ಇಡೀ ಕ್ರಿಕೆಟ್ ಲೋಕವೇ ಕಾತರದಿಂದ ಕಾಯುತ್ತಿರುವ ವಿಶ್ವಕಪ್ ಮಹಾ ಸಂಗ್ರಾಮಕ್ಕೆ ಎಲ್ಲ ತಂಡಗಳು ಸಜ್ಜಾಗಿವೆ. ವಿಶ್ವಕಪ್ ಗೆಲ್ಲುವ ರೇಸ್ನಲ್ಲಿರುವ ಕೊಹ್ಲಿ ಸೈನ್ಯ ಈಗಾಗಲೇ ಆಂಗ್ಲರ ನಾಡಿಗೆ ತಲುಪಿದೆ.
ಆಂಗ್ಲರ ನಾಡಲ್ಲಿ ನಡೆಯಲಿರುವ ವಿಶ್ವಕಪ್ನಲ್ಲೊ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳ ಪೈಕಿ ಒಂದಾಗಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ವಿಶ್ವಯುದ್ದಕ್ಕೂ ಮುನ್ನ ತಂಡದಲ್ಲಿ ಕೆಲವು ಸಮಸ್ಯೆಗಳು ಹಾಗೆ ಉಳಿದಿವೆ. ಇದರಲ್ಲಿ ನಾಲ್ಕನೆ ಸ್ಲಾಟ್ ಸಮಸ್ಯೆ ಕೂಡ ಒಂದು.
ಟೀಂ ಇಂಡಿಯಾಕ್ಕೆ ತಲೆ ನೋವಾಗಿದೆ ನಾಲ್ಕನೆ ಸ್ಲಾಟ್
ಟೀಂ ಇಂಡಿಯಾ ಕಳೆದ ಮೂರು ವರ್ಷಗಳಿಂದ ನಾಲ್ಕನೆ ಸ್ಲಾಟ್ ಸಮಸ್ಯೆಯಿಂದ ಬಳಲುತ್ತಿದೆ. ತಂಡದಲ್ಲಿ ಎಲ್ಲ ಸಮಸ್ಯೆಗಳನ್ನ ಬಗೆ ಹರಿಸಲಾಗಿದೆ . ಆದರೆ ನಾಲ್ಕನೆ ಸ್ಲಾಟ್ ಸಮಸ್ಯೆ ಮಾತ್ರ ಕಗ್ಗಂಟಾಗಿ ಉಳಿದಿದೆ. ಕಳೆದ ಮೂರು ವರ್ಷ ಅಂದ್ರೆ ಚಾಂಪಿಯನ್ಸ್ ಟ್ರೋಫಿ ನಂತರ ಈ ಸ್ಲಾಟ್ನಲ್ಲಿ ಬರೋಬ್ಬರಿ 11 ಬ್ಯಾಟ್ಸ್ಮನ್ಗಳು ಆಡಿದ್ದಾರೆ. ಆದರೆ ಈ ಯಾವ ಬ್ಯಾಟ್ಸ್ಮನ್ಗಳು ಗಟ್ಟಿಯಾಗಿ ನಿಲ್ಲಲ್ಲಿಲ್ಲ.
ಭರವಸೆ ಮೂಡಿಸಿ ತಂಡದಿಂದ ಗೇಟ್ ಪಾಸ್ ಪಡೆದ ಅಂಬಟಿ
ಟೀಂ ಇಂಡಿಯಾಕ್ಕೆ ಸಮಸ್ಯೆಯಾಗಿದ್ದ ನಾಲ್ಕನೆ ಸ್ಲಾಟ್ಗೆ ವರ್ಷದ ಹಿಂದೆ ಕೊನೆಗೂ ಒಂದು ಉತ್ತರ ಸಿಕ್ಕಿತ್ತು. ಅದೇ ಹೈದ್ರಾಬಾದ್ ಬ್ಯಾಟ್ಸಮನ್ ಅಂಬಟಿ ರಾಯ್ಡು . ಕಳೆದ ವರ್ಷ ನಾಲ್ಕನೆ ಸ್ಲಾಟ್ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ರಾಯ್ಡು ಭರವಸೆ ಮೂಡಿಸಿದ್ರು. ಕೊನೆಗೂ ಅಂತೂ ಇಂತೂ ನಾಲ್ಕರ ಸ್ಲಾಟ್ಗೆ ಪರಿಹಾರ ಸಿಕ್ಕಿತ್ತು ಅಂತ ಎಲ್ಲರೂ ನಿಟ್ಟುಸಿರು ಬಿಡುತ್ತಿರುವಾಗಲೇ ಅಂಬಾಟಿ ರಾಯ್ಡು ತವರಿನಲ್ಲಿ ನಡೆದ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಸರಣಿಗಳಲ್ಲಿ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಪರ್ಫಾಮನ್ಸ್ ಕೊಟ್ರು. ಇದರ ಪರಿಣಾಮವೇ ಅಂಬಟಿ ಲಂಡನ್ ಟಿಕೆಟ್ ಪಡೆಯುವ ಅವಕಾಶದಿಂದ ವಂಚಿತರಾದ್ರು.
