ಬೆಂಗಳೂರು, ಮೇ 23- ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲೂ ಕೊನೆಯ ಕ್ಷಣದವರೆಗೂ ಜಿದ್ದಾಜಿದ್ದಿ ಕಾಯ್ದುಗೊಂಡಿದ್ದು ಮಂಡ್ಯದ ಕಣ.
ಮೊದಲ ಸುತ್ತಿನಲ್ಲೇ ನಿಖಿಲ್ ಕುಮಾರ ಸ್ವಾಮಿ 12ಮತಗಳ ಮುನ್ನಡೆ ಸಾಧಿಸಿದ್ದು, ನಂತರ ಎಣಿಕೆಯಲ್ಲಿ ಸುಮಲತಾ 120 ಮತಗಳ ಮುನ್ನಡೆ ಸಾಧಿಸಿ ಪ್ರತಿ ಹಂತದಲ್ಲೂ 100-200 ಅಂತರದಲ್ಲೇ ಇಬ್ಬರಲ್ಲೂ ಪೈಪೋಟಿ ಏರ್ಪಟ್ಟಿತ್ತು.
ಮತ್ತೊಂದು ಹಂತದಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ ಸಾಧಿಸುತ್ತಿದ್ದರು. ಪ್ರತಿ ಹಂತದಲ್ಲೂ ಇಬ್ಬರ ನಡುವೆ 3ಸಾವಿರಕ್ಕಿಂತಲೂ ಹೆಚ್ಚಿನ ಅಂತರ ಬರಲೇ ಇಲ್ಲ, ಅಷ್ಟು ಜಿದ್ದಾಜಿದ್ದಿನ ಹೋರಾಟ ಮಂಡ್ಯದಲ್ಲಿ ನಡೆದಿತ್ತು.
ಸುಮಲತಾ ಅವರನ್ನು ಸೋಲಿಸಬೇಕೆಂದು. ಸುಮಲತಾ ಎಂಬ ಹೆಸರಿನಲ್ಲಿ ಇತರ ಮೂವರನ್ನು ಕಣಕ್ಕಿಳಿಸಲಾಗಿತ್ತು. ಆದರೆ ಅವರ್ಯಾರು 2ಸಾವಿರಕ್ಕಿಂತ ಹೆಚ್ಚಿನ ಮತ ಗಳಿಸಲಿಲ್ಲ.