/2019/05/DSC_0010-574x381.jpg)
ಬೀದರ್: ಸೆಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ವತಿಯಿಂದ ಇಲ್ಲಿನ ಮಂಗಲಪೇಟ್ ಚರ್ಚ್ ಆವರಣದಲ್ಲಿ ಮೂರು ದಿನ ನಡೆಯುವ ಕ್ರೈಸ್ತ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಚರ್ಚ್ ಜಿಲ್ಲಾ ಮೇಲ್ವಿಚಾರಕ ಘನ ಎಂ.ಪಿ. ಜೈಪಾಲ (ಉತ್ತರ), ಘನ ಎಸ್. ಮನೋಶಾಂತ (ದಕ್ಷಿಣ) ನೇತೃತ್ವದಲ್ಲಿ ಜಾತ್ರೆ ನಿಮಿತ್ತ ವಿವಿಧ ಸಾಂಸ್ಕøತಿಕ, ಅಧ್ಯಾತ್ಮಿಕ, ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಶುಕ್ರವಾರ ರಾತ್ರಿ ಸ್ತಬ್ಧ ಚಿತ್ರಗಳ ಮೆರವಣಿಗೆ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. ಶನಿವಾರ ಬೆಳಗ್ಗೆ ದೈವಾರಾಧನೆ ನಡೆಯಿತು. ನಂತರ ಭಜನೆ ಸ್ಪರ್ಧೆ, ಆಟೋಟಗಳ ಸ್ಪರ್ಧೆ, ಸರಪಳಿ ಪ್ರಾರ್ಥನೆ ಮತ್ತು ಚಲನಚಿತ್ರ ಪ್ರದರ್ಶನ ನಡೆಯಿತು. ಯುವ ಮುಖಂಡ ಅಲ್ಬರ್ಟ್ ಕೋಟೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಮೇಲ್ವಿಚಾರಕರು ಹಾಗೂ ವಿವಿಧ ಚರ್ಚ್‍ಗಳ ಪಾಸ್ಟರ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸಂಜಯ ಜೆಸ್ಸಿ, ಅರುಣಕುಮಾರ ಆಣದೂರ ಇತರರಿದ್ದರು.
ಜಾತ್ರೆ ನಿಮಿತ್ತ ಕುಂಬಾರವಾಡ ಚರ್ಚ್‍ನಿಂದ ಸಹ ಭವ್ಯ ಮೆರವಣಿಗೆ ನಡೆಯಿತು. ನಗರದ ವಿವಿಧೆಡೆ ಸಂಚರಿಸಿ ಜಿಲ್ಲಾ ಮೆಥೋಡಿಸ್ಟ್ ಚರ್ಚ್‍ಗೆ ಆಗಮಿಸಿ ಮೆರವಣಿಗೆ ಸಮಾವೇಶಗೊಂಡಿತು. ಮೆರವಣಿಗೆಯಲ್ಲಿ ಚರ್ಚ್‍ನ ಬೋಧಕ ರೇ. ರೂತ್, ರಾಜಕುಮಾರ, ಮಾರ್ಟಿನ್ ಪೌಲ್, ಸತೀಶ ಘೋಡಂಪಳ್ಳಿಕರ್, ಜೋಸೆಫ್ ಕೊಡ್ಡಿಕರ್, ಬಾಬುರಾವ, ಪ್ರಮೋದ ಗುಪ್ತಾ, ಜೀವನ ರಿಕ್ಕೆ ಇತರರರಿದ್ದರು.
ಭಾನುವಾರ ಬೆಳಗ್ಗೆ ಮರ್ಜಾಪುರ ಗವಿಯಲ್ಲಿ ಸೂರ್ಯೋದಯ ಆರಾಧನೆ ನಡೆಯಲಿದೆ. ಮಧ್ಯಾಹ್ನ ದೈವಾರಾಧನೆ, ಹರಕೆ ಕಾಣಿಕೆಗಳ ಸ್ವೀಕಾರ ಹಾಗೂ ಬಹುಮಾನಗಳ ವಿತರಣೆಯಿದೆ.
==================