ವಿಶ್ವಕಪ್ ಬಂದ್ರು ಬಗೆಹರಿಯಲಿಲ್ಲ ನಾಲ್ಕರ ಕಗ್ಗಂಟು
ಹೌದು ವಿಶ್ವಕಪ್ಗೆ ಇನ್ನು ಐದು ದಿನಗಳು ಮಾತ್ರ ಬಾಕಿ ಇವೆ. ಆದರೆ ತಂಡದ ಪ್ರಮುಖ ಸಮಸ್ಯೆಯಾಗಿರುವ ನಾಲ್ಕರ ಕಗ್ಗಂಟಾಗಿ ಉಳಿದಿದೆ. ಕೊನೆ ಘಳಿಗೆಯಲ್ಲಿ ಟಿಕೆಟ್ ವಂಚಿತರಾದ ಅಂಬಟಿ ರಾಯ್ಡು ಸ್ಥಾನದಲ್ಲಿ ಯಾರು ಆಡುತ್ತಾರೆ ಅನ್ನೋದೇ ಕುತೂಹಲದ ವಿಷಯವಾಗಿದೆ.
ನಾಲ್ಕರ ಕಗ್ಗಂಟಿಗೆ ಪರಿಹಾರ ಸೂಚಿಸಿದ ಎಂ.ಎಸ್.ಕೆ ಪ್ರಸಾದ್
ವಿಶ್ವಕಪ್ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡಬೇಕೆನ್ನುವ ಸಮಸ್ಯಗೆ ಆಯ್ಕೆ ಮಂಡಳಿಯ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ಪರಿಹಾರ ಸೂಚಿಸಿದ್ದಾರೆ. ನಾಲ್ಕನೆ ಕ್ರಮಾಂಕದಲ್ಲಿ ತಮಿಳುನಾಡು ಆಲ್ರೌಂಡರ್ ವಿಜಯ್ ಶಂಕರ್ ಆಡಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾಲ್ಕನೆ ಸ್ಲಾಟ್ನಲ್ಲಿ ಆಡಲು ರೆಡಿ ಎಂದ ವಿಜಯ್ ಶಂಕರ್
ವಿಶ್ವಕಪ್ ಮಹಾ ಯುದ್ದದ್ದಲ್ಲಿ ತಂಡಕ್ಕೆ ತಲೆ ನೋವಾಗಿರುವ ನಾಲ್ಕನೆ ಸ್ಲಾಟ್ನಲ್ಲಿ ಆಡಲು ಸಜ್ಜಾಗಿರೊದಾಗಿ ತಮಿಳುನಾಡು ಆಲ್ರೌಂಡರ್ ವಿಜಯ ಶಂಕರ್ ಹೇಳಿದ್ದಾರೆ. ತಂಡದ ಸಹ ಆಲ್ರೌಂಡರ್ ಹಾರ್ದಿಕ್ ಜೊತೆ ಸ್ಪರ್ಧೆ ಮಾಡೊದಿಲ್ಲ ಎಂದಿರುವ ವಿಜಯ್ ಶಂಕರ್ ಮಹಾ ಟೂರ್ನಿಯಲ್ಲಿ ನಾಲ್ಕನೆ ಸ್ಲಾಟ್ ಮೇಲೆ ಕಣ್ಣಿಟ್ಟಿದ್ದಾರೆ.
