ಡೆಹರಾಡೂನ್ : ಉತ್ತರಾಖಂಡದಲ್ಲಿ ಭಾರೀ ಅಂತರದ ಗೆಲುವಿನೊಂದಿಗೆ ಎಲ್ಲ ಐದು ಲೋಕಸಭಾ ಸ್ಥಾನಗಳನ್ನು ಗೆದ್ದಿರುವ ಭಾರತೀಯ ಜನತಾ ಪಕ್ಷ ಶೇ.60ಕ್ಕೂ ಮೀರಿದ ಪ್ರಮಾಣದಲ್ಲಿ ಮತ ಪಾಲನ್ನು ಪಡೆದುಕೊಂಡಿದೆ. ಇದು ಈ ರಾಜ್ಯದ ಇತಿಹಾಸದಲ್ಲೇ ಯಾವುದೇ ಒಂದು ರಾಜಕೀಯ ಪಕ್ಷಕ್ಕಿಂತಲೂ ಅತ್ಯಧಿಕ ಪ್ರಮಾಣ ವಾಗಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರಾಖಂಡದಲ್ಲಿ ಬಿಜೆಪಿಗೆ ಶೇ.55.30 ಮತಪಾಲು ಸಿಕ್ಕಿತ್ತು.
ಈ ಸಲ ಇದು ಶೇ. 61.0 ಪ್ರಮಾಣಕ್ಕೆ ಏರಿರುವುದು ಗಮನಾರ್ಹ ಸಾಧನೆ ಎಂದು ತಿಳಿಯಲಾಗಿದೆ. ಎಂದರೆ ಬಿಜೆಪಿ ತನ್ನ ಮತಪಾಲನ್ನು ಶೇ.5.70 ಪ್ರಮಾಣದಲ್ಲಿ ಹೆಚ್ಚಿಸಿಕೊಂಡಂತಾಗಿದೆ.
ಬಿಜೆಪಿಯ ಬಳಿಕದಲ್ಲಿ 2ನೇ ಸ್ಥಾನದಲ್ಲಿರುವ ಕಾಂಗ್ರೆಸ್ಗೆ ದಕ್ಕಿರುವ ಮತಪಾಲು ಶೇ.31.4; ಬಿಎಸ್ಪಿ ಯದ್ದು ಕೇವಲ ಶೇ.4.48 ಮತಪಾಲು ಎನ್ನುವಲ್ಲಿ ಬಿಜೆಪಿ ತನ್ನ ನಿಕಟ ಪ್ರತಿಸ್ಪರ್ಧಿಗಳಿಗಿಂತ ಎಷ್ಟು ಮುಂದಿದೆ ಎನ್ನುವುದು ಸ್ಪಷ್ಟವಿದೆ.