ನಾಲ್ಕನೆ ಸ್ಲಾಟ್ನಲ್ಲಿ ಆಡಲು ರೆಡಿ
ತುಂಬ ಕಠಿಣವಾಗಿರುವ ನಾಲ್ಕನೆ ಸ್ಥಾನದಲ್ಲಿ ಆಡಲು ತಯಾರಿ ನಡೆಸಿದ್ದೇನೆ. ಇದಕ್ಕೆ ಮಾನಸಿಕವಾಗಿ ಸಿದ್ದನಾಗಿದ್ದೇನೆ. ನಾನು ಅಟ್ಯಾಕಿಂಗ್ ಬ್ಯಾಟ್ಸಮನ್, ನನಗೆ ಆ ಸ್ಲಾಟ್ನಲ್ಲಿಆಡಲು ಅವಕಾಶ ಕೊಟ್ಟರೆ ತುಂಬ ಗ್ರೇಟ್. ಆಗ ನಾನು ಸ್ಟೈಲ್ಗೆ ತಕ್ಕಂತೆ ಆಡಬಹುದು. ಟೀಂ ಇಂಡಿಯಾ ಬ್ಯಾಟ್ಸಮನ್ ವಿಜಯ ಶಂಕರ್ ಹೇಳಿದ್ದಾರೆ
ನಂಬರ್ 4 ಬಗ್ಗೆ ನಿರ್ಧಾರಕ್ಕೆ ಬಾರದ ವಿರಾಟ್, ಕೋಚ್ ಶಾಸ್ತ್ರಿ ವಿಶ್ವಕಪ್ ಸನಿಹಕ್ಕೂ ಬಂದ್ರೂ ನಂಬರ್ ಪೋರ್ನಲ್ಲಿ ಯಾರು ಆಡೋದು ನಿರ್ಧಾರಕ್ಕೆ ಯಾರು ಬಂದಿಲ್ಲ. ಆಲ್ರೌಂಡರ್ ವಿಜಯ್ ಶಂಕರ್ ನಂ.4ನಲ್ಲಿ ಆಡೋದಾಗಿ ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಕ್ಯಾಪ್ಟನ್ ಕೊಹ್ಲಿ ಮತ್ತು ಕೋಚ್ ಶಾಸ್ತ್ರಿ ಇನ್ನು ಅಂತಿಮ ನಿರ್ಧಾರಕ್ಕೆ ಬಂದಿಲ್ಲ.
ನಮ್ಮದು ಸದೃಢ ತಂಡ. ನಮ್ಮ ಬ್ಯಾಟ್ಸ್ಮನ್ಗಳು ಯಾವ ಸ್ಲಾಟ್ನಲ್ಲಿ ಬೇಕಾದ್ರು ಆಡುತ್ತಾರೆ. ನಾವು ನಾಲ್ಕರ ಸ್ಲಾಟ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈ ಸ್ಲಾಟ್ಗೆ ಹೊಂದಿಕೊಳ್ಳುವ ಬ್ಯಾಟ್ಸಮನ್ ಬೇಕು. ಎದುರಾಳಿ, ಕಂಡೀಶನ್ ಮೇಲೆ ನಾಲ್ಕನೆ ಕ್ರಮಾಂಕದಲ್ಲಿ ಆಡುತ್ತೇವೆ ರವಿ ಶಾಸ್ತ್ರಿ ಟೀಂ ಇಂಡಿಯಾ ಕೋಚ್ ಒಟ್ಟಾರೆ ನಾಲ್ಕನೆ ಕ್ರಮಾಂಕಕ್ಕೆ ಪರಿಹಾರ ಕಂಡುಕೊಳ್ಳಬೇಕಿದ್ದ ಟೀಂಇಂಡಿಯಾ ವಿಶ್ವಕಪ್ ಬಂದ್ರೂ ಇನ್ನು ಪರಿಹಾರ ಕಂಡುಕೊಳ್ಳದೇ ಇರೋದು ನಿಜಕ್ಕೂ ವಿಪರ್ಯಾಸವೇ ಸರಿ.